Belagavi NewsBelgaum NewsCrimeKannada NewsKarnataka NewsNational
*ಶಿವಾನಂದ ನಿಲಣ್ಣವರ ಪ್ರಕರಣ: ಹೆಚ್ಚಿನ ಲಾಭ ಪಡೆದವರಿಗೂ ಆತಂಕ ಶುರು*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: 4,500 ಕೋಟಿ ವಂಚನೆ ಪ್ರಕರಣದಲ್ಲಿ ಸಿಐಡಿ ತನಿಖೆ ಚುರುಕುಗೊಂಡಿದೆ. ಶಿವಾನಂದ ನೀಲಣ್ಣವರ್ ಮಾಲೀಕತ್ವದ ಶಿವಂ ಅಸೋಸಿಯೇಟ್ಸ್ ಸಂಸ್ಥೆಯಲ್ಲಿ ಸುಮಾರು 35,000 ಜನರು ಹೂಡಿಕೆ ಮಾಡಿದ್ದರು. ಇದೀಗ ಹಣ ಸಂದಾಯದ ಪರಿಶೀಲನೆ ನಡೆಯುತ್ತಿದ್ದು, ಹೂಡಿಕೆಗಿಂತ ಹೆಚ್ಚಿನ ಲಾಭ ಪಡೆದವರಿಗೂ ಆತಂಕ ಶುರುವಾಗಿದೆ.
ಆರಂಭಿಕ ಹಂತದಲ್ಲಿ, ಹೂಡಿಕೆ ಮಾಡಿದ ಹಲವರು ತಮ್ಮ ಮೂಲ ಹೂಡಿಕೆಗಿಂತ ದುಪ್ಪಟ್ಟು ಲಾಭ ಪಡೆದಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
50 ಲಕ್ಷ ಹೂಡಿಕೆ ಮಾಡಿದವರು 1 ಕೋಟಿವರೆಗೂ ಲಾಭಾಂಶ ಪಡೆದಿದ್ದಾರೆ. ಸಿಐಡಿ ಡಿಐಜಿ ಭೀಮಶಂಕರ್ ಗುಳೆದ್ ಮಾರ್ಗದರ್ಶನದಲ್ಲಿ ತನಿಖೆ ನಡೆಸುತ್ತಿರುವ ಸಿಐಡಿ ತಂಡ, ಈ ಹೆಚ್ಚಿನ ಲಾಭ ಪಡೆದ ಹೂಡಿಕೆದಾರರನ್ನು ಪತ್ತೆಹಚ್ಚಿ ಅವರಿಂದ ಹೆಚ್ಚುವರಿ ಹಣವನ್ನು ವಾಪಸ್ ಪಡೆಯುವ ಪ್ರಕ್ರಿಯೆ ಆರಂಭಿಸಿದೆ.
ಇದರಿಂದ ವಂಚನೆಗೊಳಗಾದ ಉಳಿದ ಹೂಡಿಕೆದಾರರಿಗೆ ನ್ಯಾಯ ಒದಗಿಸುವುದು ಸಿಐಡಿ ಉದ್ದೇಶವಾಗಿದೆ.




