ಪ್ರಗತಿವಾಹಿನಿ ಸುದ್ದಿ, ನವದೆಹಲಿ: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ನೇತೃತ್ವದ ಕರ್ನಾಟಕ ಸಚಿವಸಂಪುಟ ವಿಸ್ತರಣೆ ಸಂಬಂಧ ನವದೆಹಲಿಯಲ್ಲಿ ಗುರುವಾರ ಹೈಕಮಾಂಡ್ ಜೊತೆ ಚರ್ಚೆ ನಡೆಯಿತು.
ಲೋಕಸಭೆ ವಿಪಕ್ಷ ನಾಯಕ ಹಾಗೂ ಕಾಂಗ್ರೆಸ್ ಪಕ್ಷದ ವರಿಷ್ಠರಾದ ರಾಹುಲ್ ಗಾಂಧಿಯವರ ದೆಹಲಿ ನಿವಾಸದಲ್ಲಿ ಇಂದು ನಡೆದ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯ ಉಸ್ತುವಾರಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲಾ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಕೆಪಿಸಿಸಿ ಅಧ್ಯಕ್ಷರಾದ ಬಿ.ಕೆ. ಹರಿಪ್ರಸಾದ್ ಭಾಗವಹಿಸಿದ್ದರು.
ಡಿ.ಕೆ.ಶಿವಕುಮಾರ ಅವರು ಸಿದ್ಧಪಡಿಸಿರುವ ಪಟ್ಟಿ, ಸಿದ್ದರಾಮಯ್ಯ ತಂದಿರುವ ಪಟ್ಟಿ ಮತ್ತು ಬಿ.ಕೆ.ಹರಿಪ್ರಸಾದ ಅವರು ಮುಂದಿಟ್ಟ ಬೇಡಿಕೆಗಳ ಕುರಿತು ರಾಹುಲ ಗಾಂಧಿ ಅವರು ಚರ್ಚಿಸಿದರು. ಇದಕ್ಕೆ ಸಂಬಂಧಿಸಿದಂತೆ ಸುರ್ಜೆವಾಲಾ ಅವರು ಅಭಿಪ್ರಾಯವನ್ನೂ ಪಡೆದರು. 2028ರ ವಿಧಾನಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಸಚಿವಸಂಪುಟ ರಚನೆಯಾಗಬೇಕು. ಸರಕಾರದ ಪ್ರತಿಯೊಂದು ನಡೆಯೂ ಮತ್ತೆ 5 ವರ್ಷ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು ಎನ್ನುವುದರ ಮೇಲೆ ಗಮನವಿಟ್ಟಿರಬೇಕು ಎಂದು ರಾಹುಲ ಗಾಂಧಿ ಹೇಳಿದರು.
ಮುಂದಿನ ಚುನಾವಣೆಯಲ್ಲಿ ಮೂವರ ನೇತೃತ್ವ ಅವಶ್ಯವಿರುವದರಿಂದ ಎಲ್ಲರ ಸಮ್ಮತಿಯೊಂದಿಗೆ ಸಂಪುಟ ವಿಸ್ತರಣೆಯಾಗಬೇಕು. ಯಾರೊಬ್ಬರ ಮುನಿಸು ಕೂಡ ಒಳ್ಳೆಯದಲ್ಲ ಎನ್ನುವ ಅಭಿಪ್ರಾಯಕ್ಕೆ ಬರಲಾಯಿತು. ಹಳೆಯ ಸಚಿವರು, ಹೊಸ ಆಕಾಂಕ್ಷಿಗಳು, ಕ್ರಿಯಾಶೀಲ ಶಾಸಕರು, ಪ್ರಾದೇಶಿಕ ಮತ್ತು ಜಾತಿ ಲೊಕ್ಕಾಚಾರ ಎಲ್ಲವನ್ನೂ ಗಮನದಲ್ಲಿಟ್ಟು ಹೆಜ್ಜೆ ಇಡಬೇಕೆನ್ನುವ ಕುರಿತು ಚರ್ಚಿಸಲಾಯಿತು.
ಬಹುತೇಕ ಜುಲೈ ಸೋಮವಾರ ಸಚಿವಸಂಪುಟ ವಿಸ್ತರಣೆ ನಡೆಯುವ ಸಾಧ್ಯತೆ ಇದೆ.



