*ರಾಜ್ಯದ ಅಭಿವೃದ್ಧಿಗೆ ಪೊಲೀಸರ ಪಾಸಿಟಿವ್ ಕೆಲಸ ಮುಖ್ಯ : ಡಾ. ಜಿ.ಪರಮೇಶ್ವರ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಪೊಲೀಸರು ಒಳ್ಳೆಯ ರೀತಿ ಕೆಲಸ ಮಾಡಿದರೆ ರಾಜ್ಯದ ಅಭಿವೃದ್ಧಿಯಾಗಲಿದೆ. ಕರ್ನಾಟಕದ ಪೊಲೀಸರು ಪಾಸಿಟಿವ್ ಆಗಿ ಕೆಲಸ ಮಾಡುತ್ತಿದ್ದಾರೆ. ಕಳೆದ ವರ್ಷ ದೇಶದಲ್ಲಿ ನ್ಯಾಯ ಕೊಡಿಸುವುದರಲ್ಲಿ ಕರ್ನಾಟಕ ಪೊಲೀಸ್ ನಂಬರ್ ಒನ್ ಸ್ಥಾನದಲ್ಲಿದೆ. ಪೊಲೀಸರು ಪ್ರಾಮಾಣಕವಾಗಿ ಅವರು ಕೆಲಸ ಮಾಡುತ್ತಿದ್ದಾರೆ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ ಹೇಳಿದರು.
ಶುಕ್ರವಾರ ಬೆಳಗಾವಿ ನಗರದಲ್ಲಿ ಪೊಲೀಸ್ ಕಟ್ಟಡಗಳ ಶಂಕು ಸ್ಥಾಪನೆ ಹಾಗೂ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಯಾವುದೇ ಸಮಾಜದಲ್ಲಿ ಘಟನೆ ನಡೆಯುತ್ತಿರುತ್ತವೆ. ಅದನ್ನು ಮೀರಿ ಪೊಲೀಸರು ಕೆಲಸ ಮಾಡುತ್ತಿದ್ದಾರೆ. ಪೊಲೀಸ್ ಠಾಣೆಗಳು ಹೈಟೆಕ್ ಆಗಿ ಕೆಲಸ ಮಾಡುತ್ತಿವೆ. ಜನ ಸ್ನೇಹಿ ಪೊಲೀಸ್ ಆಡಳಿತ ಉತ್ತಮವಾಗಿ ನಡೆಯುತ್ತಿವೆ ಎಂದರು.
ಜನರ ಸೇವೆ ಮಾಡುವ ಪೊಲೀಸರು ಇರಬೇಕು. ನಿಮ್ಮ ಶಿಸ್ತು ಮೀರಿ ಹೊಂದಾಣಿಕೆ ಮಾಡಿಕೊಳ್ಳಿ ಎನ್ನುವುದಲ್ಲ. ಕಾನೂನು ಪ್ರಕಾರ ನಿಯಮ ಪಾಲನೆ ಮಾಡಬೇಕು ಎಂದು ಸೂಚನೆ ನೀಡುತ್ತಿರುತ್ತೇವೆ ಎಂದರು.
ನಾನು ಮೂರುನೇ ಬಾರಿ ಗೃಹ ಸಚಿವನಾಗಿ ಕೆಲಸ ಮಾಡುತ್ತಿದ್ದೇನೆ. ಪೊಲೀಸರಿಗೆ ಕೊಡಬೇಕಾದ ಸೌಲಭ್ಯ ಕೊಡುವುದರಲ್ಲಿ ಹಿಂದೆ ಇಲ್ಲ. ನಮ್ಮ ಕಾರ್ಯಕ್ರಮಕ್ಕೆ ಸಾಕಷ್ಟು ಬಾರಿ ಸಿಎಂ ಸಿದ್ದರಾಮಯ್ಯ ಅನುದಾನ ಕೊಟ್ಟಿದ್ದಾರೆ ಎಂದರು.
ಮೂರು ವರ್ಷದಲ್ಲಿ ಕೋಮು ಗಲಭೆ ಆಗಿಲ್ಲ
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದು ಮೂರು ವರ್ಷವಾಗಿದೆ. ಇಲ್ಲಿಯವರೆಗೂ ಒಂದು ಕೋಮು ಗಲಭೆಯಾಗಿಲ್ಲ. ನಮ್ಮ ಪೊಲೀಸ್ ಇಲಾಖೆ ಒಳ್ಳೆಯ ರೀತಿ ಕೆಲಸ ಮಾಡುತ್ತಿವೆ.
ಡ್ರಗ್ಸ್ ವಿರುದ್ಧ ಸಮರ
ರಾಜ್ಯದಲ್ಲಿ ಬಹಳ ದೊಡ್ಡ ಪ್ರಮಾಣದಲ್ಲಿ ಡ್ರಗ್ಸ್ ತಂದು ಹಂಚುವ ಪ್ರಯತ್ನ ನಡೆದಿದೆ. ಆ ಸಂಚನ್ನು ಮಟ್ಟಹಾಕಲು ನಮ್ಮ ಸರಕಾರ ಡ್ರಗ್ಸ್ ಹಂಚುವವರು, ಸರಬರಾಜು ಮಾಡುವವರ ಮೇಲೆ ನಿರ್ದಾಕ್ಷಿಣ್ಯವಾಗಿ ಮಟ್ಟಹಾಕಲಾಗಿದೆ. ಒಂದು ವರ್ಷದಲ್ಲಿ ಸಾವಿರಾರು ಕೋಟಿ ರೂ. ಡ್ರಗ್ಸ್ ಸುಟ್ಟು ಹಾಕಿದ್ದೇವೆ. ಇದನ್ನು ಸವಾಲ್ ಆಗಿ ಸ್ವೀಕರಿಸಿ ಅದನ್ನು ಮಟ್ಟ ಹಾಕುತ್ತೇವೆ. ಸಮಾಜದ ವಿರುದ್ಧವಾಗಿ ಕೆಲಸ ಮಾಡುತ್ತಾರೆ. ಅವರ ವಿರುದ್ಧ ಮುಲ್ಲಾಜಿಲ್ಲದೆ ಕ್ರಮ ಜರುಗಿಸಲಾಗುವುದು ಎಂದರು.
ಪೊಲೀಸರು ಶಾಲಾ, ಕಾಲೇಜುಗಳಲ್ಲಿ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಾರೆ. ಡ್ರಗ್ಸ್ ವಿಚಾರದಲ್ಲಿ ನಾವು ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ ಎಂದರು. ಇತ್ತೀಚೆಗೆ ಸಾಮಾನ್ಯ ಕ್ರೈಮ್ ಕಡಿಮೆಯಾಗುತ್ತಿವೆ. ಸೈಬರ್ ಕ್ರೈಮ್ ಹೆಚ್ಚಾಗಿವೆ. ನಿವೃತ್ತ ಹೊಂದಿದವರ ಖಾತೆಯಲ್ಲಿ ನೋಡಿ ಸೈಬರ್ ವಂಚಕರು ಹೊಂಚು ಹಾಕುತ್ತಿದ್ದಾರೆ. ಅದನ್ನು ತಡೆಯವ ಪ್ರಯತ್ನ ಮಾಡುತ್ತಿದ್ದೇವೆ. ಸೈಬರ್ ಕ್ರೈಮ್ ತಡೆಯುವ ಪ್ರಯತ್ನ ನಮ್ಮ ತಂತ್ರಜ್ಞಾನದಿಂದ ತಡೆ ಹಿಡಿಯಲಾಗುತ್ತಿದೆ. ಪ್ರತಿ ಜಿಲ್ಲೆಯಲ್ಲಿ ಸೈಬರ್ ಲ್ಯಾಬ್ ಮಾಡಿ ಪ್ರತಿಯೊಬ್ಬ ಪೊಲೀಸ್ ಸಿಬ್ಬಂದಿಗಳಿಗೆ ತರಬೇತಿ ನೀಡಲು ಸೂಚನೆ ನೀಡಿದ್ದೇವೆ ಎಂದರು.
ಬೆಳಗಾವಿ ಜಿಲ್ಲೆಯಲ್ಲಿ 67.79 ಕೋಟಿ ರೂ. ಪೊಲೀಸ್ ಸಿಬ್ಬಂದಿಗಳ ಕ್ವಾರ್ಟಸ್ ನಿರ್ಮಾಣ ಮಾಡಲಾಗುತ್ತಿದೆ. ಶಹಾಪುರನಲ್ಲಿ 3.92 ಲಕ್ಷ ಕ್ವಾಟರ್ಸ್ ಅಡಿಗಲ್ಲು ಹಾಕುವ ಸಮಾರಂಭಆಯೋಜಿಸಲಾಗಿದೆ. ಕಳೆದ ಬಾರಿ ನಾನು ಬೆಳಗಾವಿ ಜಿಲ್ಲಾ ಪೊಲೀಸ್ ಹೆಡ್ ಕ್ವಾರ್ಟಸ್ ಗೆ ಭೇಟಿ ನೀಡಿದ್ದಾಗ ಪೊಲೀಸ್ ಸಿಬ್ಬಂದಿಯ ಮನೆಯವರು ಮನೆಯ ಪರಿಸ್ಥಿತಿಯ ಬಗ್ಗೆ ನನ್ನ ಗಮನಕ್ಕೆ ತಂದಿದ್ದರು. ಅದನ್ನು ಗಂಭೀರವಾಗಿ ಪರಿಗಣಿಸಿ ಪೊಲೀಸ್ ಸಿಬ್ಬಂದಿಗಳಿಗೆ ಸುಸಜ್ಜಿತವಾದ ಸುಂದರವಾದ ಮನೆಗಳನ್ನು ಪೊಲೀಸರಿಗೆ ನಿರ್ಮಾಣ ಮಾಡಿಕೊಡಲಾಗಿದೆ ಎಂದರು.
38 ಲಕ್ಷ ರೂ. ಒಂದು ಮನೆಗೆ ವೆಚ್ಚ ಮಾಡುತ್ತೇವೆ. ಪೊಲೀಸರು ಸಮಾಧಾನವಾಗಿ, ಸಂತೋಷವಾಗಿ ಅವರ ಕುಟುಂಬದ ಜೊತೆಗೆ ಜೀವನ ನಡೆಸಬಹುದು. ಪೊಲೀಸ್ ಕೆಲಸ ಮಾಡುವಾಗ ಮನೆ ಕಡೆಗೆ ಯಾವುದೇ ತೊಂದರೆ ಇಲ್ಲ ಎಂದು ಕೆಲಸ ಮಾಡಬೇಕು ಎಂದರು.
ಕಳೆದ ವರ್ಷ 2 ಸಾವಿರ ಕೋಟಿ ರೂ. ಪೊಲೀಸ್ ಮನೆಗಳ ನಿರ್ಮಾಣ ಮಾಡಲು ಅನುದಾನ ಕೊಟ್ಟಿದ್ದರು. ಕಳೆದ ವರ್ಷದಿಂದ ಹೆಚ್ಚು ಹೆಚ್ಚು ಪೊಲೀಸ್ ಇಲಾಖೆಗೆ ಸವಲತ್ತು ಕೊಡುವ ಕೆಲಸ ಮಾಡುತ್ತಿದೆ. ಪೊಲೀಸ್ ಸರಕಾರದ ಮುಖವಾಗಿ ಕೆಲಸ ಮಾಡುತ್ತದೆ ಎಂದರು.
ಗೃಹ ಸಚಿವರಗೆ ಧನ್ಯವಾದ ಹೇಳಿದ ಶಾಸಕ ಆಸೀಫ್ ಸೇಠ್

ಶಾಸಕ ಆಸೀಫ್ ಸೇರ್ ಮಾತನಾಡಿ 174 ಪೊಲೀಸ್ ಸುಸಜ್ಜಿತ ಮನೆಗಳನ್ನು ನಿರ್ಮಾಣ ಮಾಡಲಾಗಿದೆ. ಪೊಲೀಸ್ ಸಿಬ್ಬಂದಿಗಳ ಕುಟುಂಬಕ್ಕೆ ಗುಣಮಟ್ಟದ ಮನೆಗಳ ನಿರ್ಮಾಣ ಮಾಡಿದ್ದೇವೆ. ನಿರಂತರವಾಗಿ ಪೊಲೀಸರು ಹಬ್ಬ ಹರಿದಿನಗಳನ್ನು ಬಿಟ್ಟು ಸದಾ ಕೆಲಸದಲ್ಲಿಯೇ ಇರುತ್ತಾರೆ. ಗಣೇಶ ಹಬ್ಬದಂದು ಹಗಲು ರಾತ್ರಿ ಕೆಲಸ ಮಾಡುತ್ತಾರೆ. ಅವರು ಕೆಲಸ ಮಾಡಿ ಮನೆಗೆ ಬಂದರೆ ಅರಾಮವಾಗಿ ಇರಲು ಒಳ್ಳೆಯ ಮನೆ ನಿರ್ಮಾಣ ಮಾಡಿರುವುದಕ್ಕೆ ಗೃಹ ಸಚಿವರಿಗೆ ಧನ್ಯವಾದ ಹೇಳುತ್ತೇನೆ ಎಂದರು.
ಪೊಲೀಸ್ ಇಲಾಖೆಗೆ ಒಳ್ಳೆಯ ಕೆಲಸ ಮಾಡಿದರೆ ಅಲ್ಲಿ ಬಂಡಾವಳ ಹೆಚ್ಚಾಗುತ್ತದೆ. ಸಮಾಜದಲ್ಲಿ ಈ ಘಟನೆ ಆಗುವುದಿಲ್ಲ ಎಂದು ಹೇಳಲು ಸಾಧ್ಯವಿಲ್ಲ. ಅದನ್ನು ಕಡಿಮೆ ಮಾಡಿ ಜಮೀನು ವ್ಯವಹಾರ, ಕುಟುಂಬದ ವಿಚಾರಕ್ಕೆ ಕೊಲೆ ಪ್ರಕರಣಗಳು ಕಡಿಮೆಯಾಗುತ್ತಿದೆ.
ಮಹಾಂತೇಶ ಕೌಜಲಗಿ, ಜಿಪಂ ಸಿಓ ರಾಹುಲ್ ಶಿಂಧೆ, ಎಡಿಜಿಪಿ ಹಿತೇಂದ್ರ, ಐಜಿಪಿ ಡಾ. ಚೇತನಸಿಂಗ್ ರಾಥೋರ್, ನಗರ ಪೊಲೀಸ್ ಆಯುಕ್ತ ಭೂಷಣ್ ಬೊರಸೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಸೇರಿದಂತೆ ಇನ್ನಿತರರು ಉಪಸ್ಥಿತಿರಿದ್ದರು.


