Kannada NewsLatestWorld

*ಇಸ್ರೇಲ್-ಅಮೆರಿಕಾ ದಾಳಿಯಲ್ಲಿ ಇರಾನ್ ಸರ್ವೋಚ್ಚ ನಾಯಕ ಅಯತೊಲ್ಲಾ ಖಮೇನಿ ಹತ್ಯೆ*

ಪ್ರಗತಿವಾಹಿನಿ ಸುದ್ದಿ: ಇಸ್ರೇಲ್ ಹಾಗೂ ಅಮೆರಿಕಾ ಇರಾನ್ ಮೇಲೆ ನಡೆಸಿದ ದಾಳಿಯಲ್ಲಿ ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಮೃತಪಟ್ಟಿದ್ದಾರೆ.

ಇಸ್ರೇಲ್-ಅಮೇರಿಕ ಅದಾಳಿಯಲ್ಲಿ ಅಲಿ ಖಮೇನಿ ಮಾತ್ರವಲ್ಲ ಅವರ ಮಗಳಿ, ಅಳಿಯ ಮೊಮ್ಮಕ್ಕಳು ಸೇರಿ ಈಡೀ ಕುಟುಂಬವೇ ನಾಶವಾಗಿದೆ ಎಂದು ವರದಿಯಾಗಿದೆ. ಆದರೆ ಅವರ ಪುತ್ರನ ಬಗ್ಗೆ ಯಾವುದೇ ಮಾಹಿತಿ ಲವ್ಭ್ಯವಾಗಿಲ್ಲ.

Home add -Advt

ಇಸ್ರೇಲ್-ಅಮೆರಿಕಾ ದಾಳಿಯಲ್ಲಿ ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಮೃತಪಟ್ಟಿದ್ದಾರೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ. ತಮ್ಮ ಸಾಮಾಜಿಕ ಮಾಧ್ಯಮ ವೇದಿಕೆಯಾದ ಟ್ರೂತ್ ಸೋಶಿಯಲ್‌ನಲ್ಲಿ ಪೋಸ್ಟ್‌ನಲ್ಲಿ, ಅಧ್ಯಕ್ಷ ಟ್ರಂಪ್ ಖಮೇನಿ ಸಾವನ್ನಪ್ಪಿದ್ದಾರೆಂದು ಹೇಳಿಕೊಂಡಿದ್ದಾರೆ.

ಇರಾನ್ ಸರ್ವೋಚ್ಛ ನಾಯಕ ಅಲಿ ಖಮೇನಿ ಮರಣದ ಹಿನ್ನೆಲೆತ್ಯಲ್ಲಿ ಇರಾನ್ ನಲ್ಲಿ ದೇಶಾದ್ಯಂತ 40 ದಿನಗಳ ಸಾರ್ವಜನಿಕ ಶೋಕಾಚರಣೆಯನ್ನು ಘೋಷಿಸಲಾಗಿದೆ.

ಯುದ್ಧದಿಂದಾಗಿ ಮಧ್ಯಪ್ರಚ್ಯ ರಾಷ್ಟ್ರಗಳಲ್ಲಿ ಕ್ಷಣ ಕ್ಷಣಕ್ಕೂ ಆತಂಕದ ವಾತವಾರಣ ನಿರ್ಮಾಣವಾಗಿದೆ ಮಾತ್ರವಲ್ಲ, ಪಶ್ಚಿಮ ಏಷ್ಯಾ, ಗಲ್ಫ್ ಪ್ರದೇಶಗಳು ತತ್ತತಿಸಿವೆ. ಇಡೀ ವಿಶ್ವಕ್ಕೆ ಒಂದು ರೀತಿಯ ಅನಿಶ್ಚಿತತೆ ಅಪಾಯಕಾರಿ ಪರಿಸ್ಥಿತಿ ಎದುರಾಗುವ ಆತಂಕವಿದೆ.

Related Articles

Back to top button