Kannada NewsKarnataka NewsLatest

*ಕರ್ನಾಟಕ ಛಾಯಾರತ್ನ ಪ್ರಶಸ್ತಿ ಪ್ರಧಾನ*

ಪ್ರಗತಿವಾಹಿನಿ ಸುದ್ದಿ: ಕರ್ನಾಟಕ ವಿಡಿಯೋ ಮತ್ತು ಪೋಟೋ ಅಸೋಸಿಯೇಷನ್ ಮತ್ತು ಕರ್ನಾಟಕ ರಾಜ್ಯ ಪತ್ರಿಕಾ ಛಾಯಗ್ರಾಹಕರ ಸಹಕಾರದೊಂದಿಗೆ ತ್ರಿಪುರ ವಾಸಿನಿ ಅರಮನೆ ಮೈದಾನದಲ್ಲಿ ಮೂರು ದಿನಗಳ ಕಾಲ ಅಂತರಾಷ್ಟ್ರೀಯ ಮಟ್ಟದ ಪೋಟೋ ಮತ್ತು ವಿಡಿಯೋ ಪ್ರದರ್ಶನದಲ್ಲಿ ಪತ್ರಿಕಾ ಚಾಯಾಗ್ರತೆಗೆ ಪೂರ್ಣಿಮಾ ಬೆಂಗಳೂರು, ವಿಶ್ವೇಶ್ವರಪ್ಪ ಎಸ್ ಬೆಂಗಳೂರು, ಪಿ ಕೆ ಬಡಿಗೇರ್ ಬೆಳಗಾವಿ, ನಾಗರಾಜ್ ದಸ್ತಾನ ನವರ್ ಕೊಪ್ಪಳ ರುದ್ರಸ್ವಾಮಿ, ರುದ್ರಸ್ವಾಮಿ ಬಳ್ಳಾರಿ, ಅಕ್ರಮ್ ಬೆಂಗಳೂರು, ಪ್ರಗತಿ ಗೋಪಾಲಕೃಷ್ಣ ಮೈಸೂರು, ಇವರಿಗೆ ಸನ್ಮಾನ ಮಾಡಲಾಯಿತು.

ಮುಖ್ಯ ಅತಿಥಿಗಳಾಗಿ ಎಂ.ಎಸ್.ಎಂ.ಇ.ಡೇವಲ್ ಮೆಂಟ್ ಅಧಿಕಾರಿ ದೇವರಾಜ್ ಕೆ. ಬಿ.ಬೆಂಜಮಿನ್ ಭಾಸ್ಕರ್, ಸೆಲ್ವಮುತ್ತು, ಶ್ರೀನಾಥ್, ಎಸ್.ಕೆ.ಹುಸೇನ್, ಜಾನ್ ಅಮರ್ ರಾಜ್, ರಿನಿ ರಾವಲ್, ದಿವ್ಯರವಿ , ಅಧ್ಯಕ್ಷರಾದ ಹೆಚ್.ವಿ.ಕೃಷ್ಣಪ್ಪರವರು, ಕಾರ್ಯದರ್ಶಿ ಎ.ಜಗದೀಶ್ ರವರು ಉದ್ಘಾಟನೆ ಮಾಡಿದರು.

ಕೆ.ದೇವರಾಜ್ ರವರು ಮಾತನಾಡಿ ನಮ್ಮ ಇಲಾಖೆಯ ವತಿಯಿಂದ ಪೋಟೋ ಮತ್ತು ವಿಡಿಯೋ ಪ್ರದರ್ಶನ ಮೇಳಕ್ಕೆ ನಾವು ಸಹಕಾರ ಕೊಡುತ್ತಿದ್ದೇವೆ.

Home add -Advt

ಪೋಟೋ ಮತ್ತು ವಿಡಿಯೊ ಡೊಡ್ಡ ಉದ್ಯಮವಾಗಿದೆ. ಪ್ರತಿಯೊಬ್ಬ ಪೋಟೋ ಮತ್ತು ವಿಡಿಯೊಗ್ರಾಫರ್ಸ್ ಗಳಿಗೆ ಎಂ.ಎಸ್.ಎಮ್.ಇ.ಇಲಾಖೆಗೆ ಭೇಟಿ ಮಾಡಿ ವಿವಿಧ ಯೋಜನೆಗಳ ಸಹಾಯ ಪಡೆದುಕೊಳ್ಳಿ. ವಿವಿಧ ಜಿಲ್ಲೆಗಳಲ್ಲಿ ಈ ರೀತಿಯ ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ನಮ್ಮ ಇಲಾಖೆ ಸಹಕಾರ ನೀಡುತ್ತದೆ ಎಂದು ಹೇಳಿದರು.

ಅಧ್ಯಕ್ಷರಾದ ಹೆಚ್.ವಿ. ಕೃಷ್ಣಪ್ಪರವರು ಮಾತನಾಡಿ ಕರ್ನಾಟಕ ಪೋಟೋ ಮತ್ತು ವಿಡಿಯೋಗ್ರಾಫರ್ಸ್ ಗಳು ಆನೇಕ ಸಮಸ್ಯೆಗಳಿಂದ ಎದುರುಸುತ್ತಿದ್ದಾರೆ. ಅವರ ಸಮಸ್ಯೆ ನಿವಾರಣೆಗಾಗಿ ರಾಜ್ಯ ಸರ್ಕಾರ ನಿಗಮ ಮಂಡಳಿ ರಚಿಸಬೇಕು.

ಪೋಟೋ ಮತ್ತು ವಿಡಿಯೋಗಳು ಸಾಕ್ಷಿಯಾಗಿ ಜೀವಂತ ಪರಿಯಂತ ನಮ್ಮ ಜೊತೆಯಲ್ಲಿ ಒಂದು ಪೋಟೋ ನೂರು ಮಾತುಗಳು ಹೇಳುತ್ತದೆ. ಪ್ರಧಾನಿಯಿಂದ ಹಿಡಿದು ಮುಖ್ಯಮಂತ್ರಿ ಹಾಗೂ ಎಲ್ಲ ಜನರಿಗೆ ಪೋಟೋ , ವಿಡಿಯೊಗಳು ತುಂಬಾ ಅವಶ್ಯಕತೆ ಇದೆ. ಸಭೆ, ಸಮಾರಂಭ ಪ್ರಚಾರ, ಮದುವೆ, ಮುಂಜಿ ಎಲ್ಲ ಸಮಾರಂಭಗಳಿಗೆ ನಮ್ಮ ಅವಶ್ಯಕತೆ ತುಂಬಾ ಇರುತ್ತದೆ. ತಂತ್ರಜ್ಞಾನ ಬೆಳಯುತ್ತಿದೆ ಅದನ್ನ ಪರಿಚಯಿಸಲು ಪ್ರದರ್ಶನ ಮಾರಾಟ ಮೇಳ ಮೂರು ದಿನಗಳ ಆಯೋಜಿಸಲಾಗಿದೆ. 80 ಜನರಿಗೆ ಕರ್ನಾಟಕ ರತ್ನ ಮಾದರಿಯಲ್ಲಿ ಛಾಯಾರತ್ನ ಪ್ರಶಸ್ತಿ ನೀಡಲಾಗುತ್ತಿದೆ ಎಂದು ಹೇಳಿದರು.

Related Articles

Back to top button