Belagavi NewsBelgaum NewsCrimeKannada NewsKarnataka NewsLatest

*ಬೆಳಗಾವಿಯಲ್ಲಿ ಹೆಂಡತಿಯನ್ನು ನಡುರಸ್ತೆಯಲ್ಲೆ ಕೊಲೆ ಮಾಡಿದ ಪತಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಸಣ್ಣ ಕಾರಣಕ್ಕೆ ಹದಿನೈದು ವರ್ಷಗಳ ಕಾಲ ಪ್ರೀತಿಸಿ ಕುಟುಂಬಸ್ಥರ ವಿರೋಧದ ನಡುವೆಯೂ ಅಂತರ್ಜಾತಿ ಮದುವೆಯಾದ ಹೆಂಡತಿಯನ್ನೇ ಪತಿ ಕಲ್ಲಿನಿಂದ ಜಜ್ಜಿ ನಡುರಸ್ತೆಯಲ್ಲೇ ಬರ್ಬರ್ ಕೊಲೆ ಮಾಡಿರುವ ಆಘಾತಕಾರಿ ಘಟನೆ ನಡೆದಿದೆ.

ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಗೋವನಕೊಪ್ಪ ಗ್ರಾಮದಲ್ಲಿ ಕೊಲೆ ನಡೆದಿದೆ. ಶಿವಕ್ಕ ಬಸವರಾಜ್ ಜೋಡಳ್ಳಿ (33) ಕೊಲೆಯಾದ ಮಹಿಳೆ. ಬಸವರಾಜನ  ಕೊಲೆ ಮಾಡಿದ ಆರೋಪಿ. 

ಮೊದಲ ಪತಿಯ ಅಕಾಲಿಕ ಮರಣದ ನಂತರ ಶಿವಕ್ಕ ಬಸವರಾಜನನ್ನು ಪ್ರೀತಿಸಿ ರಿಜಿಸ್ಟರ್ ಮದುವೆಯಾಗಿದ್ದರು. ಆದರೆ ಕಳೆದ ಐದಾರು ವರ್ಷಗಳಿಂದ ಕುಟುಂಬದಲ್ಲಿನ ಗಲಾಟೆಗಳು ಹೆಚ್ಚಾಗಿ ಶಿವಕ್ಕ ತನ್ನಿಬ್ಬರು ಮಕ್ಕಳೊಂದಿಗೆ ನರಗುಂದದ ಮಠವೊಂದರಲ್ಲಿ ಪ್ರತ್ಯೇಕವಾಗಿ ವಾಸ ಮಾಡುತ್ತಿದ್ದರು. ಮತ್ತೊಂದೆಡೆ, ಬಸವರಾಜ ಮೊದಲ ಮಗಳನ್ನು ತನ್ನ ತಾಯಿ ಬಳಿ ಇಟ್ಟು ಡ್ರೈವರ್ ಕೆಲಸ ಮಾಡಿ ಜೀವನ ನಡೆಸುತ್ತಿದ್ದ. 

ಆರೋಪಿ ಬಸವರಾಜ ಅಪರೂಪಕ್ಕೆ ಗೋವನಕೊಪ್ಪ ಗ್ರಾಮಕ್ಕೆ ಬಂದುಹೋಗಿ ಮಾಡುತ್ತಿದ್ದನು‌. ಇತ್ತ ಶಿವಕ್ಕ ನರಗುಂದಕ್ಕೆ ಶಿಫ್ಟ್ ಆಗಿದ್ದು, ಅಲ್ಲಿಂದ ಕಳೆದ ಮೂರು ದಿನಗಳ ಹಿಂದಷ್ಟೇ ಊರಿಗೆ ಬಂದಿದ್ದಳಂತೆ. ತನ್ನ ಮೊದಲ ಹೆಣ್ಣುಮಗಳ ವಿಚಾರಕ್ಕೆ ಸಂಬಂಧಿಸಿದಂತೆ ಇಬ್ಬರ ನಡುವೆ ಮತ್ತೆ ಗಲಾಟೆ ನಡೆದಿದೆ. ತನ್ನ ತಂದೆಯ ಮನೆಯಲ್ಲಿ ವಾಸವಾಗಿದ್ದ ಶಿವಕ್ಕನನ್ನು ಹಾಸಿಗೆಯಲ್ಲಿಂದ ಎಳೆದುಕೊಂಡು ಬಂದು ನಡುರಸ್ತೆಯಲ್ಲೇ ಕಲ್ಲಿನಿಂದ ಜಜ್ಜಿ ಹಲ್ಲೆ ಮಾಡಿದ್ದಾನೆ. 

Home add -Advt

ಗಂಭೀರವಾಗಿ ಗಾಯಗೊಂಡು ತೀವ್ರ ರಕ್ತಸ್ರಾವದಿಂದ ಶಿವಕ್ಕ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಘಟನಾ ಸ್ಥಳಕ್ಕೆ ತಕ್ಷಣವೇ ದೊಡವಾಡ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಕೆಲವೇ ಗಂಟೆಗಳಲ್ಲಿ ಆರೋಪಿ ಬಸವರಾಜನನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ. ದೊಡವಾಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Related Articles

Back to top button