
ಪ್ರಗತಿವಾಹಿನಿ ಸುದ್ದಿ: ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಏರಿಳಿತ ಹಾಗೂ ಜಾಗತಿಕ ರಾಜಕೀಯ ವಿದ್ಯಮಾನಗಳ ಹಿನ್ನೆಲೆಯಲ್ಲಿ ಚಿನ್ನ ಮತ್ತು ಬೆಳ್ಳಿಯ ದರದಲ್ಲಿ ಗಣನೀಯ ಇಳಿಕೆ ಕಂಡುಬಂದಿದೆ.
ಬೆಂಗಳೂರಿನ ಮಾರುಕಟ್ಟೆಯಲ್ಲಿ ಮಂಗಳವಾತ ಸಂಜೆಯ ಬೆಲೆಗೆ ಹೋಲಿಸಿದರೆ ಬುಧವಾರ ಬೆಳಿಗ್ಗೆ ಬೆಲೆಗಳಲ್ಲಿ ಇಳಿಕೆಯಾಗಿದೆ.
24 ಕ್ಯಾರೆಟ್ (ಶುದ್ಧ ಚಿನ್ನ): ಪ್ರತಿ 10 ಗ್ರಾಂಗೆ 54 ರೂ. ಇಳಿಕೆಯಾಗಿ 1,54,750 ರೂ. ಗೆ ತಲುಪಿದೆ. (ಪ್ರತಿ ಗ್ರಾಂಗೆ ಬೆಲೆ 15,475 ರೂ)
22 ಕ್ಯಾರೆಟ್ (ಆಭರಣ ಚಿನ್ನ: ಪ್ರತಿ 10 ಗ್ರಾಂಗೆ 50 ರೂ. ಇಳಿಕೆಯಾಗಿ 1,41,850 ರೂ. ತಲುಪಿದೆ. (ಪ್ರತಿ ಗ್ರಾಂಗೆ ಬೆಲೆ 14,185 ರೂ.)
18 ಕ್ಯಾರೆಟ್ ಚಿನ್ನ: ಪ್ರತಿ 10 ಗ್ರಾಂಗೆ 41 ರೂ. ಕುಸಿದು 1,16,060 ರೂ. ಗೆ ಬಂದು ನಿಂತಿದೆ.
ಬೆಳ್ಳಿಯ ದರದಲ್ಲಿ ಸ್ಥಿರತೆ
ಕಳೆದ ಶನಿವಾರ ಬೆಳ್ಳಿಯ ದರವು ಪ್ರತಿ ಕೆಜಿಗೆ 2,75,000 ರೂ.ಗೆ ಏರಿಕೆಯಾಗಿತ್ತು. ಆದರೆ, ಮಂಗಳವಾರ 10 ರೂ.ಗಳಷ್ಟು ಅಲ್ಪ ಕುಸಿತ ಕಂಡುಬಂದಿದ್ದು ಇಂದು (ಬುಧವಾರ) ಪ್ರತಿ ಕೆಜಿಗೆ 2,65,000 ರೂ. ನೊಂದಿಗೆ ಸ್ಥಿರತೆ ಕಾಯ್ದುಕೊಂಡಿದೆ.



