*ಕನಿಷ್ಠ ವೇತನ ಹೆಚ್ಚಳ ವಿರೋಧಿಸಿ ಬೆಳಗಾವಿಯಲ್ಲಿ ಪ್ರತಿಭಟನೆ: ಡಿಸಿಗೆ ಮನವಿ*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿ: ಕರ್ನಾಟಕ ಸರ್ಕಾರ ಇತ್ತೀಚೆಗೆ ಘೋಷಿಸಿರುವ ಕನಿಷ್ಠ ವೇತನ ಹೆಚ್ಚಳದ ತಿದ್ದುಪಡಿ ಆದೇಶವನ್ನು ವಿರೋಧಿಸಿ ಬೆಳಗಾವಿಯ ವಿವಿಧ ವ್ಯಾಪಾರ ಮತ್ತು ಕೈಗಾರಿಕಾ ಸಂಘಟನೆಗಳು ಇಂದು ಬೃಹತ್ ಪ್ರತಿಭಟನೆ ನಡೆಸಿದವು.
ನಗರದ ಚನ್ನಮ್ಮ ವೃತ್ತದ ಬಳಿ ಇರುವ ಕನ್ನಡ ಸಾಹಿತ್ಯ ಭವನದಲ್ಲಿ ಎಲ್ಲಾ ವ್ಯಾಪಾರಿಗಳು, ಉದ್ಯಮಿಗಳು ಹಾಗೂ ಸಂಘಟನೆಗಳ ಸದಸ್ಯರು ಒಗ್ಗೂಡಿ ಸಭೆ ನಡೆಸಿದರು. ಬಳಿಕ ಅಲ್ಲಿಂದ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರಿಗೆ ಮನವಿ ಸಲ್ಲಿಸಿದರು.

ಕನಿಷ್ಠ ವೇತನ ಹೆಚ್ಚಳದಿಂದ ವ್ಯಾಪಾರ, ಕೈಗಾರಿಕೆ ಹಾಗೂ ಸಣ್ಣ ಮತ್ತು ಮಧ್ಯಮ ಉದ್ಯಮಗಳ ಮೇಲೆ ಹೆಚ್ಚುವರಿ ಆರ್ಥಿಕ ಹೊರೆ ಬೀಳಲಿದ್ದು, ಈ ನಿರ್ಧಾರವನ್ನು ಮರುಪರಿಶೀಲಿಸುವಂತೆ ಸರ್ಕಾರವನ್ನು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ವಾಣಿಜ್ಯೋದ್ಯಮ ಸಂಘದ ಅಧ್ಯಕ್ಷ ಪ್ರಭಾಕರ ನಾಗರಮನೋಳಿ, ಈಗಾಗಲೇ ಉದ್ಯಮಗಳು ಬೆಲೆ ಏರಿಕೆಯಿಂದ ತತ್ತರಿಸಿ ಹೋಗಿವೆ. ಈಗ ಪುನಃ ಕನಿಷ್ಠ ವೇತನವನ್ನು ಹೆಚ್ಚಿಸಿದರೆ ಬಹಳಷ್ಟು ಉದ್ಯಮಗಳು ಬಾಗಿಲು ಮುಚ್ಚಲಿವೆ. ಇದರಿಂದ ನಿರುದ್ಯೋಗ ಸಮಸ್ಯೆಯೂ ಉಲ್ಬಣವಾಗಲಿದೆ. ಯಾವುದೇ ಕಾರಣಕ್ಕೆ ಈಗ ಆದೇಶಿಸಿರುವ ಕನಿಷ್ಠ ವೇತನ ನಿಯಮವನ್ನು ಜಾರಿಗೆ ತರಬಾರದು. ಹಂತ ಹಂತವಾಗಿ ಹೆಚ್ಚಿಸುವುದಕ್ಕೆ ನಮ್ಮ ವಿರೋಧವಿಲ್ಲ. ಆದರೆ ಒಮ್ಮೆಲೆ ಇಷ್ಟೊಂದು ಪ್ರಮಾಣದಲ್ಲಿ ಹೆಚ್ಚಿ ಸುವುದು ಉದ್ಯಮಗಳಿಗೆ ದೊಡ್ಡ ಹೊಡೆತ ನೀಡಲಿದೆ ಎಂದರು.
ಪಕ್ಕದ ರಾಜ್ಯಗಳಲ್ಲಿ ಕನಿಷ್ಠ ವೇತನ ಅತ್ಯಂತ ಕಡಿಮೆ ಇದೆ. ಆದರೆ ಕರ್ನಾಟಕದಲ್ಲಿ ಮಾತ್ರ ಏಕಾಏಕಿ ದೊಡ್ಡ ಪ್ರಮಾಣದಲ್ಲಿ ಹೆಚ್ಚಿಸಲಾಗಿದೆ. ಉದ್ಯಮಗಳ ಉಳಿವಿಗೆ ಯಾವುದೇ ಸಹಾಯ ಮಾಡದೆ ಈ ರೀತಿ ವೇತನ ಹೆಚ್ಚಿಸುವುದರಿಂದ ಇಡೀ ಉದ್ಯಮವಲಯಕ್ಕೆ ಆಘಾತವಾಗಿದೆ ಎಂದು ತಿಳಿಸಿದರು.
ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಉದ್ಯಮಿಗಳ ಮನವಿಯನ್ನು ಸರ್ಕಾರದ ಗಮನಕ್ಕೆ ತರುವುದಾಗಿಯೂ, ಶೀಘ್ರವೇ ನೂತನವಾಗಿ ನೇಮಕವಾಗಲಿರುವ ಕಾರ್ಮಿಕ ಸಚಿವರು ಹಾಗೂ ಕೈಗಾರಿಕಾ ಸಚಿವರ ಜೊತೆ ಸಭೆಯನ್ನು ಆಯೋಜಿಸಲು ಪ್ರಯತ್ನಿಸುವುದಾಗಿಯೂ ಭರವಸೆ ನೀಡಿದರು.
ಚೇಂಬರ್ ಆಫ್ ಕಾಮರ್ಸ್ ಕಾರ್ಯದರ್ಶಿ ಸತೀಶ್ ಕುಲಕರ್ಣಿ, ವಾಣಿಜ್ಯೋದ್ಯಮ ಸಂಘದ ಎಲ್ಲಾ ಪದಾಧಿಕಾರಿಗಳು, ಸಣ್ಣ ಕೈಗಾರಿಕಾ ಸಂಘದ ಪದಾಧಿಕಾರಿಗಳು, ನಗರದ ವಿವಿಧ ಉದ್ಯಮಗಳ ನೂರಾರು ಪ್ರತಿನಿಧಿಗಳು ಸೇರಿದಂತೆ ಬೇರೆ ಬೇರೆ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸಿದ್ದರು.
Massive Protest in Belagavi Against Minimum Wage Hike; Memorandum Submitted to Deputy Commissioner
Belagavi, June 1: Various trade, business, and industrial associations in Belagavi staged a massive protest on Sunday against the Karnataka Government’s recently announced revised minimum wage order.
Traders, industrialists, and members of different associations gathered at Kannada Sahitya Bhavan near Chennamma Circle and held a meeting to discuss the implications of the wage hike. Subsequently, they marched in a procession to the Deputy Commissioner’s office and submitted a memorandum to Deputy Commissioner Mohammed Roshan.
The protesters urged the government to reconsider its decision, stating that the steep increase in minimum wages would impose a significant financial burden on businesses, industries, and small and medium enterprises (SMEs).
Addressing the gathering, Belagavi Chamber of Commerce President Prabhakar Nagarmanoli said industries are already struggling due to rising costs and inflation. He warned that a sudden and substantial increase in minimum wages could force many businesses to shut down, leading to higher unemployment.
“We are not opposed to a gradual increase in wages. However, implementing such a large hike at one stroke will severely impact industries and businesses,” he said.
Nagarmanoli further pointed out that minimum wages in neighboring states remain considerably lower, while Karnataka has introduced a sharp increase. He said the decision has come as a major setback to the industrial sector, particularly when industries are not receiving adequate support for their sustainability and growth.
After receiving the memorandum, Deputy Commissioner Mohammed Roshan assured the delegation that their concerns would be conveyed to the state government. He also stated that efforts would be made to arrange a meeting with the newly appointed Labour Minister and Industries Minister at the earliest to discuss the issue.
Among those present were Satish Kulkarni, Secretary of the Chamber of Commerce, office-bearers of various trade and industry associations, representatives of small-scale industries, and hundreds of businessmen and entrepreneurs from different sectors who participated in the protest march.
किमान वेतनवाढीविरोधात बेळगावात भव्य आंदोलन; जिल्हाधिकाऱ्यांना निवेदन
बेळगाव, १ जून : कर्नाटक सरकारने अलीकडेच जाहीर केलेल्या किमान वेतनवाढीच्या सुधारित आदेशाच्या निषेधार्थ बेळगावातील विविध व्यापारी, उद्योजक आणि औद्योगिक संघटनांनी रविवारी भव्य आंदोलन केले.
शहरातील छन्नम्मा सर्कलजवळील कन्नड साहित्य भवन येथे व्यापारी, उद्योजक आणि विविध संघटनांचे सदस्य एकत्र जमले. यावेळी झालेल्या सभेनंतर आंदोलनकर्त्यांनी मोर्चाच्या स्वरूपात जिल्हाधिकारी कार्यालयाकडे कूच करून जिल्हाधिकारी मोहम्मद रोशन यांना निवेदन सादर केले.
किमान वेतनवाढीमुळे व्यापार, उद्योग तसेच लघु व मध्यम उद्योगांवर अतिरिक्त आर्थिक भार पडणार असून, सरकारने हा निर्णय पुनर्विचार करावा, अशी मागणी आंदोलनकर्त्यांनी केली.
यावेळी बोलताना वाणिज्य-उद्योग संघटनेचे अध्यक्ष प्रभाकर नागरमनोळी म्हणाले की, महागाई आणि वाढत्या खर्चामुळे उद्योग आधीच अडचणीत सापडले आहेत. अशा परिस्थितीत किमान वेतनात मोठ्या प्रमाणात वाढ केल्यास अनेक उद्योग बंद पडण्याची वेळ येईल आणि बेरोजगारीची समस्या अधिक गंभीर बनेल.
“वेतनवाढीला आमचा विरोध नाही. मात्र, ती टप्प्याटप्प्याने करण्यात यावी. एकाच वेळी इतकी मोठी वाढ करणे उद्योगांसाठी मोठा धक्का ठरेल,” असे ते म्हणाले.
नागरमनोळी यांनी पुढे सांगितले की, शेजारच्या राज्यांमध्ये किमान वेतनाचे दर तुलनेने कमी आहेत, तर कर्नाटकमध्ये अचानक मोठी वाढ करण्यात आली आहे. उद्योगांच्या टिकावासाठी कोणतीही विशेष मदत न देता वेतनवाढ लागू करणे संपूर्ण औद्योगिक क्षेत्रासाठी चिंताजनक असल्याचे त्यांनी नमूद केले.
निवेदन स्वीकारल्यानंतर जिल्हाधिकारी मोहम्मद रोशन यांनी उद्योजकांच्या मागण्या राज्य सरकारपर्यंत पोहोचविण्याचे आश्वासन दिले. तसेच नव्याने नियुक्त होणाऱ्या कामगारमंत्री आणि उद्योगमंत्र्यांसोबत लवकरच बैठक आयोजित करण्यासाठी प्रयत्न करण्यात येतील, असे त्यांनी सांगितले.
या आंदोलनात चेंबर ऑफ कॉमर्सचे सचिव सतीश कुलकर्णी, वाणिज्य-उद्योग संघटनेचे पदाधिकारी, लघुउद्योग संघटनांचे प्रतिनिधी तसेच शहरातील विविध उद्योग आणि व्यापारी संघटनांचे शेकडो सदस्य सहभागी झाले होते.



