Belagavi NewsBelgaum NewsKarnataka NewsLatest

*ವರದಕ್ಷಿಣೆ ಕಿರುಕುಳ, ಹಿಂಸೆ: ಮನನೊಂದ ಮಹಿಳೆ ನೇಣು ಬಿಗಿದುಕೊಂಡು ಆತ್ಮಹತ್ಯೆ*

ಪ್ರಗತಿವಾಹಿನಿ ಸುದ್ದಿ: ಪತಿ ಹಾಗೂ ಅತ್ತೆಯ ವರದಕ್ಷಿಣೆ ಇರುಕುಳ, ಹಿಂಸೆಗೆ ಮನನೊಂದ ಮಹಿಳೆ ಮನೆ ಕಿಟಕಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.

ಬೆಳಗಾವಿಯ ಎಪಿಎಂಸಿ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಶ್ರೀನಿಧಿ ಸಂತೋಷ್ ನಾವಿ (28) ಆತ್ಮಹತ್ಯೆ ಮಾಡಿಕೊಂಡ ಗೃಹಿಣಿ. ಶ್ರೀನಿಧಿ ಹಾಗೂ ಸಂತೋಷ್ 2021ರಲ್ಲಿ ಮದುವೆಯಾಗಿದ್ದರು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಆದಾಗ್ಯೂ ಪತಿ ಹಾಅಗೂ ಅತ್ತೆ, ಸಂಬಂಧಿಕರ ಹಿಂಸೆ, ವರದಕ್ಷಿಣೆಗಾಅಗಿ ಕಿರುಕುಳ ಮಾತ್ರ ನಿಂತಿರಲಿಲ್ಲ.

Home add -Advt

ತವರು ಮನೆಯವರೊಂದಿಗೆ ಮಾತನಾಡಬಾರದು ಎಂದು ಪತಿ ಸಂತೋಷ್ ಹಾಗೂ ಅತ್ತೆ ಶ್ರೀನಿಧಿಯ ಮೊಬೈಲ್ ಕೂಡ ಕಿತ್ತುಕೊಂಡಿದ್ದರಂತೆ. ಕೊಡಬಾರದ ಹಿಂಸೆತನ್ನು ಕೊಡುತ್ತಿದ್ದರಂತೆ ಇದರಿಂದ ಬೇಸತ್ತ ಶ್ರೀನಿಧಿ ಮನೆಯ ಮೊದಲ ಮಹಡಿಯಲ್ಲಿ ಕಿಟಿಕಿ ಗ್ರಿಲ್‌ಗೆ ವೇಲ್ ಬಿಗಿದುಕೊಂಡು ನೇಣಿಗೆ ಶರಣಾಗಿದ್ದಾರೆ.

ಶ್ರೀನಿಧಿ ಪೋಷಕರು ಎಪಿಎಂಸಿ ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಪತಿ ಸಂತೋಷ್ ನನು ಬಂಧಿಸಿದ್ದಾರೆ.

Related Articles

Back to top button