Kannada NewsKarnataka NewsNational

*ಎಲ್‌ಪಿಜಿ ಸಿಲಿಂಡರ್ ದರ 200ರೂ. ಇಳಿಕೆ*

ಪ್ರಗತಿವಾಹಿನಿ ಸುದ್ದಿ: ಇಂದಿನಿಂದ ಅನ್ವಯವಾಗುವಂತೆ ವಾಣಿಜ್ಯ ಬಳಕೆಯ 19 ಕೆಜಿ ಎಲ್‌ಪಿಜಿ ಸಿಲಿಂಡರ್ ದರ 200ರೂ. ಕಡಿತಗೊಳಿಸಲಾಗಿದೆ. 

ಇತ್ತೀಚಿನ ಬೆಲೆ ಪರಿಷ್ಕರಣೆಯ ಪ್ರಕಾರ, ನವದೆಹಲಿಯಲ್ಲಿ 19 ಕೆಜಿ ತೂಕದ ವಾಣಿಜ್ಯ ಸಿಲಿಂಡರ್ ಬೆಲೆ 202 ರೂಪಾಯಿ ಕಡಿಮೆಯಾಗಿದೆ. ಅದೇ ರೀತಿ ಕೋಲ್ಕತ್ತದಲ್ಲಿ 209 ರೂಪಾಯಿ ಇಳಿಕೆಯಾಗಿದ್ದು, ನೂತನ ಬೆಲೆ 2,872.50 ರೂಪಾಯಿಗೆ ತಲುಪಿದೆ. ತೈಲ ಕಂಪನಿಗಳು ಪ್ರಕಟಿಸಿರುವ ಈ ಪರಿಷ್ಕೃತ ದರಗಳು ಶನಿವಾರದಿಂದಲೇ ಜಾರಿಗೆ ಬಂದಿವೆ.

ಈ ದರ ಕಡಿತವು ಮುಖ್ಯವಾಗಿ ಹೊಟೇಲ್, ರೆಸ್ಟೋರೆಂಟ್, ಕ್ಯಾಂಟೀನ್ ಮತ್ತು ಇತರ ವ್ಯಾಪಾರ ಸಂಸ್ಥೆಗಳಿಗೆ ನಿರ್ವಹಣಾ ವೆಚ್ಚ ತಗ್ಗಿಸಲು ನೆರವಾಗಲಿದೆ. ಆದರೆ, ಮನೆಗಳಲ್ಲಿ ಅಡುಗೆಗೆ ಬಳಸುವ 14.2 ಕೆಜಿ ಗೃಹಬಳಕೆಯ ಎಲ್‌ಪಿಜಿ ಸಿಲಿಂಡ‌ರ್ ದರದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಗೃಹಬಳಕೆಯ ಸಿಲಿಂಡರ್‌ಗಳು ಪ್ರಸ್ತುತ ಇರುವ ದರದಲ್ಲೇ ಮುಂದುವರಿಯಲಿವೆ.

ದೇಶದ ಪ್ರಮುಖ ಮಹಾನಗರಗಳಾದ ದೆಹಲಿ ಮತ್ತು ಕೋಲ್ಕತ್ತದಲ್ಲಿ ವಾಣಿಜ್ಯ ಸಿಲಿಂಡರ್ ಬೆಲೆಯಲ್ಲಿ 200 ರೂಪಾಯಿಗೂ ಅಧಿಕ ಇಳಿಕೆ ಕಂಡುಬಂದಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button