
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ವತಿಯಿಂದ ಎಸ್ಎಸ್ಎಲ್ಸಿ, ಐಟಿಐ, ಪಿಯುಸಿ ಮುಗಿಸಿದ ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳಿಗಾಗಿ ಖಾಸಗಿ ಕಂಪನಿಗಳಿಂದ “ನೇರ ಸಂದರ್ಶನ/ಪ್ಲೆಸ್ಮೆಂಟ್ಡ್ರೈವ್” ವನ್ನು ಜೂನ್ 12 (ಶುಕ್ರವಾರ) ಮತ್ತು ಜೂನ್ 13 2026 (ಶನಿವಾರ) ರಂದು ವೇಗಾ ಆಟೋ ಆಕ್ಸೆಸರೀಸ್ ಲಿಮಿಟೆಡ್ ಬೆವೋ ಕ್ರಾಸ್ ಉದ್ಯಮಬಾಗ ಬೆಳಗಾವಿ ಇಲ್ಲಿ ಆಯೋಜಿಸಲಾಗಿದೆ.
ಆಸಕ್ತ ಅಭ್ಯರ್ಥಿಗಳಿಗೆ ಉದ್ಯೋಗಾವಕಾಶವು ಉಚಿತವಾಗಿದ್ದು, ಇನ್ನುಳಿದ ಯಾವುದೇ ಸೌಲಭ್ಯಗಳು ಇರುವುದಿಲ್ಲ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 9483894245, 9148117391, 7676965522, 9886513036 ಗಳನ್ನು ಕಛೇರಿ ಸಮಯದಲ್ಲಿ ಸಂಪರ್ಕಿಸಬಹುದು ಎಂದು ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



