*ಮಟಕಾ ಅಡ್ಡೆ ಮೇಲೆ ಬೆಳಗಾವಿ ಸಿಸಿಬಿ ಪೊಲೀಸರ ದಾಳಿ: 17 ಜನ ವಶಕ್ಕೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ನಗರದ ಸಿಸಿಬಿ ವಿಭಾಗದ ಪೊಲೀಸರು ಮಟಕಾ ಅಡ್ಡೆ ಮೇಲೆ ದಾಳಿ ನಡೆಸಿ 17 ಜನರನ್ನು ವಶಕ್ಕೆ ಪಡೆದು ರೂ.81,820 ಜಪ್ತ ಮಾಡಿದ್ದಾರೆ.
ಸಿಸಿಬಿ ವಿಭಾಗದ ಸಿಪಿಐ ಮಂಜುನಾಥ ನಾಯಿಕ ನೆತೃತ್ವದಲ್ಲಿ ದಾಳಿ ನಡೆಸಿ ಆರೋಪಿಗಳಾದ ದಿನೇಶ ಪ್ರದೀಪ ಇಂಗಳ (54), ಕೃಷ್ಣಾ ಮಹಾದೇವ ಜಾಧವ (45), ರಾಹುಲ ಪಾಂಡುರಂಗ ಕುಡುಸ್ಕರ್ (40), ಫಿರೋಜಖಾನ ಸುಲೇಮಾನ ಸುರೈಯಾಪೆಂಡಾರಿ (39), ಬಾಲಚಂದ್ರ ದತ್ತಾ ಬಡಸಕರ (42), ಗಜಾನನ ಮಾರುತಿ ಕಂಗ್ರಾಳಕರ (50), ಅಝರುದ್ದೀನ ಗೌಸ್ ಮಿರ್ಜಾಭಾಯಿ (48), ಮಾರುತಿ ನಾನಾ ದಳವಿ (56), ಸಾಧಿಕ ಯುನುಸ ಚಾಫಗಾಂವಕರ (40), ಸದಾನಂದ ಮಹಾದೇವ ಕಾಮಕರ (56), ಸಂಜು ಶಿವಲಿಂಗ ಹಾದಿಮನಿ (38), ಈಶ್ವರ ರಾಮಕೃಷ್ಣ ಲೋಕುರೆ (65), ರಾಜು ಯಲ್ಲಪ್ಪ ಕಡೋಲ್ಕರ (35), ಅನಿಲ ಕಲ್ಲಪ್ಪ ಬಾಳೆಕುಂದ್ರಿ (36), ಸಂಗಪ್ಪ ಶಂಕರಪ್ಪ ಚಾವಲಗಿ (65) ಹಾಗೂ ಜನಾರ್ಧನ ಸಂಜು ಪೂಜಾರಿ (38) ಎಂಬುವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಆರೋಪಿಗಳು ಶಹಾಪೂರ ಠಾಣಾ ವ್ಯಾಪ್ತಿಯ ವಡಗಾವಿಯಲ್ಲಿ ಹಣ ನೀಡಿ ಮಟಕಾ ಆಟದಲ್ಲಿ ತೊಡಗಿದ್ದಾಗ ದಾಳಿ ಮಾಡಿ ಆರೋಪಿಗಳನ್ನು ವಶಕ್ಕೆಪಡೆದುಕೊಳ್ಳಲಾದೆ.
ದಾಳಿ ವೇಳೆ ಆರೋಪಿಗಳಿಂದ ರೂ.81,820 ಹಣ ಹಾಗೂ ಓಸಿ ಅಂಕಿ ಸಂಖ್ಯೆಗಳನ್ನು ಬರೆದ ಚೀಟಿಗಳನ್ನು ಜಪ್ತಪಡಿಸಿಕೊಂಡು ಅವರ ವಿರುದ್ಧ ಶಹಾಪೂರ ಪೊಲೀಸ್ ಠಾಣೆ ಪ್ರ. ಸಂ. 128/2026 ಕಲಂ. 79, 80 ಕೆ.ಪಿ. ಕಾಯ್ದೆ -1963 ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಲಾಗಿದೆ.
ದಾಳಿ ಕೈಗೊಂಡ ಸಿಸಿಬಿ ವಿಭಾಗದ ಸಿಪಿಐ ಮಂಜುನಾಥ ನಾಯಿಕ, ಮಂಜುನಾಥ ಭಜಂತ್ರಿ ಪಿಎಸ್‌ಐ ಮತ್ತು ಸಿಬ್ಬಂದಿಯವರ ಕಾರ್ಯಕ್ಕೆ ಪ್ರಶಂಸೆ ವ್ಯಕ್ತವಾಗಿದೆ.



