*ಲೊಂಡಾ ರೈಲು ನಿಲ್ದಾಣದ ಯಾರ್ಡ್’ನಲ್ಲಿ ಕಾಮಗಾರಿ: ರೈಲುಗಳ ಸಂಚಾರ ರದ್ದು*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಲೊಂಡಾ ರೈಲು ನಿಲ್ದಾಣದ ಯಾರ್ಡ್’ನಲ್ಲಿ ಹಮ್ಮಿಕೊಂಡಿರುವ ಇಂಜಿನಿಯರಿಂಗ್ ಕಾಮಗಾರಿಗಳ ಹಿನ್ನೆಲೆಯಲ್ಲಿ, ಈ ಕೆಳಗಿನ ರೈಲುಗಳನ್ನು ಭಾಗಶಃ ರದ್ದುಗೊಳಿಸಲಾಗುವುದು ಮತ್ತು ನಿಯಂತ್ರಿಸಲಾಗುವುದು ಎಂದು ರೈಲ್ವೆ ಇಲಾಖೆ ತಿಳಿಸಿದೆ.
ರೈಲುಗಳ ಭಾಗಶಃ ರದ್ದತಿ
ದಿನಾಂಕ 24.07.2026 ರಿಂದ 27.07.2026 ರವರೆಗೆ ರೈಲು ಸಂಖ್ಯೆ 56931 ಮಿರಜ್–ಲೊಂಡಾ ಡೈಲಿ ಪ್ಯಾಸೆಂಜರ್ ರೈಲು ಬೆಳಗಾವಿ ಮತ್ತು ಲೊಂಡಾ ನಡುವೆ ಭಾಗಶಃ ರದ್ದುಗೊಳ್ಳಲಿದೆ. ಈ ರೈಲು ಲೊಂಡಾ ಬದಲಿಗೆ ಬೆಳಗಾವಿಯಲ್ಲಿಯೇ ತನ್ನ ಪ್ರಯಾಣವನ್ನು ಕೊನೆಗೊಳಿಸಲಿದೆ.
ದಿನಾಂಕ 25.07.2026 ರಿಂದ 28.07.2026 ರವರೆಗೆ ರೈಲು ಸಂಖ್ಯೆ 56932 ಲೊಂಡಾ–ಮಿರಜ್ ಡೈಲಿ ಪ್ಯಾಸೆಂಜರ್ ರೈಲು ಲೊಂಡಾ ಮತ್ತು ಬೆಳಗಾವಿ ನಡುವೆ ಭಾಗಶಃ ರದ್ದುಗೊಳ್ಳಲಿದೆ. ಈ ರೈಲು ಲೊಂಡಾ ಬದಲಿಗೆ ಬೆಳಗಾವಿಯಿಂದಲೇ ತನ್ನ ನಿಗದಿತ ಸಮಯಕ್ಕೆ ಪ್ರಯಾಣವನ್ನು ಪ್ರಾರಂಭಿಸಲಿದೆ.
ದಿನಾಂಕ 25.07.2026 ರಿಂದ 27.07.2026 ರವರೆಗೆ ರೈಲು ಸಂಖ್ಯೆ 17333 ಮಿರಜ್–ಕ್ಯಾಸಲ್ ರಾಕ್ ಡೈಲಿ ಎಕ್ಸ್’ಪ್ರೆಸ್ ರೈಲು ಬೆಳಗಾವಿ ಮತ್ತು ಕ್ಯಾಸಲ್ ರಾಕ್ ನಡುವೆ ಭಾಗಶಃ ರದ್ದುಗೊಳ್ಳಲಿದೆ. ಈ ರೈಲು ಕ್ಯಾಸಲ್ ರಾಕ್ ಬದಲಿಗೆ ಬೆಳಗಾವಿಯಲ್ಲಿಯೇ ತನ್ನ ಪ್ರಯಾಣವನ್ನು ಕೊನೆಗೊಳಿಸಲಿದೆ.
ದಿನಾಂಕ 25.07.2026 ರಿಂದ 27.07.2026 ರವರೆಗೆ ರೈಲು ಸಂಖ್ಯೆ 17334 ಕ್ಯಾಸಲ್ ರಾಕ್–ಮಿರಜ್ ಡೈಲಿ ಎಕ್ಸ್’ಪ್ರೆಸ್ ರೈಲು ಕ್ಯಾಸಲ್ ರಾಕ್ ಮತ್ತು ಬೆಳಗಾವಿ ನಡುವೆ ಭಾಗಶಃ ರದ್ದುಗೊಳ್ಳಲಿದೆ. ಈ ರೈಲು ಕ್ಯಾಸಲ್ ರಾಕ್ ಬದಲಿಗೆ ಬೆಳಗಾವಿಯಿಂದಲೇ ತನ್ನ ನಿಗದಿತ ಸಮಯಕ್ಕೆ ಪ್ರಯಾಣವನ್ನು ಪ್ರಾರಂಭಿಸಲಿದೆ.
ರೈಲುಗಳ ನಿಯಂತ್ರಣ (ವಿಳಂಬ ಸಂಚಾರ)
ದಿನಾಂಕ 22.07.2026 ರಂದು ಲೋಕಮಾನ್ಯ ತಿಲಕ್ ಟರ್ಮಿನಸ್ ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ 16554 ಲೋಕಮಾನ್ಯ ತಿಲಕ್ ಟರ್ಮಿನಸ್–ಎಸ್ಎಮ್’ವಿಟಿ ಬೆಂಗಳೂರು ದ್ವಿ-ಸಾಪ್ತಾಹಿಕ ಎಕ್ಸ್’ಪ್ರೆಸ್ ರೈಲು ಮಾರ್ಗಮಧ್ಯೆ 40 ನಿಮಿಷಗಳ ಕಾಲ ನಿಯಂತ್ರಣಕ್ಕೆ (ವಿಳಂಬಕ್ಕೆ) ಒಳಪಡಲಿದೆ.
ದಿನಾಂಕ 26.07.2026 ಮತ್ತು 27.07.2026 ರಂದು ಬೆಂಗಳೂರಿನಿಂದ ಹೊರಡುವ ರೈಲು ಸಂಖ್ಯೆ 20653 ಕೆಎಸ್ಆರ್ ಬೆಂಗಳೂರು–ಬೆಳಗಾವಿ ಡೈಲಿ ಎಕ್ಸ್’ಪ್ರೆಸ್ ರೈಲು ಮಾರ್ಗಮಧ್ಯೆ ಕ್ರಮವಾಗಿ 30 ನಿಮಿಷ ಹಾಗೂ 60 ನಿಮಿಷಗಳ ಕಾಲ ನಿಯಂತ್ರಣಕ್ಕೆ (ವಿಳಂಬಕ್ಕೆ) ಒಳಪಡಲಿದೆ.


