*ದರೋಡೆಕೊರನನ್ನು ಕೇವಲ 4 ಗಂಟೆಯಲ್ಲೆ ಪತ್ತೆ ಮಾಡಿದ ಪೊಲೀಸರು*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕಬ್ಬು ಕಡಿಯುವ ಕೊಯಿತಾ ತೋರಿಸಿ ಬೈಕ್ ಅಡ್ಡಗಟ್ಟಿ ಹಣದ ಬ್ಯಾಗ್ ಹಾಗೂ ಮೊಬೈಲನ್ನು ದರೋಡೆ ಮಾಡಿಕೊಂಡು ಕಬ್ಬಿನ ಹೊಲದ ಮೂಲಕ ಪರಾರಿಯಾಗಿದ್ದ ಆರೋಪಿಯನ್ನು ಪೊಲೀರು ಬಂಧಿಸಿದ್ದಾರೆ
ಶಾಂತು ಚಂದ್ರಕಾಂತ ಅವಳೆಕರ ಎಂಬುವರು 2.81.280ರೂ ಹಣವನ್ನು ಬ್ಯಾಗನಲ್ಲಿ ಇಟ್ಟುಕೊಂಡು ತಮ್ಮ ಬೈಕ್ ಮೇಲೆ ಶಿರಗುಪ್ಪಿ ಗ್ರಾಮದ ಬಳಿಯ ಬಸವನ ಗುಡಿ ಹತ್ತಿರ ಶಿರಗುಪ್ಪಿ ಕಡೆಯಿಂದ ಉಗಾರ ಬಿ.ಕೆ ಕಡೆಗೆ ಬರುವಾಗ ಒಬ್ಬ ವ್ಯಕ್ತಿಯು ನೀಲಿ ಬಣ್ಣದ ಜಾಕೆಟ್ ಹಾಕಿಕೊಂಡು ಕಬ್ಬು ಕಡಿಯುವ ಕೊಯಿತಾ ತೋರಿಸಿ ಹಣ ಹಾಗೂ ಮೋಬೈಲ್ ದರೋಡೆ ಮಾಡಿ ಪರಾರಿಯಾಗಿದ್ದ.
ಪ್ರಕಣದ ಕುರಿತು ಮಾಹಿತಿ ಸಿಕ್ಕ ಕೂಡನೆ ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿ ತಮ್ಮ ಸಿಬ್ಬಂದಿಯೊಂದಿಗೆ ಆರೋಪಿತನಿಗೆ ಬೆನ್ನಟ್ಟಿ ಶಿರಗುಪ್ಪಿ ಗ್ರಾಮದ ಜಮೀನದಲ್ಲಿ ಅಡಗಿ ಕುಳಿತ ದರೋಡೆಕೋರನಾದ ಸಾಗರ ಅಶೋಕ ಸನದಿ (35) ಎಂಬಾತನ್ನು ಘಟನೆ ನಡೆದ 4 ಘಂಟೆಗಳ ಕಾರ್ಯಾಚರಣೆಯಲ್ಲಿ ಹಿಡಿದುಕೊಂಡು ದರೋಡೆ ಮಾಡಿದ 2.81.280ರೂ ಹಣ ಹಾಗೂ ಮೊಬೈಲನ್ನು ವಶಪಡಿಸಿಕೊಳ್ಳಲಾಗಿದೆ.

ಈ ಬಗ್ಗೆ ಕಾಗವಾಡ ಪೊಲೀಸ್ ಠಾಣೆ ಅಪರಾಧ ಸಂಖ್ಯೆ: 68/2026 ಕಲಂ: 309[4] ಬಿಎನ್‌ಸ್-2023 ನೇದ್ದರಡಿಯಲ್ಲಿ ಪ್ರಕರಣ ದಾಖಲಾಗಿದೆ.




