Belagavi NewsBelgaum NewsCrimeKarnataka NewsNational

*ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ: ಇಬ್ಬರು ಕಳ್ಳರ ಬಂಧನ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ನಗರದ ತಿಲಕವಾಡಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಇಬ್ಬರು ಕಳ್ಳರನ್ನು ಬಂಧಿಸಿದ್ದಾರೆ. 

​ತಿಲಕವಾಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಬಂಗಾರ ಕಳವು ಪ್ರಕರಣವನ್ನು ತನಿಖೆ ನಡೆಸಿದ ಪೊಲೀಸರ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Home add -Advt

ಅನಗೋಳದ ಇಂದಿರಾ ನಗರ ನಿವಾಸಿ ​ತುಷಾರ ಮಾರುತಿ ಕರನ್ನವರ (22),

ಹಾಗೂ ಅನಗೋಳದ ರಘುನಾಥ ಪೇಠ ನಿವಾಸಿ ​ಯಲ್ಲಪ್ಪ ಗಜಾನನ ಮುಗಳಿ (28) ಬಂಧಿತ ಆರೋಪಿಗಳು. ಈ ಇಬ್ಬರ ಕಳ್ಳರು ​ಅನಗೋಳದ ಶಿವಶಕ್ತಿ ನಗರದ ಮನೆಯಲ್ಲಿ ಕಳ್ಳತನ ಮಾಡಿದ್ದರು.

ಬಂಧಿತರಿಂದ 2,49,260 ರೂ ಮೌಲ್ಯದ ಬಂಗಾರದ ಆಭರಣಗಳನ್ನು ವಶಕ್ಕೆ ಪಡೆಯಲಾಗಿದೆ.‌ ​ಈ ಕಾರ್ಯಾಚರಣೆಯಲ್ಲಿ ತಿಲಕವಾಡಿ ಪಿಎಸ್‌ಐ ಪರಶುರಾಮ ಪೂಜೇರಿ ಹಾಗೂ ಸಿಬ್ಬಂದಿ ತಂಡ ಭಾಗಿ ಆಗಿದ್ದರು. ಪೊಲೀಸ್ ಆಯುಕ್ತರು ಹಾಗೂ ಡಿಸಿಪಿಗಳು ತಿಲಕವಾಡಿ ಪೊಲೀಸರ ಕಾರ್ಯಕ್ಕೆ ಶ್ಲಾಘಿಸಿದ್ದಾರೆ. 

Related Articles

Back to top button