*ಎಪಿಎಂಸಿ ಪೊಲೀಸರ ಕಾರ್ಯಾಚರಣೆ: 3 ಅಂತಾರಾಜ್ಯ ಕಳ್ಳರು ಅರೆಸ್ಟ್*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಮನೆಗಳ್ಳತನ ಮಾಡಿದ್ದ ಮೂವರು ಅಂತಾರಾಜ್ಯ ಕಳ್ಳರನ್ನು ಬಂಧಿಸಿರುವ ಎಪಿಎಂಸಿ ಪೊಲೀಸರು ಬಂಧಿಸಿವಲ್ಲಿ ಯಶಸ್ವಿಯಾಗಿದ್ದಾರೆ.
ಬೆಳಗಾವಿಯ ಎಪಿಎಂಸಿ ಪೊಲೀಸರು ದಾಳಿ ಮಾಡಿ 4.71 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಮಹಾರಾಷ್ಟ್ರದ ಕೊಲ್ಲಾಪುರ ಮೂಲದ ದೇವೆಂದ್ರ ಉರ್ಫ ಡೇಬ್ಯಾ ರಮೇಶ ವಾಘಮೋರೆ(39), ಸಚೀನ ದತ್ತಾತ್ರೇಯ ಗೌಳಿ(39), ಕಪೀಲ ಉರ್ಫ ಅಪ್ಪಾ ಭಜರಂಗ ಜಾಧವ(23) ಎಂಬಾತರನ್ನು ಬಂಧಿಸಲಾಗಿದೆ.
ಬಂಧಿತರಿಂದ 1.67 ಲಕ್ಷ ರೂ. ಮೌಲ್ಯದ 12.080 ಮಿ.ಗ್ರಾಂ. ಬಂಗಾರದ ಆಭರಣ, 1,83 ಲಕ್ಷ ರೂ. ಮೌಲ್ಯದ 744.5 ಗ್ರಾಂ ಬೆಳ್ಳಿಯ ಆಭರಣ, 1.20 ಲಕ್ಷ ರೂ. ಮೌಲ್ಯದ ಎರಡು ಮೋಟರ್ ಸೈಕಲ್ ಸೇರಿದಂತೆ ಒಟ್ಟು 4.71 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಮೇ 3ರಂದು ಕುವೆಂಪು ನಗರದ ನಿವೃತ್ತ ಉಪನ್ಯಾಸಕ ಅರುಣ ವಾಮನರಾವ ಜಾಧವ ಅವರು ತಮ್ಮ ಮನೆಯಲ್ಲಿ ಬೆಳ್ಳಿ ಹಾಗೂ ಬಂಗಾರದ ಆಭರಣಗಳು ಕಳ್ಳತನವಾದ ದೂರು ನೀಡಿದ್ದರು. ಪ್ರಕರಣದ ಬೆನ್ನತ್ತಿದ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಎಪಿಎಂಸಿ ಠಾಣೆ ಇನ್ಸಪೆಕ್ಟರ್ ಯು.ಎಸ್. ಅವಟಿ, ಪಿಎಸ್ ಐ ಎಸ್.ಕೆ. ಹೊಳೆನ್ನವರ, ಎಎಸ್ ಐ ಎಂ.ಎ. ಪಾಟೀಲ, ಸಿಬ್ಬಂದಿಗಳಾದ ಡಿ.ಸಿ. ಸಾಗರ, ಬಸವರಾಜ ನರಗುಂದ, ಖಾದರಸಾಬ ಖಾನಮ್ಮನವರ, ಗೋವಿಂದಪ್ಪ ಪೂಜಾರ, ರಫೀಕ ಮುಜಾವರ, ಶಿವಾಜಿ ಚವ್ಹಾಣ, ರಮೇಶ ಪಾಟೀಲ, ಹಾಗೂ ಬೆರಳು ಮುದ್ರೆ ಘಟಕ ಅಧಿಕಾರಿ ಇನ್ಸಪೆಕ್ಟರ್ ಆನಂದ ಮೇತ್ರಿ ಹಾಗೂ ಸಿಬ್ಬಂದಿಗಳಾದ ಸೋಮಶೇಖರ ಹಕಾರಿ, ಬಾಹುಬಲಿ ಅನಗಾಲೆ, ವಿಶ್ವನಾಥ ಮಠಪತಿ, ಸದಾಶಿವ ಖಾಡೆ, ಸಂತೋಷ ಮನಕಾಪುರೆ, ರಮೇಶ ಅಕ್ಕಿ, ಮಹಾದೇವ ಖಾಶೀದ, ದೀಪಕ ದೊಡಗೋಣಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಇವರ ಕಾರ್ಯಕಕ್ಕೆ ಪೊಲೀಸ್ ಆಯುಕ್ತರು ಶ್ಲಾಘಿಸಿದ್ದಾರೆ.


