Belagavi NewsBelgaum NewsKannada NewsKarnataka News

*ಏಪ್ರಿಲ್‌ 20 ರಂದು ಬೆಳಗಾವಿಯಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ತಾಲೂಕಿನ ಚಂದನ ಹೊಸೂರ ಗ್ರಾಮದಲ್ಲಿ ಏಪ್ರಿಲ್ 20 ಮತ್ತು 21 ರಂದು ಎರಡು ದಿನಗಳ ಕಾಲ ಪಾವನಕ್ಷೇತ್ರ ಬಡೇಕೊಳ್ಳಮಠದ ಶ್ರೀ ನಾಗಯ್ಯ ಮಹಾಸ್ವಾಮಿಗಳ ನೇತೃತ್ವದಲ್ಲಿ ಬಸವ ಜಯಂತಿ ನಿಮಿತ್ತ ಕೊಳ್ಳಬಸವ ನಾಗಲಿಂಗೇಶ್ವರ ಜಾತ್ರಾ ಮಹೋತ್ಸವದಲ್ಲಿ ಸಾಮೂಹಿಕ ವಿವಾಹಗಳು ಜರುಗಲಿವೆ.

ಸೋಮವಾರ ದಿ. 20 ರಂದು ಮುಂಜಾನೆ 8 ಗಂಟೆಗೆ ವೇದಮೂರ್ತಿ ಶ್ರೀ ಮಹೇಶ ಸ್ವಾಮಿಗಳು ಇವರಿಂದ ಕೊಳ್ಳಬಸವ ನಾಗಲಿಂಗೇಶ್ವರನಿಗೆ ಅಭೀಷೇಕ ಜರುಗುವುದು. ಬಸವ ಜಯಂತಿ ಮೆರವಣಿಗೆ ಹಾಗೂ ಸಾಯಂಕಾಲ ಭಜನಾ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ.

ಮಂಗಳವಾರ ದಿ. 21 ಪ.ಪೂ ಶ್ರೀ ನಾಗಯ್ಯ ಮಹಾಸ್ವಾಮಿಗಳ ಹಾಗೂ ಶ್ರೀ ಸಿದ್ದಲಿಂಗ ದೇವರು ಹಿರೇಮಠ ಇವರ ಸಾನಿಧ್ಯದಲ್ಲಿ ಮಧ್ಯಾಹ್ನ 12 ಗಂಟೆಗೆ ಸಾಮೂಹಿಕ ವಿವಾಹಗಳು ಜರುಗವವು. 

ಸಾಮೂಹಿಕ ವಿವಾಹ ಮಾಡಿಕೊಳ್ಳುವವರು ಹೆಚ್ಚಿನ ಮಾಹಿತಿಗಾಗಿ ಮೊ.ನಂ. ೭೬೨೫೦೬೬೦೫೧, ೯೫೩೮೧೪೭೩೨೬, ೮೮೮೪೧೩೧೦೫೭, ೯೯೧೬೬೬೧೩೮೫ ಇವರನ್ನು ಸಂಪರ್ಕಿಸಲು ಶ್ರೀ ಕೊಳ್ಳಬಸವ ನಾಗಲಿಂಗೇಶ್ವರ ದೇವಸ್ಥಾನ ಅಭಿವೃದ್ದಿ ಹಾಗೂ ಸಮಾಜ ಸೇವಾ ಕಮೀಟಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Home add -Advt

Related Articles

Back to top button