*ಆಮದು ಸುಂಕ ಹೆಚ್ಚಿಸಿದ ಬೆನ್ನಲ್ಲೇ ದಾಖಲೆ ಮಟ್ಟದಲ್ಲಿ ಏರಿದ ಚಿನ್ನದ ಬೆಲೆ*

ಪ್ರಗತಿವಾಹಿನಿ ಸುದ್ದಿ: ಕೇಂದ್ರ ಸರ್ಕಾರ ಚಿನ್ನ ಮತ್ತು ಬೆಳ್ಳಿ ಮೇಲಿನ ಆಮದು ಸುಂಕ ಏರಿಕೆ ಮಾಅಡಿದ ಬೆನ್ನಲ್ಲೇ ಚಿನ್ನ, ಬೆಳ್ಳಿ ದರ ದಾಅಖಲೆ ಪ್ರಮಾಣದಲ್ಲಿ ಏರಿಕೆಯಾಗಿದೆ.
ಬೆಳಗ್ಗೆ 9:45ರ ವೇಳೆಗೆ 10 ಗ್ರಾಂ ಚಿನ್ನದ ಬೆಲೆ 8,838 ರೂ.(5.66%) ಏರಿಕೆಯಾಗಿ 1,61,887 ರೂ.ನಲ್ಲಿ ವ್ಯವಹಾರ ನಡೆಸುತ್ತಿದ್ದರೆ 1 ಕೆಜಿ ಬೆಳ್ಳಿ ದರ 18,0920 ರೂ. (6.36%) ಏರಿಕೆಯಾಗಿ 2,98,400 ರೂ. ನಲ್ಲಿ ವ್ಯವಹಾರ ನಡೆಸುತ್ತಿದೆ. ಮಧ್ಯಾಹ್ನ 3:30ರ ವೇಳೆಗೆ ಈ ದರ ಮತ್ತಷ್ಟು ಏರಿಳಿತವಾಗುವ ಸಾಧ್ಯತೆಯಿದೆ.
ಎಂಸಿಎಕ್ಸ್ ಚಿನ್ನದ ವ್ಯವಹಾರವು ಭೌತಿಕ ಚಿನ್ನದ ಬದಲಿಗೆ, ಎಲೆಕ್ಟ್ರಾನಿಕ್ ರೂಪದಲ್ಲಿ ಚಿನ್ನದ ಬೆಲೆ ಏರಿಳಿತಗಳ ಮೇಲೆ ‘ಫ್ಯೂಚರ್ಸ್’ ಒಪ್ಪಂದಗಳ ಮೂಲಕ ವ್ಯಾಪಾರ ಮಾಡುವ ವೇದಿಕೆಯಾಗಿದೆ. ಇದು ಹೂಡಿಕೆದಾರರಿಗೆ ಚಿನ್ನದ ಬೆಲೆ ಏರಿಳಿತದಿಂದ ಲಾಭ ಪಡೆಯಲು ಅಥವಾ ಹೆಡ್ಜಿಂಗ್ ಮಾಡಲು ಅನುವು ಮಾಡಿಕೊಡುತ್ತದೆ.
ಇಲ್ಲಿ ಚಿನ್ನವನ್ನು ಭೌತಿಕವಾಗಿ ಖರೀದಿಸದೇ ಭವಿಷ್ಯದ ದಿನಾಂಕದಂದು ನಿಗದಿತ ಬೆಲೆಯಲ್ಲಿ ಚಿನ್ನವನ್ನು ಖರೀದಿಸಲು ಅಥವಾ ಮಾರಾಟ ಮಾಡಲು ಒಪ್ಪಂದ ಮಾಡಿಕೊಳ್ಳಲಾಗುತ್ತದೆ. ಜಾಗತಿಕ ರಾಜಕೀಯ ಮತ್ತು ಆರ್ಥಿಕ ಸುದ್ದಿಗಳ ಆಧಾರದ ಮೇಲೆ ಬೆಲೆಗಳು ಇಲ್ಲಿ ವೇಗವಾಗಿ ಬದಲಾಗುತ್ತಿರುತ್ತದೆ.
ಎಂಸಿಎಕ್ಸ್ ಮಾರುಕಟ್ಟೆಯಲ್ಲಿ ಚಿನ್ನದ ಫ್ಯೂಚರ್ಸ್ ದರಗಳು ಹೆಚ್ಚಾದಾಗ, ಸ್ಥಳೀಯ ಚಿನ್ನದ ಒಕ್ಕೂಟಗಳು ಮತ್ತು ಜ್ಯುವೆಲ್ಲರಿ ವ್ಯಾಪಾರಿಗಳು ಸಹ ಭೌತಿಕ ಚಿನ್ನದ ದರವನ್ನು ಹೆಚ್ಚಿಸುತ್ತಾರೆ. ಅದೇ ರೀತಿ ಎಂಸಿಎಕ್ಸ್‌ನಲ್ಲಿ ದರ ಇಳಿಕೆಯಾದರೆ ಅಂಗಡಿಗಳಲ್ಲೂ ಬೆಲೆ ತಗ್ಗುತ್ತದೆ.



