Belagavi NewsBelgaum NewsCrimeKannada NewsKarnataka NewsTravel

*ಅಬಕಾರಿ ಪೊಲೀಸರ ಭರ್ಜರಿ ಕಾರ್ಯಾಚರಣೆ: ಸ್ಪಿರೀಟ್ ಸಾಗಿಸುತ್ತಿದ್ದ ಟ್ಯಾಂಕರ್ ವಶಕ್ಕೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:  ಟ್ಯಾಂಕರ್ ನಲ್ಲಿ ಅಕ್ರಮವಾಗಿ ಸ್ವೀರಿಟ್ ಸಾಗಿಸುತ್ತಿದ್ದ ವೇಳೆ ಅಬಕಾರಿ ಪೊಲೀಸರು ದಾಳಿ ಮಾಡಿ ಟ್ಯಾಂಕರ್ ವಶಕ್ಕೆ ಪಡೆದಿದ್ದಾರೆ.

ಬೆಳಗಾವಿ ಜಿಲ್ಲೆಯ ಖಾನಾಪೂರ ತಾಲೂಕಿನ ಜಾಂಬೋಟಿಯಿಂದ ಕಣಕುಂಬಿಗೆ ಹೋಗುವ ರಸ್ತೆಯಲ್ಲಿ ಟ್ಯಾಂಕರ್ ವಶಕ್ಕೆ ಪಡೆಯಲಾಗಿದೆ. ಟ್ಯಾಂಕರ್ ನಲ್ಲಿ 14,000.ಲೀ ಸ್ವೀರಿಟ್ ಅಕ್ರಮವಾಗಿ ಮಾರಾಟಕ್ಕಾಗಿ ಸಾಗಾಣಿಕೆ ಮಾಡಲಾಗುತಿತ್ತು. 

ಟ್ಯಾಂಕರ್ ಚಾಲಕ ಸಿದ್ದರಾಜು ಪುಟ್ಟಸ್ವಾಮಿ ಶೆಟ್ಟಿ (47) ವಿರುದ್ಧ ಬಿಎನ್ಎಸ್‌ಎಸ್ ಕಾಯ್ದೆ 2023ರ ಕಲಂ 35(3)ರನ್ವಯ ಮುಂದಿನ ತನಿಖೆಗೆ ಹಾಜರಾಗಲು ನೋಟಿಸ್ ಜಾರಿ ಮಾಡಿ, ವಾಹನದ ಮಾಲೀಕನನ್ನು ಪತ್ತೆ ಹಚ್ಚಿ ಬಂಧಿಸಲು ತನಿಖೆ ನಡೆಸಲಾಗುತ್ತಿದೆ.

14,00,000 ರೂ, ಮೌಲ್ಯದ ಸ್ವೀರಿಟ್, 1500 ರೂ. ಮೌಲ್ಯದ ಮೋಬೈಲ್, 21,00,000 ರೂ ಮೌಲ್ಯದ ಟ್ಯಂಕರ್, ಹೀಗೆ ಒಟ್ಟು 35,01, 500 ರೂ ಮೌಲ್ಯದ ವಸ್ತುಗಳು ವಶಕ್ಕೆ ಪಡೆಯಲಾಗಿದೆ. ಖಾನಾಪೂರ ಅಬಕಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Home add -Advt

Related Articles

Back to top button