Kannada NewsKarnataka NewsLatest

*ಪ್ರಸಿದ್ಧ ಬನಶಂಕರಿ ದೇವಸ್ಥಾನದಲ್ಲಿ ಅನ್ನ ಪ್ರಸಾದ ವಿತರಣೆ ಬಂದ್*

ಪ್ರಗತಿವಾಹಿನಿ ಸುದ್ದಿ: ಇರಾನ್-ಇಸ್ರೇಲ್ ಯುದ್ಧದಿಂದಾಗಿ ದೇಶಾದ್ಯಂತ ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆ ಎದುರಾಗಿದ್ದು, ಹೋಟೆಲ್ ಮಾಲೀಕರು,ಆಟೋ ಚಾಲಕರು, ಜನಸಾಮಾನ್ಯರು ಸಂಕಷ್ಟಕ್ಕೀಡಾಗಿದ್ದಾರೆ. ಪ್ರಸಿದ್ಧ ದೇವಾಲಯಗಳಿಗೂ ಸಿಲಿಂಡರ್ ಸಮಸ್ಯೆ ಬಿಸಿ ತಟ್ಟಿದೆ.

ಬೆಂಗಳೂರಿನ ಪ್ರಸಿದ್ಧ ಬನಶಂಕರಿ ದೇವಾಲಯದಲ್ಲಿ ಇಂದಿನಿಂದ ಅನ್ನಪ್ರಸಾದ ಸೇವೆ ಸ್ಥಗಿತಗೊಳಿಸಲಾಗಿದೆ. ಪ್ರತಿದಿನ ಬೇಕಾದಷ್ಟು ಸಿಲಿಂಡರ್‌ಗಳು ಸಿಗದ ಕಾರಣ, ಸಾವಿರಾರು ಭಕ್ತರು ಮತ್ತು ಬಡವರಿಗೆ ಉಚಿತ ಊಟದಿಂದ ವಂಚಿತರಾಗಿದ್ದಾರೆ. ಭಕ್ತರು ಸರ್ಕಾರವು ಈ ಸಮಸ್ಯೆ ಬಗೆಹರಿಸಲು ಪರ್ಯಾಯ ವ್ಯವಸ್ಥೆ ಮಾಡುವಂತೆ ಆಗ್ರಹಿಸಿದ್ದಾರೆ.

Home add -Advt

ಹಲವಾರು ವರ್ಷಗಳಿಂದ ಬನಶಂಕರಿ ದೇವಸ್ಥಾನದಲ್ಲಿ ಅನ್ನಪ್ರಸಾದ ವಿತರಿಸಲಗುತ್ತಿತ್ತು. ಆದರೆ ಈಗ ಎಲ್ ಪಿಜಿ ಸಿಲಿಂಡರ್ ಕೊರತೆ ಎದುರಾಗಿರುವುದರಿಂದ ತಾತ್ಕಾಲಿಕವಾಗಿ ಅನ್ನಪ್ರಸಾದ ವಿತರಣೆ ಬಂದ್ ಮಾಡಲಾಗಿದೆ.

ದೇವಸ್ಥಾನದಲ್ಲಿ ನಿತ್ಯ ಬೆಳಗ್ಗೆ, ಮಧ್ಯಾಹ್ನ ಮತ್ತು ಸಂಜೆ ಭಕ್ತರಿಗೆ ಅನ್ನ ಪ್ರಸಾದ ಸಿದ್ಧಪಡಿಸಲು ಪ್ರತಿದಿನ 5 ರಿಂದ 6 ಕಮರ್ಷಿಯಲ್ ಸಿಲಿಂಡರ್‌ಗಳ ಅಗತ್ಯವಿರುತ್ತದೆ. ಸದ್ಯ ದೇವಸ್ಥಾನದಲ್ಲಿ ಕೇವಲ 4 ಸಿಲಿಂಡರ್‌ಗಳು ಮಾತ್ರ ಲಭ್ಯವಿದ್ದು, ಅವು ಇಂದಿನ ಅಡುಗೆಗೆ ಸಾಕಾಗುವುದಿಲ್ಲ. ಗ್ಯಾಸ್ ಪೂರೈಕೆಯಾಗದ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಪ್ರಸಾದ ಸೇವೆ ಬಂದ್ ಮಾಡಲಾಗಿದೆ.

ದೇವಸ್ಥಾನದಲ್ಲಿ ಪ್ರಸಾದ ಸೇವೆಯನ್ನು ನೆಚ್ಚಿಕೊಂಡಿರುವ ಸಾವಿರಾರು ಭಕ್ತರು ಮತ್ತು ಬಡವರು ಈ ನಿರ್ಧಾರದಿಂದ ತೀವ್ರ ಬೇಸರಗೊಂಡಿದ್ದಾರೆ. ಸರ್ಕಾರವು ಇಂತಹ ದೊಡ್ಡ ದೇವಸ್ಥಾನಗಳಿಗೆ ಸಿಲಿಂಡರ್ ಪೂರೈಕೆಯಲ್ಲಿ ಆದ್ಯತೆ ನೀಡಬೇಕು ಅಥವಾ ಪರ್ಯಾಯ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.


Related Articles

Back to top button