*ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಗಂಭೀರ ಆರೋಪ: ಮೊದಲು ರಾಜೀನಾಮೆ ಕೊಟ್ಟು ಹೋಗಲಿ: ಛಲವಾದಿ ನಾರಾಯಣಸ್ವಾಮಿ ಆಗ್ರಹ*

ಪ್ರಗತಿವಾಹಿನಿ ಸುದ್ದಿ: ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಗಂಭೀರ ಆರೋಪ ಮಾಡಿದ್ದಾರೆ. ಪ್ರಿಯಾಂಕ್ ಖರ್ಗೆ ಮೋಸ್ಟ್ ಕರೆಪ್ಟ್ ಪರ್ಸನ್ ಎಂದು ಆರೋಪಿಸಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಛಲವಾದಿ ನಾರಾಯಣಸ್ವಾಮಿ, ಕಲ್ಯಾಣ ಕರ್ನಾಟಕದಲ್ಲಿ ದಲಿತರ ಮಾರಣ ಹೋಮ ಆಗುತ್ತಿದೆ. ಈ ಬಗ್ಗೆ ಗೃಹ ಸಚಿವರು ಒಂದೇ ಒಂದು ಸ್ಟೇಟ್ಮೆಂಟ್ ಕೊಟ್ಟಿಲ್ಲ. ಇಂತಹ ಗೃಹ ಸಚಿವರು ನಮಗೆ ಬೇಕಾ? ಎಂದು ಪ್ರಶ್ನಿಸಿದರು. ಪ್ರಿಯಾಂಕ್ ಖರ್ಗೆ ಅತಿ ಭ್ರಷ್ಟ ವ್ಯಕ್ತಿ. ಅವರು ರಾಜೀನಾಮೆ ಕೊಟ್ಟು ಹೋಗಲಿ ಎಂದು ಆಗ್ರಹಿಸಿದ್ದಾರೆ.
ಸೋಲಿನ ಭಯದಿಂದ ಲೂಟಿ ಮಾಡುವುದಕ್ಕೆ ಕಾಂಗ್ರೆಸ್ ಇಳಿದಿದ್ದು, ಈ ಸರ್ಕಾರದ ಎಲ್ಲಾ ಇಲಾಖೆಗಳಲ್ಲೂ ಭ್ರಷ್ಟಾಚಾರ ನಡೆಯುತ್ತಿದೆ. SCSP-TSP ಹಣ ದುರ್ಬಳಕೆ ಮಾಡಲಾಗಿದೆ ಎಂದವರು ದೂರಿದ್ದಾರೆ.
ಗೃಹ ಸಚಿವ ಪ್ರಿಯಾಂಕ್ ಖರ್ಗೆ ಗೃಹ ಬಿಟ್ಟು ಆಚೆ ಬರುತ್ತಿಲ್ಲ. ಬರೀ ಆರ್ಎಸ್ಎಸ್ ಬಗ್ಗೆ ಅವರು ಮಾತಾಡ್ತಿದ್ದಾರೆ. ಬೇರೆಯವರ ಚಡ್ಡಿ ಯಾಕೆ ನೋಡ್ತೀರಿ, ನಿಮ್ದು ನೋಡ್ಕೊಳ್ಳಿ. ಆರ್.ಎಸ್.ಎಸ್ ನವರು ಯಾರನ್ನಾದ್ದರೂ ಥಳಿಸಲಿಕ್ಕೆ ಲಾಠಿ ಬಳಸಿದ್ದಾರಾ? ಆರ್.ಎಸ್.ಎಸ್ ಮುಗಿಸಲು ಪ್ರಿಯಾಂಕ್ ಖರ್ಗೆ ಅಪ್ಪನಿಂದಲೂ ಆಗಿಲ್ಲ. ಆರ್.ಎಸ್.ಎಸ್ ಮೇಲೆ ಕ್ರಿಮಿನಲ್ ಕೇಸ್ ಇಲ್ಲ ಅಂತ ನೀವೇ ಹೇಳಿದ್ದೀರಿ. ರಾಜ್ಯದ ಕಾನೂನು ಸುವ್ಯವಸ್ಥೆ ಬಗ್ಗೆ ನೀವೆಲ್ಲೂ ಮಾತಾಡಿಲ್ಲ. ಆದರೆ ರಾಜ್ಯದ ಗೃಹ ಸಚಿವರಿಗೆ ಬರೀ ಆರ್ಎಸ್ಎಸ್ ಚಿಂತೆ. ದಲಿತರ ಉದ್ಧಾರ ಬಗ್ಗೆ ಇವರಿಗೆ ಕಿಂಚಿತ್ತೂ ಕಾಳಜಿ ಇಲ್ಲ. ದಲಿತರ ಹೆಸರು ಬಳಸಿಕೊಂಡು ಆಸ್ತಿ ಮಾಡಿದ್ದಾರೆ ಅಷ್ಟೇ. ಗೃಹ ಸಚಿವರ ಭಾಗದಲ್ಲೇ 13 ಅಟ್ರಾಸಿಟಿ ಕೇಸ್ ದಾಖಲಾಗಿವೆ ಎಂದು ಛಲವಾದಿ ನಾರಾಯಣಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ



