Belagavi NewsBelgaum NewsKannada NewsKarnataka NewsLatest
*ಸೋಮವಾರ ರಂಗಭೂಮಿ ದಿನಾಚರಣೆ; ರಂಗಸೃಷ್ಟಿ ರಂಗಗೌರವ ಪ್ರದಾನ*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿ: ಇಲ್ಲಿಯ ರಂಗಸೃಷ್ಟಿ ಸಂಘಟನೆಯಿಂದ ರಂಗಭೂಮಿ ದಿನಾಚರಣೆ ಕಾರ್ಯಕ್ರಮ ಸೋಮವಾರ ನಡೆಯಲಿದೆ.
ಅಂದು ಸಂಜೆ 5.30ಕ್ಕೆ ಕನ್ನಡ ಸಾಹಿತ್ಯ ಭವನದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಹಿರಿಯ ರಂಗಕರ್ಮಿ ನಿರ್ಮಲಾ ಪ್ರಕಾಶ ಅವರಿಗೆ ರಂಗಸೃಷ್ಟಿಯ ಈ ವರ್ಷದ ರಂಗಗೌರವ ಪ್ರದಾನ ಮಾಡಲಾಗುವುದು.
ಹಿರಿಯ ಸಾಹಿತಿ ಎಲ್.ಎಸ್. ಶಾಸ್ತ್ರಿ ಮುಖ್ಯ ಅತಿಥಿಗಳಾಗಿ ಆಗಮಿಸುವರು. ರಂಗಸೃಷ್ಟಿಯ ಅಧ್ಯಕ್ಷ ರಮೇಶ ಜಂಗಲ್ ಅಧ್ಯಕ್ಷತೆವಹಿಸುವರು.
ಕಾರ್ಯಕ್ರಮಕ್ಕೆ ಆಸಕ್ತರು ಆಗಮಿಸಬೇಕೆಂದು ಕೋರಲಾಗಿದೆ.


