Belagavi NewsBelgaum NewsKarnataka NewsLatest

*ಅಧಿಕ ಜೇಷ್ಠ ಮಾಸ/ ಪುರುಷೋತ್ತಮ ಮಾಸದ ನಿಮಿತ್ತ 33 ಪವಮಾನ ಹೋಮ*

ಪ್ರಗತಿವಾಹಿನಿ ಸುದ್ದಿ: ಶ್ರೀ ಶ್ರೀ 1008 ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳವರ ಆದೇಶದಂತೆ ಈ ಬಾರಿ ವಿಶ್ವಮಧ್ವ ಮಹಾ ಪರಿಷತ್ ಬೆಳಗಾವಿ ಘಟಕದ ವತಿಯಿಂದ ಮೇ 17 ರಿಂದ ಜೂನ್15 ರವರೆಗೆ ಅಧಿಕ ಜೇಷ್ಠ ಮಾಸ /ಪುರುಷೋತ್ತಮ ಮಾಸದ ನಿಮಿತ್ತ ಶ್ರೀಸತ್ಯಪ್ರಮೋದ ಸಭಾಗೃಹ ರಾಣಿ ಚೆನ್ನಮ್ಮ ನಗರದಲ್ಲಿ ಒಂದು ತಿಂಗಳ ಕಾಲ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ.

Home add -Advt


ಈ ಅಧಿಕಮಾಸವು ಪ್ರತಿ ಮೂರು ವರ್ಷಕ್ಕೊಮ್ಮೆ ಬರುವುದರಿಂದ ಪುರುಷೋತ್ತಮನ ಪ್ರೀತ್ಯರ್ಥವಾಗಿ ಮಾಡುವ ಪ್ರತಿಯೊಂದು ಧಾನ ಧರ್ಮವು ಅಧಿಕ ಫಲವನ್ನು ಕೊಡುತ್ತದೆ.


ವಿಶೇಷವಾಗಿ ಮೇ 31 ರವಿವಾರ ಕಾರ ಹುಣ್ಣಿಮೆ ದಿನದಂದು 33 ಕುಂಡಗಳಲ್ಲಿ ಪವಮಾನ ಹೋಮವನ್ನು ಮಾಡಲು ಸಂಕಲ್ಪಿಸಲಾಗಿದೆ. ದಂಪತಿಗಳು ಸ್ವಯಂ ತಾವೇ ಕುಳಿತುಕೊಂಡು ಈ ಹೋಮವನ್ನು ಮಾಡಬಹುದು.


ಜೊತೆಗೆ ಶ್ರೀಮದ್ಭಾಗವತ ಉಪನ್ಯಾಸ ದೇವರ ಪೂಜೆ ನೈವೇದ್ಯ ಹಾಗೂ ತೀರ್ಥ ಪ್ರಸಾದ ಇತ್ಯಾದಿ ಎಲ್ಲಾ ವ್ಯವಸ್ಥೆಗಳನ್ನು ಕೂಡಾ ಮಾಡಲಾಗಿದೆ.

ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಇದರ ಸದುಪಯೋಗ ಪಡಿಸಿಕೊಳ್ಳಬೇಕೆಂದು ವಿಶ್ವಮಧ್ವ ಮಹಾಪರಿಷತ್ ಬೆಳಗಾವಿ ಘಟಕ ವಿನಂತಿಸಿದೆ

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ….
ಜಯತೀರ್ಥ ಸವದತ್ತಿ …9243220108,
9113917712
ಶ್ರೀ.ಭೀಮಸೇನ ಮಿರ್ಜಿ.. 9743441859
ಪಂ.ಪ್ರಮೋದಾಚಾರ್ಯ ಕಟ್ಟಿ…8217416116
ಶ್ರೀ ಮಧುಕರ ತೇರದಾಳ …
9448544870

Related Articles

Back to top button