Kannada NewsKarnataka NewsLatest

ವ್ಯಸನ ಬಿಡಲು ಹೋಗಿ ರಿಹ್ಯಾಬ್ ಸೆಂಟರ್ ನಲ್ಲಿಯೇ ಆತ್ಮಹತ್ಯೆಗೆ ಶರಣಾದ ಪೊಲೀಸ್ ಕಾನ್ಸ್ ಟೇಬಲ್

ಪ್ರಗತಿವಾಹಿನಿ ಸುದ್ದಿ: ವ್ಯಸನ ಮುಕ್ತ ಕೇಂದ್ರಕ್ಕೆ (Rehabilitation Center) ದಾಖಲಾಗಿದ್ದ ಪೊಲೀಸ್ ಕಾನ್ಸ್ ಟೇಬಲ್ ಓರ್ವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಕೊಪ್ಪಳ ಜಿಲ್ಲೆಯ ಕುಷ್ಟಗಿಯಲ್ಲಿ ಈ ಘಟನೆ ನಡೆದಿದೆ. ಶರಣಪ್ಪ ಉಪ್ಪಾರ (49) ಮೃತ ದುರ್ದೈವಿ. ಇವರು ಮುನಿರಾಬಾದ್ ಐಆರ್‌ಬಿಯಲ್ಲಿ ಕೆಲಸ ಮಾಡುತ್ತಿದ್ದರು. ಕುಡಿತದ ಚಟಕ್ಕೆ ಬಿದ್ದಿದ್ದ ಶರಣಪ್ಪ, ವ್ಯಸನ ಬಿಡಲೆಂದು ರಿಹ್ಯಾಬ್ ಸೆಂಟರ್ ಗೆ ದಾಖಲಾಗಿದ್ದರು.

ಎರಡು ದಿನಗಳ ಹಿಂದೆ ಅವರು ವ್ಯಸನಮುಕ್ತ ಕೇಂದ್ರದಿಂದ ಮನೆಗೆ ಕರೆದುಕೊಂಡು ಹೋಗುವಂತೆ ಪತ್ನಿಗೆ ಕರೆ ಮಾಡಿದ್ದರು. ಮನೆಗೆ ಕರೆದುಕೊಂಡು ಹೋಗದೇ ಇದ್ದಿದ್ದಕ್ಕೆ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ. ಕುಷ್ಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Home add -Advt

Related Articles

Back to top button