Kannada NewsKarnataka NewsNationalPolitics

*ಎಂಎಲ್‌ಸಿ ಚುನಾವಣೆಗೆ ಕಾಂಗ್ರೆಸ್‌ನ 5ನೇ ಅಭ್ಯರ್ಥಿ ಕಣಕ್ಕೆ: ಬಿಜೆಪಿ-ಜೆಡಿಎಸ್ ಮೈತ್ರಿಗೆ ತಲೆನೋವು*

ಪ್ರಗತಿವಾಹಿನಿ ಸುದ್ದಿ: ಕರ್ನಾಟಕ ವಿಧಾನ ಪರಿಷತ್ ಚುನಾವಣಾಗೆ ಕಾಂಗ್ರೆಸ್ ಈಗಾಗಲೇ ನಾಲ್ಕು ಅಭ್ಯರ್ಥಿಗಳನ್ನು ಅಂತಿಮಗೊಳಿಸಿದ್ದು, ಐದನೆ ಅಭ್ಯರ್ಥಿಯ ಹೆಸರು ಸಹ ಘೋಷಿಸಿದೆ.

ಇದೀಗ ನಿಗದಿತ ಸಂಖ್ಯಾಬಲಕ್ಕಿಂತಲೂ ಹೆಚ್ಚು ಸ್ಥಾನಗಳಿಗೆ ಸ್ಪರ್ಧಿಸಲು ಹೈಕಮಾಂಡ್ ಹಸಿರು ನಿಶಾನೆ ತೋರಿಸಿದ್ದು, ಒಟ್ಟು ಐದು ಜನರನ್ನು ಕಣಕ್ಕೆ ಇಳಿಸಿದೆ. ಈ ಮೂಲಕ ಮೇಲ್ಮನೆ ಚುನಾವಣೆಯು ಕೇವಲ ಒಂದು ಪ್ರಕ್ರಿಯೆಯಾಗುಳಿಯದೆ ತೀವ್ರ ಪೈಪೋಟಿಗೆ ಸಾಕ್ಷಿಯಾಗುವ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ.

ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾ‌ರ್ ಅವರ ಆಪ್ತ ಎಂದೇ ಗುರುತಿಸಿಕೊಂಡಿರುವ ವಿನಯ್ ಕಾರ್ತಿಕ್ ಅವರಿಗೆ ಈ ಐದನೇ ಸೀಟಿನ ಟಿಕೆಟ್ ಲಭಿಸಿದೆ. ಕಾಂಗ್ರೆಸ್ ನಾಯಕರ ಈ ನಡೆಯಿಂದ ಬಿಜೆಪಿ ಜೆಡಿಎಸ್ ಮೈತ್ರಿಗೆ  ಹೊಸ ತಲೆನೋವು ಎದುರಾಗಿದೆ. 

Home add -Advt

Related Articles

Back to top button