Kannada NewsKarnataka NewsLatest

*ಸಹಕಾರ ಕ್ಷೇತ್ರ: ಕೂತವನದ್ದೇ ಖುರ್ಚಿ, ಒದ್ದವನದ್ದೇ ಚೆಂಡು*

 *ರೈತರ ಬೆಳವಣಿಗೆಗೆ ಸಹಕಾರ ಇಲಾಖೆ ಕಾರ್ಯ ನಿರ್ವಹಿಸಬೇಕು*

*ಯಾವ ಕ್ಷೇತ್ರವೂ  ಸಹಕಾರ ಕ್ಷೇತ್ರದಿಂದ ಹೊರತಾಗಿರಲು ಸಾಧ್ಯವಿಲ್ಲ*:*ಮುಖ್ಯಮಂತ್ರಿ ಸಿದ್ದರಾಮಯ್ಯ*  

ಬೆಂಗಳೂರು :  ಯಾವ ಕ್ಷೇತ್ರವೂ  ಸಹಕಾರ ಕ್ಷೇತ್ರದಿಂದ ಹೊರತಾಗಿರಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಅವರು ಇಂದು “ಕರ್ನಾಟಕ ರಾಜ್ಯ ಸಹಕಾರ ಸಂಘಗಳ ನಿಬಂಧಕರ ನೂತನ ಆಡಳಿತ ಕಚೇರಿ ‘ಸಹಕಾರ ಸಮೃದ್ಧಿ ಸೌಧ’ವನ್ನು” ಲೋಕಾರ್ಪಣೆಗೊಳಿಸಿ ಮಾತನಾಡಿದರು.

Home add -Advt

2023 ರಲ್ಲಿ ಕಟ್ಟಡಕ್ಕೆ ಭೂಮಿ ಪೂಜೆಯನ್ನು ತಾವೇ ನೆರವೇರಿಸಿದ್ದು, ಮೂರು ವರ್ಷಗಳಲ್ಲಿ 19.43 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದೆ ಎನ್ನುವುದು ಸಂತಸದ ವಿಚಾರ ಎಂದರು.  

 ನೆಹರೂ ಅವರು ಪ್ರಧಾನಿಗಳಾಗಿದ್ದ ಸಂದರ್ಭದಲ್ಲಿ ಒಂದು ಊರಿನಲ್ಲಿ ಒಂದು ಶಾಲೆ,ಪಂಚಾಯತಿ ಮತ್ತು ಸಹಕಾರ ಸಂಘ ಇರಲೇಬೇಕು. ಆಗ ಮಾತ್ರ ಆ ಊರಿನ ಸರ್ವತೋಮುಖ ಅಭಿವೃದ್ಧಿ ಸಾಧ್ಯ ಎಂದಿದ್ದರು. ಪ್ರಸ್ತುತ ಹಾಲಿನ ಸೊಸೈಟಿಗಳಾದ ನಂತರ  ಪ್ರತಿ ಊರಿನಲ್ಲಿ ಇದು ಸಾಧ್ಯವಾಗಿದೆ ಎಂದರು. 

*ರೈತರ ಬೆಳವಣಿಗೆಗೆ ಸಹಕಾರ ಇಲಾಖೆ ಕಾರ್ಯ ನಿರ್ವಹಿಸಬೇಕು*. 

“ಎಲ್ಲರಿಗಾಗಿ ನಾನು, ನನಗಾಗಿ ಎಲ್ಲರೂ ಎಂಬ ಸಹಕಾರಿ ತತ್ವದಡಿ        ರಾಜ್ಯ ಅಭಿವೃದ್ಧಿಯಾಗುತ್ತಿದೆ” ಎಂದ ಮುಖ್ಯಮಂತ್ರಿಗಳು.  ರೈತರ ಬೆಳವಣಿಗೆಗೆ ಸಹಕಾರ ಇಲಾಖೆ ಕಾರ್ಯ ನಿರ್ವಹಿಸಬೇಕು. ಶೇ 60% ಜನ ಗ್ರಾಮೀಣ ಭಾಗದಲ್ಲಿ ವಾಸಿಸುತ್ತಿದ್ದು, ಗ್ರಾಮದ ಜನರಿಗೆ ಅಗತ್ಯ ಸೌಲಭ್ಯಗಳನ್ನು ಸಹಕಾರಿ ಸಂಘಗಳ ಮೂಲಕ ನೀಡಲಾಗುತ್ತಿದೆ. 

*ಉತ್ತರ ಕರ್ನಾಟಕದಲ್ಲಿ ಹಾಲು ಉತ್ಪಾದನೆ ಹೆಚ್ಚಾಗಬೇಕು*

ಹಾಲಿನ ಸೊಸೈಟಿಗಳು ಬಂದ ನಂತರ ರೈತರ ಪರಿಸ್ಥಿತಿ ಉತ್ತಮವಾಗಿದ್ದು  ಒಂದು ಕೋಟಿ ಲೀಟರ್ ಹಾಲು ದಿನವೊಂದಕ್ಕೆ ಉತ್ಪಾದನೆಯಾಗುತ್ತಿದೆ. ಉತ್ತರ ಕರ್ನಾಟಕದಲ್ಲಿ ಹಾಲು ಉತ್ಪಾದನೆ ಹೆಚ್ಚಾಗಬೇಕು. ಅತ್ಯಂತ ಲಾಭದಾಯಕವಾದ  ಉಪಕಸುಬಾಗಿ ಸಹಕಾರ ಕ್ಷೇತ್ರದಿಂದ ಸಾಧ್ಯವಾಗಿದೆ ಎಂದರು. 

ಹಿಂದೆ  ತಾವು ಸಹಕಾರ ಸಚಿವರಾಗಿದ್ದ ಸಂದರ್ಭದಲ್ಲಿ ಹಾಲು ಒಕ್ಕೂಟಗಳನ್ನು ಹಾಲು  ಡೈರಿಯೊಂದಿಗೆ  ಸೇರ್ಪಡೆ ಮಾಡಲಾಯಿತು. ಇದರಿಂದ ಹಾಲು ಉತ್ಪಾದನೆ ಹೆಚ್ಚಾಗಲು ಸಾಧ್ಯವಾಯಿತು ಎಂದರು. 

ಸಹಕಾರ ಸೌಧದಲ್ಲಿ ಸೇವೆ ಉತ್ತಮವಾಗಿರಲಿ ಎಂದು ಸಿಎಂ ಸೂಚಿಸಿದರು.

ಉಪಮುಖ್ಯಮಂತ್ರಿ ಡಿ. ಕೆ.  ಶಿವಕುಮಾರ್, ಸಚಿವರಾದ ಹೆಚ್ ಕೆ ಪಾಟೀಲ್, ಶಾಸಕ ರಿಜ್ವಾನ್ ಅರ್ಷದ್, ಮೇಲ್ಮನೆ ಸದಸ್ಯೆ ಶ್ರೀಮತಿ ಬಿಲ್ಕಿಸ್ ಬಾನು, ಸಹಕಾರ ಇಲಾಖೆ ಕಾರ್ಯದರ್ಶಿಗಳು, ಇಲಾಖೆಯ ನಿಬಂಧಕರಾದ   ಕಾಂತರಾಜು, ಮೊದಲಾದವರು ಉಪಸ್ಥಿತರಿದ್ದರು.

—-

 *ಹೊಸ ಹಾಗೂ ಯುವ ನಾಯಕರನ್ನು ಹುಟ್ಟು ಹಾಕುವ ಸಂಘಟನೆ ಸಹಕಾರ ಕ್ಷೇತ್ರ: ಡಿಸಿಎಂ ಡಿ.ಕೆ. ಶಿವಕುಮಾರ್*

*ಕೂತವನದ್ದೇ ಖುರ್ಚಿ, ಒದ್ದವನದ್ದೇ ಚೆಂಡು*

*ಪರ್ಯಾಯ ಉದ್ಯೋಗ ಕ್ಷೇತ್ರ*

“ಹೊಸ ಹಾಗೂ ಯುವ ನಾಯಕರನ್ನು ಹುಟ್ಟುಹಾಕುವ ಪ್ರಾಥಮಿಕ ಸಂಘಟನೆ ಸಹಕಾರ ಕ್ಷೇತ್ರ. ಇದೊಂದು ರಾಜಕೀಯ ಸಂಘಟನೆ. ನಾಯಕರನ್ನು ಹುಟ್ಟು ಹಾಕುವ ಶಕ್ತಿಯಿದೆ, ಎಳೆದು ಹಾಕುವ ಶಕ್ತಿಯೂ ಇದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಹೇಳಿದರು.

ಬೆಂಗಳೂರಿನಲ್ಲಿ ಸಹಕಾರ ಸಂಘಗಳ ನಿಬಂಧಕರ ನೂತನ ಆಡಳಿತ ಕಚೇರಿ “ಸಹಕಾರ ಸಮೃದ್ಧಿ ಸೌಧ” ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಶುಕ್ರವಾರ ಮಾತನಾಡಿದರು.

“ವಿಎಸ್ ಎಸ್ ಎನ್ ಎಲ್, ಹಾಲು ಉತ್ಪಾದಕರ ಸಹಕಾರ ಸಂಘ ಸೇರಿದಂತೆ ಅನೇಕ ಸಹಕಾರಿ ಸಂಘದಲ್ಲಿ ಬೆಳೆದು ಶಾಸಕರಾಗಿ, ರಾಷ್ಟ್ರಮಟ್ಟದ ನಾಯಕರಾಗಿ ಬೆಳೆದಿದ್ದಾರೆ” ಎಂದು ಹೇಳಿದರು.

*ಕೂತವನದ್ದೇ ಖುರ್ಚಿ, ಒದ್ದವನದ್ದೇ ಚೆಂಡು*

“ಸಹಕಾರ ಕ್ಷೇತ್ರ ಎಂದರೆ ಕೂತವನದ್ದೇ ಖುರ್ಚಿ, ಒದ್ದವನದ್ದೇ ಚೆಂಡು. ಅಂದರೆ ಯಾರನ್ನೂ ಬಿಡಿಸಲು ಆಗುವುದಿಲ್ಲ. ನಾನು ರಾಜಕೀಯದವರ ಕಥೆ ಹೇಳುತ್ತಿದ್ದೇನೆ. ಮಾಧ್ಯಮದವರು ನೀವು ಇರುತ್ತೀರಿ ಕೆಲಸ ಮಾಡಿಕೊಂಡು ಹೋಗುತ್ತೀರಿ” ಎಂದು ಹೇಳಿದರು.

“ಎಚ್ ಕೆ ಪಾಟೀಲ್ ಅವರು ಸಹಕಾರಿ ಫೆಡರೇಶನ್ ಅಲ್ಲಿ ಕಳೆದ 40- 45 ಗಳಿಂದ ಖುರ್ಚಿಯಲ್ಲಿ ಕುಳಿತಿದ್ದಾರೆ. ನಾನು ಕಾಲೇಜು ವಿದ್ಯಾರ್ಥಿಯಾಗಿದ್ದೆ. ಆಗ ರಾಮಕೃಷ್ಣ ಹೆಗಡೆಯವರು ಮುಖ್ಯಮಂತ್ರಿಯಾಗಿದ್ದರು. ಜನರಲ್ ಸ್ಥಾನಕ್ಕೆ ನನ್ನನ್ನು ಟಿಎಪಿಸಿಎಂಎಸ್ ಚುನಾವಣೆಗೆ ನಿಲ್ಲಿಸಿದ್ದರು. ನಾನು ನಿರ್ದೇಶಕನಾಗಿದ್ದೆ. ಇದಾದ ನಂತರ ಸಹಕಾರ ಮಂತ್ರಿಯಾಗಿದ್ದೆ. ಅಲ್ಲಿಂದ ಇಲ್ಲಿಯ ತನಕ ಬೆಳೆದಿದ್ದೇನೆ” ಎಂದರು.

“ಹಾಲು ಸಹಕಾರ ಸಂಘದ ಚುನಾವಣೆ ವೇಳೆ ಒಂದು ಮತದಿಂದ ಸೋತ ಅಭ್ಯರ್ಥಿಯೊಬ್ಬ ಮತಪತ್ರವನ್ನೇ ನುಂಗಿದ್ದ. ಈಗ ಚುನಾವಣೆ ನಡೆಸಲು ಹೊಸ ಅಥಾರಿಟಿ ಮಾಡಲಾಗಿದೆ, ನೂತನ ಗೈಡ್ ಲೈನ್ ಬಂದಿದೆ” ಎಂದರು.

*ಪರ್ಯಾಯ ಉದ್ಯೋಗ ಕ್ಷೇತ್ರ*

“ಸಹಕಾರಿ ಕ್ಷೇತ್ರದಿಂದ ಪರ್ಯಾಯವಾಗಿ ಉದ್ಯೋಗ ಸೃಷ್ಟಿಯಾಗಿದೆ. ಆರ್ಥಿಕ ಸ್ವಾತಂತ್ರ್ಯ ಬಂದಿದೆ. ಸಹಕಾರಿ ಬ್ಯಾಂಕ್ ಗಳಲ್ಲಿ ರಾಷ್ಟ್ರೀಯ ಬ್ಯಾಂಕ್ ಗಳಿಗಿಂತ ತ್ವರಿತವಾಗಿ ಜನಸಾಮಾನ್ಯರಿಗೆ ಸಾಲ ದೊರೆಯುತ್ತದೆ. ಡಿಸಿಸಿ ಬ್ಯಾಂಕ್ ಇದ್ದ ಕಾರಣಕ್ಕೆ 25 ಕ್ಕೂ ಹೆಚ್ಚು ಸಕ್ಕರೆ ಕಾರ್ಖಾನೆಗಳು ಬೆಳೆದಿವೆ. ಇದರಿಂದ ರೈತ ಬೆಳೆದಿದ್ದಾನೆ” ಎಂದರು.

“ಒಂದು ಲೀಟರ್ ನೀರಿನ ಬೆಲೆ 28-30 ರೂಪಾಯಿ ಆಗಿದೆ. ಹಾಲಿನ ಬೆಲೆ 40 ರೂಪಾಯಿ ಆಗಿದೆ. ನಾವು ಈ ಕ್ಷೇತ್ರದಲ್ಲಿ ದೊಡ್ಡ ಕ್ರಾಂತಿ ಮಾಡಿದ್ದೇವೆ” ಎಂದರು‌.

“5 ಲಕ್ಷದ ವರೆಗೆ ಶೂನ್ಯ ಬಡ್ಡಿದರದಲ್ಲಿ  ಸಾಲ ನೀಡಲಾಗುತ್ತಿದೆ. ವಿಎಸ್ ಎಸ್ ಎನ್ ಎಲ್ ಅಲ್ಲಿ ಇರುವ ಕಾರ್ಯದರ್ಶಿಗಳು ಪ್ರಭಾವ ಇರುವವರಿಗೆ ಸಾಲ ನೀಡಿ ಮಿಕ್ಕ ಹಣವನ್ನು ಅವರವರ ಹೆಸರಿಗೆ ಮಾಡಿಕೊಳ್ಳುತ್ತಾರೆ. ಅದನ್ನು ಎರಡು ಪರ್ಸೆಂಟ್ ಸೇರಿದಂತೆ ಹೆಚ್ಚಿನ ಹಣಕ್ಕೆ ಬಡ್ಡಿಗೆ ಬಿಡುತ್ತಾರೆ. ಇದು ರೈತರಿಗೆ ಗೊತ್ತಾಗುವುದಿಲ್ಲ. ಅನೇಕರು ಆತ್ಮಹತ್ಯೆ ಮಾಡಿಕೊಂಡ ಉದಾಹರಣೆಯೂ ಇದೆ. ಇದರ ಬಗ್ಗೆ ಮುಖ್ಯಮಂತ್ರಿಯವರು ಗಮನಹರಿಸಬೇಕು” ಎಂದರು.

“ವಿಎಸ್ ಎಸ್ ಎನ್ ಎಲ್ ಅಲ್ಲಿರುವ ಡಿಆರ್, ಜೆಆರ್ ಗಳು ಇದರ ಬಗ್ಗೆ ಸೂಕ್ಷ್ಮವಾಗಿ ಇರಬೇಕು. ಮಂತ್ರಿಗಳಿಗಿಂತ ಈ ಸಂಘದ ಕಾರ್ಯದರ್ಶಿಗಳೇ ದೊಡ್ಡದಾಗಿ ಮನೆ ಕಟ್ಟಿಕೊಂಡು ಇರುತ್ತಾರೆ. ಹಾಲಿನ ಸಂಘದವರು ಸಹ ಹಾಲಿನ ಅಳತೆ, ಕೊಬ್ಬಿನ ಅಂಶ ವಿಚಾರದಲ್ಲಿ ಮೋಸ ಮಾಡಲಾಗುತ್ತಿದೆ. ನೇಕಾರರ ಸಂಘಗಳು ನಷ್ಟದಲ್ಲಿದ್ದ ಕಾರಣಕ್ಕೆ ಅನೇಕ ಸಂಘಗಳು ಮುಚ್ಚಿ ಹೋದವು” ಎಂದರು.

“ಬ್ಲಡ್ ಮತ್ತು ದುಡ್ಡು ಎರಡೂ ಚಲನೆಯಲ್ಲಿರಬೇಕು ಎಂದು ಸಾಯಿಬಾಬಾ ಅವರು ಹೇಳ್ತಾ ಇದ್ದರು. ದುಡ್ಡು ಸಂಗ್ರಹವಾದರೆ ಐಟಿ, ಇಡಿಯವರು ಬರುತ್ತಾರೆ. ರಕ್ತ ಚಲಿಸದಿದ್ದರೆ ಬಿಪಿ, ಶುಗರ್ ಬಂದು ಬಿಡುತ್ತದೆ. ಅದೇ ರೀತಿ ಸಮಾಜದಲ್ಲಿ ಹಣ ಚಲಾವಣೆಯಲ್ಲಿ ಇರಬೇಕಾದರೆ ಸಹಕಾರಿ ಸಂಘಗಳು ಚೆನ್ನಾಗಿರಬೇಕು” ಎಂದರು.

“ಸಹಕಾರಿ ಸಂಘಗಳು ನಡೆಯುವುದೇ ನಂಬಿಕೆ ಮೇಲೆ. ರಾಘವೇಂದ್ರ ಸಹಕಾರಿ ಬ್ಯಾಂಕ್ ಅಲ್ಲಿ ಕೋಟ್ಯಂತರ ಅವ್ಯವಹಾರ ಆಗಿದೆ. ಅಲ್ಲಿನ ನಾಯಕರು ಮಾತೆತ್ತಿದರೆ ದೇವರು ಎಂದು ಮಾತನಾಡುತ್ತಾರೆ. ಸಾವಿರಾರು ಜನರಿಗೆ ತೊಂದರೆಯಾಯಿತು. ಇಂತಹ ಕಡೆ ಅಧಿಕಾರಿಗಳು ಗಮನವಿಡಬೇಕು” ಎಂದರು. 

“ರೆಹಮಾನ್ ಖಾನ್ ಅವರ ಮಾತಿನ ಮೇಲೆ ಅಮಾನತ್ ಸಹಕಾರಿ ಬ್ಯಾಂಕ್ ಅನ್ನು ಸೆಡ್ಯೂಲ್ಡ್ ಬ್ಯಾಂಕ್ ಎಂದು ಮಾಡಲಾಯಿತು. ಆದರೆ ಅಲ್ಲಿಯೂ ಸಹ ಅನ್ಯಾಯವಾಯಿತು. ಕಳಂಕ ಉಂಟಾಯಿತು. ನಿಬಂಧಕರು ಜನರ ಪರವಾಗಿ ಕೆಲಸ ಮಾಡಬೇಕು. ಇಂತಹ ಮೋಸಗಳು ಕಂಡು ಬಂದರೆ ಸರ್ಕಾರದ ಗಮನಕ್ಕೆ ತರಬೇಕು. ರಿಜರ್ವ್ ಬ್ಯಾಂಕ್ ಗಮನಕ್ಕೆ ತರಬೇಕು” ಎಂದರು.

“ಸಹಕಾರಿ ನಿಬಂದಕರಲ್ಲಿ ಕೆಲವರು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದಾರೆ. ಈಗ ಶಾಸಕರೇ ಸಹಕಾರಿ ಸಂಘಗಳ ನಿರ್ದೇಶಕರಾಗುತ್ತಿದ್ದಾರೆ. ಶಾಸಕರಾಗಿದ್ದರೂ ಸ್ಥಾನ ಬಿಡುತ್ತಿಲ್ಲ. ಡಿಸಿಸಿ ಬ್ಯಾಂಕ್ ಅಧ್ಯಕ್ಷರೂ ಆಗುತ್ತಿದ್ದಾರೆ” ಎಂದು ತಿಳಿಸಿದರು.

“ಈ ಹಿಂದೆ ನಾನು ಸಚಿವನಾಗಿದ್ದಾಗ ಹಳೆ ಕಟ್ಟಡದ ಜಾಗದಲ್ಲಿ ಹೊಸ ಕಟ್ಟಡ ಕಟ್ಟಬೇಕು ಎಂದು ಯೋಜನೆ ಹಾಕಿದ್ದೆ. ಆದರೆ ಪಾರಂಪರಿಕ ಕಟ್ಟಡ ಎಂದು ಘೋಷಣೆ ಆದ ಕಾರಣಕ್ಕೆ ಸಾಧ್ಯವಾಗಲಿಲ್ಲ. ಈಗ ಸಿದ್ದರಾಮಯ್ಯ ಅವರ ಕಾಲದಲ್ಲಿ ಕಾರಣವಾಗಿದೆ” ಎಂದರು.

Cooperative sector produces new and young leaders: DCM D K Shivakumar

The chair belongs to whoever sits on it, the ball belongs to whoever kicks it

Bengaluru, May 8:
Deputy Chief Minister D K Shivakumar today said Cooperative sector has the power to produce new leaders as well as the power to pull down leaders if need be.
Speaking after inaugurating the new administrative office ‘Sahakara Samruddhi Soudha’ which will house the Registrar of Cooperative Societies, he said, “Many people who grew through cooperative societies, including VSSNL and milk producers’ cooperative societies, have risen to become MLAs and national-level leaders.”

“The chair belongs to whoever sits on it, the ball belongs to whoever kicks it”
“The cooperative sector is such that the chair belongs to whoever sits in it, and the ball belongs to whoever kicks it — meaning no one can be easily removed. I am talking about people in politics. You in the media will be there, doing your work,” he said.
“H K Patil has been sitting in the chair of the Cooperative Federation for the past 40–45 years. I was a college student then. At that time, Ramakrishna Hegde was the Chief Minister. I was fielded for a general seat in the TAPCMS election. I was a director. After that I became the Cooperation Minister. From there I have grown to where I am today,” he said.

An alternative employment sector
“The cooperative sector has created employment. Economic freedom has been achieved. Cooperative banks provide loans to common people faster than national banks. Because of DCC Banks, more than 25 sugar factories have grown. Farmers have benefited from this,” he said.

“The price of one litre of water has become ₹28–30 but the price of milk is ₹40. We have brought about a great revolution in this sector,” he said.

“Sai Baba used to say that both blood and money must keep flowing. If money accumulates, the IT and ED authorities will come. If blood doesn’t flow, BP and diabetes will set in. Similarly, for money to circulate in society, cooperative societies must function well,” he said.

“Cooperative societies run on trust. Crores of rupees of fraud has taken place in Raghavendra Cooperative Bank. The leaders there speak of God whenever they open their mouths. Thousands of people were harmed. Officers must keep a close watch on such places,” he said.

“Earlier, when I was a minister, I had planned to construct a new building in place of the old one. But since it was declared a heritage building, it was not possible. Now it has come to fruition during Siddaramaiah’s tenure,” he said.

Related Articles

Back to top button