Belagavi NewsBelgaum NewsKannada NewsKarnataka NewsNationalPolitics

*ಬೆಳಗಾವಿಯಿಂದ ಅಮಿತ್ ಶಾ ಭೇಟಿಗೆ ಹೊರಟಿದ್ದ ಎಂಇಎಸ್ ಪುಂಡರನ್ನು ತಡೆದ ಪೊಲೀಸರು*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದು ಮಹಾರಾಷ್ಟ್ರದ ಕೊಲ್ಹಾಪುರಕ್ಕೆ ಭೇಟಿ ನೀಡುತ್ತಿದ್ದಾರೆ. ಹಾಗಾಗಿ ಅವರನ್ನು ಭೇಟಿ ಮಾಡಿ ಗಡಿ ವಿಷಯ ಮಾತನಾಡಲು ಹೋರಟ್ಟಿದ್ದ ಬೆಳಗಾವಿಯ ಎಂಇಎಸ್ ಪುಂಡರನ್ನು ಕರ್ನಾಟಕ ಪೊಲೀಸರು ಹತ್ತರಗಿ ಟೋಲ್‌ನಲ್ಲಿ ತಡೆದರು.

ಶನಿವಾರ ಬೆಳಿಗ್ಗೆ, ಮಹಾರಾಷ್ಟ್ರ ಏಕೀಕರಣ ಸಮಿತಿಯ ನಾಯಕರು ಮತ್ತು ಕಾರ್ಯಕರ್ತರ ನಿಯೋಗವು ವಿವಿಧ ವಾಹನಗಳಲ್ಲಿ ಕೊಲ್ಲಾಪುರಕ್ಕೆ ತೆರಳಿತ್ತಿದ್ದರು. ಕರ್ನಾಟಕ ಪೊಲೀಸರು ಹತ್ತರಗಿ ಟೋಲ್ ಗೇಟ್‌ನಲ್ಲಿ ಎಂಇಎಸ್ ಪುಂಡರ್ ವಾಹನಗಳನ್ನು ತಡೆಯುತ್ತಿದ್ದಂತೆ ಕೋಪಗೊಂಡು ಟೋಲ್ ಗೇಟ್ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕುಳಿತು ಪ್ರತಿಭಟನೆ ಆರಂಭಿಸಿದರು. ಇದರಿಂದ ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು.

Home add -Advt

ಕೊಲ್ಹಾಪುರ ಜಿಲ್ಲಾ ಮ್ಯಾಜಿಸ್ಟ್ರೇಟ್ ಭದ್ರತಾ ಕಾರಣಗಳಿಗಾಗಿ ಬೆಳಗಾವಿ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ ನಂತರ ಎಂಇಎಸ್ ನಾಯಕರನ್ನು ತಡೆಯಲಾಗಿದೆ. ಆದರೆ, ಸಮಿತಿಯ ನಾಯಕರು ಈ ಬಗ್ಗೆ ಲಿಖಿತ ಆದೇಶವನ್ನು ತೋರಿಸಲು ಒತ್ತಾಯಿಸಿದರು. ಪೊಲೀಸರು ಅದನ್ನು ನೀಡಲು ನಿರಾಕರಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಈ ಮಧ್ಯೆ, ಈ ಘಟನೆಯಿಂದಾಗಿ ಹತ್ತರಗಿ ಟೋಲ್ ಪ್ರದೇಶದಲ್ಲಿ ಸ್ವಲ್ಪ ಸಮಯದವರೆಗೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿ, ಟ್ರಾಫೀಕ್ ಸಮಸ್ಯೆ ಉಂಟಾಯಿತು. 

Related Articles

Back to top button