Belagavi NewsBelgaum NewsKarnataka NewsLatest

*ಮರಾಠಾ ಮಂಡಳ ಸಂಸ್ಥೆಯ ಉಪಾಧ್ಯಕ್ಷ ರಾಜೇಶ ಹಲಗೇಕರ ನಿಧನ*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿ: ಬೆಳಗಾವಿಯ ಶಿಕ್ಷಣ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಅತ್ಯಂತ ಪರಿಚಿತ, ಸರಳ ಸಜ್ಜಜನಿಕೆ ಹಾಗೂ ಅಜಾತಶತ್ರು ವ್ಯಕ್ತಿತ್ವ ಹೊಂದಿದ್ದ ಮರಾಠಾ ಮಂಡಳ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷರಾದ ಶ್ರೀ ರಾಜೇಶ ನಾಥಾಜಿರಾವ್ ಹಲಗೇಕರ (58 ವರ್ಷ) ಅವರು ಮಂಗಳವಾರ, 4 ಆಗಸ್ಟ್ 2026 ರಂದು ಅಲ್ಪಕಾಲದ ಅನಾರೋಗ್ಯದಿಂದ ನಿಧನರಾದರು. ಇವರು ಶಿಕ್ಷಣ ಪ್ರೇಮಿ ದಿವಂಗತ ನಾಥಾಜಿರಾವ್ ಹಲಗೇಕರ ಅವರ ಪುತ್ರ ಹಾಗೂ ಮರಾಠಾ ಮಂಡಳದ ಅಧ್ಯಕ್ಷರಾದ ಡಾ. ರಾಜಶ್ರೀ ನಾಗರಾಜು ಅವರ ಸಹೋದರರಾಗಿದ್ದರು.

ಸುದೀರ್ಘ ಅವಧಿಗೆ ಮರಾಠಾ ಮಂಡಳ ಸಂಸ್ಥೆಯ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದ ಇವರು, ಸಂಸ್ಥೆಯ ಬೆಳವಣಿಗೆ ಮತ್ತು ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇವರ ಅಗಲಿಕೆಯಿಂದ ಮರಾಠಾ ಮಂಡಳ ಕುಟುಂಬಕ್ಕೆ ಹಾಗೂ ಬೆಳಗಾವಿ ನಗರದಾದ್ಯಂತ ತೀವ್ರ ದುಃಖ ವ್ಯಕ್ತವಾಗಿದೆ. ಮೃತರು ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

Home add -Advt

Related Articles

Back to top button