
ಸಚಿವ ಸತೀಶ್ ಜಾರಕಿಹೊಳಿ ನಿವಾಸಗಳ ಮೇಲೆ ಇಡಿ ದಾಳಿ
ಪ್ರಗತಿವಾಹಿನಿ ಸುದ್ದಿ/ ಬೆಳಗಾವಿ: ಇಂದು ಬೆಳ್ಳಂ ಬೆಳಗ್ಗೆ ಸಚಿವ ಸತೀಶ್ ಜಾರಕಿಹೊಳಿಗೆ ಇ.ಡಿ ಶಾಕ್ ನೀಡಿದೆ.
ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರ ಮನೆ, ಕಚೇರಿ ಸೇರಿದಂತೆ ಬೆಂಗಳೂರು, ಬೆಳಗಾವಿ, ಗೋವಾ, ಗೋಕಾಕ, ಮಹಾರಾಷ್ಟ್ರ ಸೇರಿ ಒಟ್ಟು 18 ಕಡೆ ಜಾರಿ ನಿರ್ದೇಶನಾಲಯದ ಅಧಿಕಾರಗಳು ದಾಳಿ ಮಾಡಿ ಪರಿಶೀಲನೆ ಮಾಡುತ್ತಿದ್ದಾರೆ.
ಸತೀಶ್ ಅವರ ಸಂಬಂಧಿ ಹಾಗೂ ಅಧಿಕಾರಿ ಮಂಜುನಾಥ್ ಅಬಕಾರಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಇ.ಡಿ ಅಧಿಕಾರಿಗಳಿಂದ ದಿಢೀರ್ ದಾಳಿ ನಡೆಸಿದ್ದಾರೆ. ಅನಧಿಕೃತ ಬಾರ್ ಲೈಸೆನ್ಸ್ ನೀಡಿರುವ ಆರೋಪ ಹಾಗೂ ಅಕ್ರಮ ವಿದೇಶಿ ಹಣ ಹೂಡಿಕೆ ಹಾಗೂ ಮನಿ ಲಾಂಡ್ರಿಂಗ್ ಶಂಕೆ ಹಿನ್ನೆಲೆಯಲ್ಲಿ ಶೋಧ ಕಾರ್ಯ ನಡೆಯುತ್ತಿದೆ.




