
ಪ್ರಗತಿವಾಹಿನಿ ಸುದ್ದಿ: ಏಪ್ರಿಲ್ 1ರಿಂದ ಹೊಸ ಹಣಕಾಸು ವರ್ಷ ಆರಂಭವಾಅಗುತ್ತಿದ್ದು, ಡಿಜಿಟಲ್ ಪೇಮೆಂಟ್ ವಿಧಾನದಲ್ಲಿ ಕೆಲ ಬದಲಾವಣೆಗಳಾಗಲಿವೆ. ಸೈಬರ್ ವಂಚನೆಯಂತಹ ವಂಚನೆ ತಪ್ಪಿಸುವ ನಿಟ್ಟಿನಲ್ಲಿ ಮಹತ್ವದ ಬದಲಾವಣೆ ಜಾರಿಗೆ ತರಲಾಗಿದೆ.
ಏಪ್ರಿಲ್ 1ರಿಂದ ಡಿಜಿಟಲ್ ಪೇಮೆಂಟ್ ಬಳಕೆಯ ಕೆಲ ನಿಯಮಗಳಲ್ಲಿ ಬದಲಾವಣೆ ಮಾಡಲಾಗುತ್ತಿದೆ. ಎಚ್ಡಿಎಫ್ಸಿ ಬ್ಯಾಂಕ್ ಸೇರಿದಂತೆ ಹಲವು ಬ್ಯಾಂಕುಗಳು ಎಟಿಎಂ ವಿತ್ಡ್ರಾಯಲ್, ಲಾಕರ್, ಎಫ್ಡಿ, ಸಾಲ ಇತ್ಯಾದಿಗಳ ದರಗಳನ್ನು ಪರಿಷ್ಕರಿಸಿವೆ. ಕೆಲ ಕ್ರೆಡಿಟ್ ಕಾರ್ಡ್ಗಳ ರಿವಾರ್ಡ್ ಪಾಯಿಂಟ್ಸ್ ನಿಯಮಗಳಲ್ಲಿ ಬದಲಾವಣೆಯಾಗಿದೆ.
ಆರ್ಬಿಐ ಮಾರ್ಗಸೂಚಿ ಪ್ರಕಾರ ಡಿಜಿಟಲ್ ಪೇಮೆಂಟ್ಸ್ ನಿಯಮಗಳಲ್ಲಿ ಏಪ್ರಿಲ್ 1ರಿಂದ ಕೆಲ ಬದಲಾವಣೆಯಾಗಲಿದೆ. ಕಾರ್ಡ್ ಪೇಮೆಂಟ್, ವ್ಯಾಲಟ್ ಪೇಮೆಂಟ್ಗಳಲ್ಲಿ ಎರಡು ಹಂತದ ದೃಢೀಕರಣ ವ್ಯವಸ್ಥೆ ಇರುತ್ತದೆ. ಒಟಿಪಿ ಜೊತೆಗೆ ಪಿನ್ ಅಥವಾ ಪಾಸ್ವರ್ಡ್ ಅಥವಾ ಬಯೋಮೆಟ್ರಿಕ್ ಅಥವಾ ಸೆಕ್ಯೂರಿಟಿ ಟೋಕನ್ಗಳನ್ನು ಸಲ್ಲಿಸುವ ಅವಶ್ಯಕತೆ ಇರುತ್ತದೆ. ಒಟಿಪಿ ಇಲ್ಲದೆಯೂ ಅಥೆಂಟಿಕೇಶನ್ ಸಾಧ್ಯ. ಪಿನ್ ಮತ್ತು ಬಯೋಮೆಟ್ರಿಕ್ ಮೂಲಕ ಟ್ರಾನ್ಸಾಕ್ಷನ್ ದೃಢೀಕರಿಸಬಹುದು. ಯಾವುದಾದರೂ ಎರಡು ಫ್ಯಾಕ್ಟರ್ ದೃಢೀಕರಣವನ್ನು ಆಯ್ದುಕೊಳ್ಳಬಹುದು ಎಂದು ತಿಳಿಸಲಾಗಿದೆ.




