
ಪ್ರಗತಿವಾಹಿನಿ ಸುದ್ದಿ: ಬಿಟ್ ಕಾಯಿನ್ ಹಗರಣಕ್ಕೆ ಸಂಬಂಧಿಸಿದಂತೆ ತನಿಖೆ ಮುಂದುವರೆಸಿರುವ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ಸೇರಿದಂತೆ ಮೂವರನ್ನು ಬಂಧಿಸಿದ್ದಾರೆ.
ಬಿಟ್ ಕಾಯಿನ್ ಹಗರಣದಲ್ಲಿ ಇದಿಗ ಶ್ರೀಕಿ ಸೇರಿದಂತೆ ಮೂವರನ್ನು ಬಂಧಿಸಿದೆ. ಏಪ್ರಿಲ್ 20ರಂದು ಶ್ರೀಕಿ, ಕಾಂಗ್ರೆಸ್ ಮುಖಂಡ ಮೊಹಮ್ಮದ್ ನಲಪಾಡ್, ಕೇಂದ್ರ ಮಾಜಿ ಸಚಿವ ರೆಹಮಾನ್ ಖಾನ್ ಮೊಮ್ಮಗ ಹಕೀಬ್ ನಿವಾಸ ಸೇರಿದಂತೆ 12 ಕಡೆಗಳಲ್ಲಿ ಇಡಿ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದರು.
ಇದೀಗ ಶ್ರೀಕಿ ಬಂಧನದ ಬೆನ್ನಲ್ಲೇ ಮೊಹಮ್ಮದ್ ನಲಪಾಅಡ್ ಗೂ ಸಂಕಷ್ಟ ಎದುರಾಗಿದೆ. ಶ್ರೀಕಿ ಸೇರಿದಂತೆ ಇತರೆ ಆರೋಪಿಗಳ ಜೊತೆ ಮೊಹಮ್ಮದ್ ನಲಪಾಡ್ ಸಂಪರ್ಕದಲ್ಲಿರುವ ಆರೋಪ ಕೇಳಿಬಂದಿರುವ ಹಿನ್ನೆಲೆಯಲ್ಲಿ ಇಡಿ ಅಧಿಕಾರಿಗಳು ನಲಪಾಡ್ ಪಾತ್ರದ ಬಗ್ಗೆ ತನಿಖೆ ಮುಂದುವರೆಸಿದ್ದಾರೆ.



