Kannada NewsKarnataka NewsLatest

*ಅಕಾಲಿಕ ಮಳೆ: ಸಿಡಿಲು ಬಡಿದು ಓರ್ವ ರೈತ, 6 ಜಾನುವಾರು ಸಾವು*

ಪ್ರಗತಿವಾಹಿನಿ ಸುದ್ದಿ: ಅಕಾಲಿಕ ಮಳೆಗೆ ಗಂಗಾವತಿಯ ಜಬ್ಬಲಗುಡ್ಡದಲ್ಲಿ ಓರ್ವ ರೈತ ಸಿಡಿಲು ಬಡಿದು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ.

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಜಬ್ಬಲಗುಡ್ಡದಲ್ಲಿ ಈ ಘಟನೆ ನಡೆದಿದೆ.. ಮೃತಪಟ್ಟ ರೈತನನ್ನು ಕರಿಯಪ್ಪ ದ್ಯಾವಣ್ಣ ಮ್ಯಾದನೇರಿ (36) ಎಂದು ಗುರುತಿಸಲಾಗಿದೆ.

ರಾತ್ರಿ ಮಳೆ ಭಾರಿ ಆರಂಭವಾಗಿದ್ದು, ಹೊಲದಲ್ಲಿ ರಾಶಿ ಮಾಡಿದ್ದ ಭತ್ತದ ಕಣಜ ಹಾಳಾಗದಿರಲೆಂದು ಅದರ ಮೇಲೆ ಹೊದಿಕೆ ಹಾಕಲು ಹೋದ ಸಂದರ್ಭದಲ್ಲಿ ಸಿಡಿಲು ಬಡಿದಿದೆ. ಕರಿಯಪ್ಪ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

Home add -Advt

ಇದೇ ವೇಳೆ ಸಿದ್ದಿಕೇರಿಯಲ್ಲಿ ಕುರಿಹಟ್ಟಿಯ ಮೇಲೆ ಸಿಡಿಲು ಬಡಿದು ಆರು ಆಕಳು ಸಾವನ್ನಪ್ಪಿವೆ. ಅಲೆಮಾರಿ ಜನಾಂಗಕ್ಕೆ ಸೇರಿದ ಕುಟುಂಬಗಳು ಕುರಿ ಮತ್ತು ಆಕಳುಗಳನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಮೇಯಲು ಕರೆದುಕೊಂಡು ಹೋಗುತ್ತವೆ. ಕನಕಗಿರಿ ತಾಲೂಕಿನ ಬಂಕಾಪುರಕ್ಕೆ ಸೇರಿದ ಪಾರ್ವತಮ್ಮ ಸಣ್ಣ ಯಂಕಪ್ಪ ಬಂಡೇರ, ನಾಗೇಶ ಸಣ್ಣ ತಿಮಪ್ಪ ಬಂಡೇರ​ ಅವರಿಗೆ ಸೇರಿದ ತಲಾ ಆಕಳು ಸಾವನ್ನಪ್ಪಿವೆ.


Related Articles

Back to top button