Karnataka NewsLatestPolitics

*ನಾಳೆ ಬಿಜೆಪಿ-ಜೆಡಿಎಸ್ ನಾಯಕರಿಂದ ವಿಧಾನಸೌಧಕ್ಕೆ ಮುತ್ತಿಗೆ: ಆರ್.ಅಶೋಕ್ ಮಾಹಿತಿ*

ಪ್ರಗತಿವಾಹಿನಿ ಸುದ್ದಿ: ಸಚಿವ ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ವಿಪಕ್ಷ ಬಿಜೆಪಿ-ಜೆಡಿಎಸ್ ನಾಯಕರು ಹೋರಾಟ ತೀವ್ರಗೊಳಿಸಿದ್ದು, ನಾಳೆ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಮುಂದಾಗಿವೆ.

ಈ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿದ ವಿಪಕ್ಷ ನಾಯಕ ಆರ್.ಅಶೋಕ್ ತಿಳಿಸಿದ್ದಾರೆ. ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ನಾಳೆ ವಿಧಾನಸೌಧಕ್ಕೆ ಮುತ್ತಿಗೆ ಹಾಕೋದಾಗಿ ತಿಳಿಸಿದ್ದಾರೆ.

Home add -Advt

ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಲೂಟಿ ಮಾಡಿದ್ದು ಜಗಜ್ಜಾಹೀರಾಗಿದ್ದು, ಆ ಬಗ್ಗೆ ದಾಖಲೆ ನೀಡಿದ್ದೇವೆ. ನಾಳೆ ಬೆಳಗ್ಗೆ 9.30ಕ್ಕೆ ಫ್ರೀಡಂಪಾರ್ಕ್​ನಿಂದ ಪ್ರತಿಭಟನಾ ರ್ಯಾಲಿ ಮೂಲಕ ವಿಧಾನಸೌಧಕ್ಕೆ ಮುತ್ತಿಗೆ ಹಾಕುತ್ತೇವೆ. ಪ್ರತಿಭಟನಾ ರ್ಯಾಲಿ ಬಗ್ಗೆ ನಿನ್ನೆ ಹೆಚ್.​ಡಿ.ಕುಮಾರಸ್ವಾಮಿ ಜೊತೆಗೂ ಚರ್ಚೆ ನಡೆಸಿದ್ದೇವೆ. ಅವರು ಕೂಡ ಪ್ರತಿಭಟನೆ ಮುಂದುವರಿಸಲು ಹೇಳಿದ್ದಾರೆ ಎಂದರು.

ಇನ್ನು ನಮ್ಮ ಪ್ರತಿಭಟನೆಗೆ ಪ್ರತಿಯಾಗಿ ಕಾಂಗ್ರೆಸ್​​ನವರು ಧರಣಿ ಮಾಡಿದ್ದಾರೆ. ಅಕ್ರಮದ ಬಗ್ಗೆ ಜನ ಧ್ವನಿಎತ್ತಿದ್ದಕ್ಕೆ ಕಾಂಗ್ರೆಸ್​​​ ಧರಣಿ ಮಾಡ್ತಿದೆ ಎಂದು ಅಶೋಕ್​​ ಆರೋಪಿಸಿದ್ದಾರೆ.

ಮತ್ತೊಂದೆಡೆ ಸಚಿವ ನಾಗೇಂದ್ರ ರಾಜೀನಾಮೆ ಆಗ್ರಹಿಸಿ ಪಾದಯಾತ್ರೆಗೆ ನಿರ್ಧರಿಸಿರುವ ಬಿಜೆಪಿಗರು, ಎರಡು ಮಾರ್ಗದ ಬಗ್ಗೆ ಚರ್ಚೆ ನಡೆಸಿದ್ದಾರೆ. ಈ ಸಂಬಂಧ ಆಗಸ್ಟ್ 26ರಂದು ದಿನಾಂಕ ಮತ್ತು ಮಾರ್ಗವನ್ನು ಬಿಜೆಪಿ ಅಂತಿಮ‌ಗೊಳಿಸಲಿದೆ. ಸದ್ಯ ಜಗಳೂರು-ಕೂಡ್ಲಿಗಿ-ಸಂಡೂರು-ಕಂಪ್ಲಿ- ಬಳ್ಳಾರಿ ಗ್ರಾಮಾಂತರ- ಬಳ್ಳಾರಿ ಮತ್ತು ಜಗಳೂರು-ಮೊಳಕಾಲ್ಮೂರು-ಚಳ್ಳಕೆರೆ- ಕೂಡ್ಲಿಗಿ-ಬಳ್ಳಾರಿ ಗ್ರಾಮಾಂತರ- ಬಳ್ಳಾರಿ ಎಂಬ ಎರಡು ಮಾರ್ಗದ ಆಯ್ಕೆ ಮುಂದಿಟ್ಟುಕೊಳ್ಳಲಾಗಿದ್ದು, ಇದರಲ್ಲಿ ಒಂದು ಫೈನಲ್​​ ಆಗಲಿದೆ. ಈ ಬಗ್ಗೆ ಶ್ರೀರಾಮುಲು ರಾಜ್ಯ ನಾಯಕರಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.

Related Articles

Back to top button