*ಸಂಸದ ಜಗದೀಶ್ ಶೆಟ್ಟರ್ ಗೆ ಪತ್ರ ಬರೆದ ಕೇದ್ರ ಸಚಿವ ನಿತಿನ್ ಗಡ್ಕರಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ವೆಹಿಕಲ್ ಟ್ರ್ಯಾಕಿಂಗ್ ಮ್ಯಾನೇಜಮೆಂಟ್ ಸಿಸ್ಟಮ್ (VTMS) ಅಳವಡಿಕೆ ಮಾಡುವ ಕುರಿತು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಬೆಳಗಾವಿ ಸಂಸದ ಜಗದೀಶ್ ಶೆಟ್ಟರ್ ಅವರಿಗೆ ಪತ್ರ ಬೆರೆದಿದ್ದಾರೆ
ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸುಗಳಲ್ಲಿ ವೆಹಿಕಲ್ ಟ್ರ್ಯಾಕಿಂಗ್ ಮ್ಯಾನೇಜಮೆಂಟ್ ಸಿಸ್ಟಮ್ (VTMS) ಅಳವಡಿಕೆ ಮಾಡಲು ಕೇಂದ್ರ ಸರ್ಕಾರದ (Central Assistance for Strengthening the ITS in the Public Transport System) ಯೋಜನೆಯಲ್ಲಿ ರೂ: 29.39 ಕೋಟಿ ಅನುದಾನಕ್ಕೆ ಮಂಜೂರಾತಿ ಕೋರಿ ಸಲ್ಲಿಸಿದ ಪ್ರಸ್ತಾವನೆಗೆ ಅನುಮೋದನೆಯನ್ನು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಈ ಮೊದಲು ರೂ: 63.55 ಕೋಟಿ ಸಲ್ಲಿಸಿದ ಪ್ರಸ್ತಾವನೆಗೆ ನೀಡಿದ ಅನುಮೋದನೆಗೆ ಅನುಗುಣವಾಗಿ ಇದರಲ್ಲಿ ರೂ: 33.26 ಕೋಟಿ ಮಾತ್ರ ಬಳಕೆ ಮಾಡಿದ್ದು, ಕೋವಿಡ್-19 ಕಾರಣ ತಿಳಿಸಿ ಈ ಪ್ರಸ್ತಾವನೆಯನ್ನು “ಸ್ವತ್ತುಮರುಸ್ವಾಧೀನ (foreclosure)” ಎಂದು ಪರಿಗಣಿಸಲು ಕೋರಿದ್ದು. ಆದರೆ ಈ ಯೋಜನೆಯಡಿ ಬಳಕೆ ಮಾಡಿದ ಅನುದಾನವನ್ನು ಮೂರನೆ ಪಕ್ಷದಿಂದ “ಆಡಿಟ್” ಮಾಡಿಸಿ ಅದರ ವರದಿಯನ್ನಾಧರಿಸಿ, ನೂತನ ರೂ: 29.39 ಕೋಟಿಯ ಪ್ರಸ್ತಾವನೆಗೆ ಅನುಮೋದನೆ ನೀಡುವ ಕುರಿತು ಅವಲೋಕಿಸಬಹುದಾಗಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವರಾದ ನಿತಿನ್ ಗಡ್ಕರಿ ಇವರು ಸಂಸದ ಜಗದೀಶ ಶೆಟ್ಟರ ಅವರಿಗೆ ದಿನಾಂಕ: 11-03-2026 ರಂದು ಬರೆದ ಪತ್ರಕ್ಕೆ ಉತ್ತರವನ್ನು ಪತ್ರದಲ್ಲಿ ತಿಳಿಸಿದ್ದಾರೆ.
ಸಂಸದರಾದ ಜಗದೀಶ ಶೆಟ್ಟರ್, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹೊಂದಿದ ಸುಮಾರು 5.292 ಬಸ್ಸುಗಳಲ್ಲಿ ವೆಹಿಕಲ್ ಟ್ರ್ಯಾಕಿಂಗ್ ಮ್ಯಾನೇಜಮೆಂಟ್ ಸಿಸ್ಟಮ್ (VTMS) ಅಳವವಡಿಸಲು ಅವಶ್ಯಕವಾದ ಸುಮಾರು ರೂ: 29.39 ಕೋಟಿ ಪ್ರಸ್ತಾವನೆಯನ್ನು ತಯಾರಿಸಿ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ, ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯಕ್ಕೆ ಕಳುಹಿಸಿದ್ದು, ಇದೆ ವಿಷಯವನ್ನು ಪ್ರಸ್ತಾಪಿಸಿ ಸಂಸದರು ಈ ಪ್ರಸ್ತಾವನೆಗೆ ಶೀಘ್ರ ಅನುಮೋದನೆಗೆ ಕೇಂದ್ರ ಸಚಿವರಲ್ಲಿ ಪತ್ರದ ಮುಖೇನ ವಿನಂತಿಸಿದ್ದು ಇಲ್ಲಿ ಸ್ಮರಣೀಯ.
ಆದರೆ ಕೆಲವು ವರ್ಷಗಳ ಹಿಂದೆ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ (Central Assistance for Strengthening the ITS in the Public Transport System) ಯೋಜನೆ ಅಡಿ ಪ್ರತ್ಯೇಕವಾಗಿ ರೂ: 63.55 ಕೋಟಿ ತಯಾರಿಸಿ, ವಿಟಿಎಸ್ ಅಳವಡಿಸಲು ಕೋರಿದ್ದು, ಇದಕ್ಕೆ ಒಪ್ಪಿದ ತದನಂತರ ರೂ: 33.29 ಕೋಟಿ ಇದರಲ್ಲಿ ಬಳಕೆ ಮಾಡಿ, ಕೋವಿಡ್ -19 ಕಾರಣ ತಿಳಿಸಿ ಸ್ವತ್ತುಮರುಸ್ವಾಧೀನ (foreclosure) ಕೋರಿ ಮತ್ತೊಂದು ಹೊಸ ಪ್ರಸ್ತಾವನೆಯನ್ನು ಸಲ್ಲಿಸಿದ್ದು, ಈ ಪೂರ್ವದಲ್ಲಿ ಹಿಂದನ ಸಾಲಿನ ಕಾಮಗಾರಿ ಅನುಷ್ಠಾನವನ್ನು ಬಳಕೆ ಮಾಡಿದ ಅನುದಾನದ ಬಗ್ಗೆ ಮೂರನೆ ಪಾರ್ಟಿಯಿಂದ ಆಡಿಟ್ ವರದಿ ಪಡೆದು ಈ ವರದಿಯನ್ನಾಧರಿಸಿ ನೂತನ ಪ್ರಸ್ತಾವನೆಗೆ ಒಪ್ಪಿಗೆ ನೀಡುವ ಕುರಿತು ಕಾರ್ಯದರ್ಶಿಗಳು, ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಇವರ ಅಧ್ಯಕ್ಷತೆಯಲ್ಲಿ ದಿನಾಂಕ: 05-10-2025 ನಡೆಸಿದ ಸಭೆಯಲ್ಲಿ ನಿರ್ಣಯ ಕೈಕೊಂಡಿದ್ದು ಸರಿಯಷ್ಟೆ.
ಆದರೆ, ಈ ಯೋಜನೆಯ ಫೈನಾನ್ಸಿಯಲ್ ಆಡಿಟ್ ಸರ್ಟಿಫಿಕೇಟ್ ಮಾತ್ರ ಸಲ್ಲಿಕೆಯಾಗಿರುವದು ಈ ಹಿನ್ನಲೆಯಲ್ಲಿ ನೂತನ ಪ್ರಸ್ತಾವನೆಗೆ ಅನುಮೋದನೆ ನೀಡುವ ಪೂರ್ವ ಹಿಂದಿನ ಸಾಲಿನ ಪ್ರಸ್ತಾವನೆಯ ಎಲ್ಲ ಸಂಬಂಧಿತ ವರದಿಗಳನ್ನು ಸಲ್ಲಿಸಿದ ತದನಂತರವೇ ನೂತನ ರೂ: 29.39 ಕೋಟಿ ಪ್ರಸ್ತಾವನೆಗೆ ಅನುಮೋದನೆ ನೀಡುವ ಕುರಿತು ವಿಷಯ ಪರಿಗಣಿಸಲು ಸಾಧ್ಯವೆಂದು ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವರು ತಮಗೆ ಪತ್ರ ಬರೆದಿರುವ ಬಗ್ಗೆ ಸಂಸದರಾದ ಜಗದೀಶ ಶೆಟ್ಟರ್ ಇವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




