Belagavi NewsBelgaum NewsKannada NewsKarnataka NewsNational

*ಚಿನ್ನದ ಬೆಲೆಯಲ್ಲಿ ಕೊಂಚ ಏರಿಕೆ*

ಪ್ರಗತಿವಾಹಿನಿ ಸುದ್ದಿ: ಬೆಂಗಳೂರು: ದೇಶಾದ್ಯಂತ ಗಣೇಶೋತ್ಸವ ಅದ್ಧೂರಿಯಾಗಿ ಆಚರಿಸಲು ಸಿದ್ಧತೆಗಳು ನಡೆದಿದೆ. ಆದರೆ ಈ ಮಧ್ಯೆ ಚಿನ್ನದ ದರ ಏರಿಕೆಯಾಗಿ ಜನರಿಗೆ ಶಾಕ್ ನೀಡಿದೆ.

ಜಾಗತಿಕ ಮಾರುಕಟ್ಟೆಯಲ್ಲಿನ ಏರಿಳಿತ ಹಾಗೂ ಹಬ್ಬದ ಋತುವಿನ ಬೇಡಿಕೆಯಿಂದಾಗಿ ಇಂದು ಚಿನ್ನದ ಬೆಲೆ ಪ್ರತಿ ಗ್ರಾಮ್‌ಗೆ ಬರೋಬ್ಬರಿ 155 ರೂಪಾಯಿಗಳಷ್ಟು ಹೆಚ್ಚಳವಾಗಿದೆ.

Home add -Advt

ರಾಜಧಾನಿ ಬೆಂಗಳೂರು ಸೇರಿದಂತೆ ಮುಂಬೈ ದೆಹಲಿ ಹಾಗೂ ಪ್ರಮುಖ ಮಹಾನಗರಗಳಲ್ಲಿ ಚಿನ್ನದ ಬೆಲೆ ಸಾರ್ವಕಾಲಿಕ ಗರಿಷ್ಠ ಮಟ್ಟದತ್ತ ಸಾಗಿದೆ. 

ಇಂದು 22 ಕ್ಯಾರಟ್ ಆಭರಣ ಚಿನ್ನದ ಬೆಲೆ 10 ಗ್ರಾಮ್‌ಗೆ 1,41,700 ರೂಪಾಯಿಗೆ ತಲುಪಿದೆ.

ಇನ್ನು 24 ಕ್ಯಾರಟ್ ಅಪರಂಜಿ ಚಿನ್ನದ ದರದಲ್ಲೂ ಭಾರಿ ಏರಿಕೆ ಕಂಡುಬಂದಿದೆ. ಇಂದು 24 ಕ್ಯಾರಟ್ ಚಿನ್ನ ಪ್ರತಿ 10 ಗ್ರಾಮ್‌ಗೆ 1,54,580 ರೂಪಾಯಿ ತಲುಪಿದ್ದು, 1 ಗ್ರಾಮ್‌ಗೆ 15,458 ರೂಪಾಯಿ ದಾಖಲಾಗಿದೆ. ದೆಹಲಿ ಮಾರುಕಟ್ಟೆಯಲ್ಲಿ ಬೆಲೆ ಅಲ್ಪ ವ್ಯತ್ಯಾಸದೊಂದಿಗೆ ಮತ್ತಷ್ಟು ದುಬಾರಿಯಾಗಿದೆ.

ಚಿನ್ನದ ಬೆನ್ನಲ್ಲೇ ಬೆಳ್ಳಿಯ ದರದಲ್ಲೂ ಏರಿಕೆಯ ಬಿಸಿ ತಟ್ಟಿದ್ದು ಬೆಂಗಳೂರು ಹಾಗೂ ಮುಂಬೈನಲ್ಲಿ ಪ್ರತಿ ಕೆಜಿ ಬೆಳ್ಳಿಯ ಬೆಲೆ 2,45,000 ರೂಪಾಯಿಗೆ ಏರಿದೆ. 

Related Articles

Back to top button