*ನಕಲಿ ನೋಟು ಚಲಾವಣೆಗೆ ಯತ್ನ: ನಾಲ್ವರು ಅರೆಸ್ಟ್*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ನಕಲಿ ನೋಟು ಚಲಾವಣೆಗೆ ಯತ್ನಿಸುತ್ತಿದ್ದ ನಾಲ್ವರನ್ನು ಬೆಳಗಾವಿಯ ಮಾರ್ಕೆಟ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಮೊಹಮ್ಮದ ಅರ್ಬಾಜ (21), ರೂಪೇಶ ಹನುಮಂತ ವಾಕೋಡೆ (26) ಮೊಹಮ್ಮದ ಹುಸೇನ ಬಕ್ಷಿ (23), ಶ್ರವಣಕುಮಾರ (25) ಎಂಬಾತರನ್ನು ಬಂಧಿಸಲಾಗಿದೆ.
ಬಂಧಿತ ಆರೋಪಿಗಳು ಖಡೇಬಜಾರ ರಸ್ತೆಯಲ್ಲಿರುವ ಅಂಗಡಿಯಲ್ಲಿ ಸಾಮಾನು ಖರೀದಿ ಮಾಡಿ 500 ರೂ. ಮುಖಬೆಲೆಯ ನೀಡುವಾಗ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಮಾರ್ಕೆಟ್ ಪೊಲೀಸ್ ಠಾಣೆಗೆ ಮಾಹಿತಿ ಪಿಐ ಜೆ. ಎಂ ಕಾಲಮಿರ್ಚಿ ಆರೋಪಿತರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.
ವಿಚಾರಣೆ ವೇಳೆ 4 ಜನ ಆರೋಪಿಗಳು ತಮ್ಮ ಬಳಿ 500 ಮುಖ ಬೆಲೆಯ ನಕಲಿ ನೋಟುಗಳನ್ನು ಚಲಾವಣೆ ಮಾಡಲು ಬಂದಿರುವ ಬಗ್ಗೆ ಒಪ್ಪಿಕೊಂಡಿದ್ದು, 500 ಮುಖಬೆಲೆಯ 495 ನಕಲಿ ನೋಟುಗಳು, ನಾಲ್ಕು ಮೋಬೈಲ್ ಹ್ಯಾಂಡಸೆಟ್ಗಳು ಮಾರುತಿ ಸುಜುಕಿ ಕಂಪನಿಯ ಸ್ವಿಪ್ಟ್ (ವಿಎಕ್ಸಐ) ಕಾರು ಜಪ್ತಿ ಮಾಡಿಕೊಂಡು ಆರೋಪಿಗಳ ವಿರುದ್ಧ ಮಾರ್ಕೆಟ್ ಪೊಲೀಸ್ ಠಾಣೆ ಪ್ರ ಸಂ. 52/2026 ಕಲಂ. 179, 180, 318(4), 3(5) ಬಿಎನ್ಎಸ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಲಾಗಿದೆ.
ಮಾಹಿತಿ ಬಂದ ತಕ್ಷಣ ಕಾರ್ಯಪ್ರವೃತ್ತರಾಗಿ ಆರೋಪಿತರನ್ನು ನಕಲಿ ನೋಟುಗಳು ಹಾಗೂ ಕೃತ್ಯಕ್ಕೆ ಬಳಸಿದ ಕಾರ ಸಮೇತ ಕೂಡಲೇ ವಶಕ್ಕೆ ಪಡೆದುಕೊಂಡು, ಅವರ ವಿರುದ್ಧ ಕಾನೂನು ಕ್ರಮ ಜರುಗಿಸಿದ ಜೆ. ಎಂ. ಕಾಲಮಿರ್ಚಿ ಸಿಬ್ಬಂದಿಯವರ ತಂಡದ ಕಾರ್ಯವನ್ನು ಪೊಲೀಸ್ ಆಯುಕ್ತರು, ಬೆಳಗಾವಿ ನಗರ ಮತ್ತು ಡಿಸಿಪಿ ರವರುಗಳು ಶ್ಲಾಘಿಸಿರುತ್ತಾರೆ.


