
ಪ್ರಗತಿವಾಹಿನಿ ಸುದ್ದಿ: ಪತ್ನಿಯ ಅನೈತಿಕ ಸಂಬಂಧಕ್ಕೆ ಬೇಸತ್ತ ಪತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ.
35 ವರ್ಷದ ಆಟೋ ಚಾಲಕ ಮುನಿಕೃಷ್ಣ ಆತ್ಮಹತ್ಯೆಗೆ ಶರಣಾದವನು. ಪತ್ನಿಯ ಪ್ರಿಯಕರ ಕುಮಾರ್ ಎಂಬಾತ ತನ್ನ ಪತ್ನಿ ಜೊತೆಗಿರುವ ಖಾಸಗಿ ಕ್ಷಣಗಳ ವಿಡಿಯೋ, ಫೋಟೋಗಳನ್ನು ಕಳುಹಿಸಿದ್ದ. ಅಲ್ಲದೇ ನಿನ್ನ ಪತ್ನಿ ಗರ್ಭದಲ್ಲಿರುವುದು ನನ್ನ ಮಗು ಎಂದು ಹೇಳಿದ್ದ.
ಈ ಫೋಟೋ, ವಿಡಿಯೋಗಳನ್ನು ನೋಡಿಯೂ ಇನ್ನು ಯಾಕೆ ಬದುಕ್ಕಿದ್ದೀಯಾ? ಎಂದು ವ್ಯಂಗ್ಯವಾಡುತ್ತಿದ್ದ. ಪತ್ನಿ ಪ್ರಿಯಕರನ ಕಿರುಕುಳ, ಅವಮಾನಕ್ಕೆ ಮನನೊಂದ ಮುನಿಕೃಷ್ಣ ಆತ್ಮಹತ್ಯೆಗೆ ಶರಣಾಗಿದ್ದಾನೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ




