Belagavi NewsBelgaum NewsKannada NewsKarnataka NewsNationalPolitics
*ಹೆದ್ದಾರಿ-48ರಲ್ಲಿ ಹೊತ್ತಿ ಉರಿದ ಲಾರಿ ಮತ್ತು ಹಾಲಿನ ಟ್ಯಾಂಕರ್*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ಮಾರ್ಗವಾಗಿ ಗೋವಿನ ಜೋಳ ಮೂಟೆ ಹೊತ್ತು ಸಾಗುತ್ತಿದ್ದ ಲಾರಿಯ ಒಂದು ಬದಿಗೆ ಅದೇ ಮಾರ್ಗವಾಗಿ ವೇಗವಾಗಿ ಸಾಗಿಬಂದ ಹಾಲಿನ ಟ್ಯಾಂಕರ್ ವೇಗವಾಗಿ ಡಿಕ್ಕಿಯಾಗಿ ಭೀಕರ ಅಘಾತ ಸಂಭವಿಸಿದೆ.
ಶುಕ್ರವಾರ ರಾತ್ರಿ ಕಿತ್ತೂರು ತಾಲೂಕಿನ ಎಂ.ಕೆ.ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿ-48ರಲ್ಲಿ ಲಾರಿಗಳೆರಡರ ನಡುವೆ ಸಂಭವಿಸಿದ ಅಪಘಾತಕ್ಕೆ ಬೆಂಕಿ ಹೊತ್ತಿ ಉರಿದಿದ್ದು, ಅದೃಶ್ಯವಶಾತ ಚಾಲಕರಿಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆಮ
ಅಪಘಾತದಿಂದ ಬೆಂಕಿ ಹೊತ್ತಿಕೊಂಡು ಕ್ಷಣಾರ್ಧದಲ್ಲಿ ವಾಹನಗಳೆರಡು ಬೆಂಕಿಗೆ ಆಹುತಿಯಾಗಿದ್ದು, ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದ್ದಾರೆ. ಕಿತ್ತೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.




