*46 ಮೋಬೈಲ್ ಹಸ್ತಾತರಿಸಿದ ಬೆಳಗಾವಿ ಪೊಲೀಸರು*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಸಿಇಐಆರ್ ಪೋರ್ಟಲ್ ಮೂಲಕ ಪತ್ತೆ ಹಚ್ಚಿದ ಒಟ್ಟು 46 ಮೋಬೈಲ್ ಪೋನ್‌ಗಳನ್ನು ಪೊಲೀಸರು ಮಾಲೀಕರಿಗೆ ಹಸ್ತಾಂತರಿಸಿದ್ದಾರೆ.
ಕಳೆದು ಹೋಗಿದ್ದ ಮೊಬೈಲ್ ಫೋನ್ ಗಳನ್ನು ಪತ್ತೆ ಹಚ್ಚಿ ಕೊಡುವಂತೆ ಸಾರ್ವಜನಿಕರು ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಈ ಕುರಿತು CEIR Portal ಸಹಾಯದಿಂದ ಇಲ್ಲಿಯವರೆಗೆ ವಿವಿಧ ಕಂಪನಿಯ ಒಟ್ಟು 46 ಮೊಬೈಲ್ ಗಳನ್ನು ಪತ್ತೆ ಮಾಡಿ ಕಳೆದುಕೊಂಡ ಮೊಬೈಲ್ ಮಾಲೀಕರಿಗೆ ಹಸ್ತಾಂತರಿಸಲಾಗಿದೆ.
ಮೊಬೈಲ್ ಫೋನ್ ಗಳನ್ನು ಪತ್ತೆ ಮಾಡುವಲ್ಲಿ ಸಿಪಿಐ ಬಿ. ಆರ್. ಗಡೇಕರ್, ಪಿಎಸ್ಐ ಆನಂದ ಆದಗೊಂಡ ಶ್ರೀಶೈಲ್ ಹುಳಗೇರಿ, ಉದಯ ಪಾಟೀಲ ಪಿ ಎಮ್ ಮೊಹೀತೆ, ಮತ್ತು ಸಿಬ್ಬಂದಿಗಳಾದ ಸಂದೀಪ ನಡುಗೇರಿ, ಮಹೇಶ ಮಳಗಲಿ ಡಿ. ವಾಯ್. ಮುರಗೋಡ, ಬಸವರಾಜ ಕುಳೊಳ್ಳಿ ಹಾಗೂ ತಾಂತ್ರಿಕ ಸಬ್ಬಿಂದಿ ರಮೇಶ ಅಕ್ಕಿ, ಮಹಾದೇವ ಕಾಸೀದ ಅವರ ಕಾರ್ಯಕ್ಕೆ ಪೊಲೀಸ್ ಆಯುಕ್ತರು ಪ್ರಶಂಸೆಯನ್ನು ವ್ಯಕ್ತಪಡಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ




