*7 ದಿನ ದಿನವಿಡೀ ವಿದ್ಯುತ್ ಕಟ್!* *ವಾಣಿಜ್ಯೋದ್ಯಮ ಸಂಘ ತೀವ್ರ ವಿರೋಧ*

7ದಿನ ದಿನವಿಡೀ ವಿದ್ಯುತ್ ಕಟ್!
ವಾಣಿಜ್ಯೋದ್ಯಮ ಸಂಘ ತೀವ್ರ ವಿರೋಧ
- ಬೆಳಗಾವಿ: ಅ.12 ರಿಂದ 19 ರವರೆಗೆ 7 ದಿನ ವಿದ್ಯುತ್ ವ್ಯತ್ಯಯ – ಕವಿಪ್ರನಿನಿ ಪ್ರಕಟಣೆ, ಈ ಭಾಗಗಳಲ್ಲಿ ಅನಿಯಮಿತ ಪೂರೈಕೆ
ಪ್ರಗತಿವಾಹಿನಿ ಸುದ್ದಿ/ ಬೆಳಗಾವಿ: ಬೆಳಗಾವಿ ನಗರ ಹಾಗೂ ಖಾನಾಪುರ ತಾಲೂಕಿನ ಹಲವು ಗ್ರಾಮಗಳಲ್ಲಿ ಅಕ್ಟೋಬರ್ 12 ರಿಂದ 19 ರವರೆಗೆ 7 ದಿನಗಳ ಕಾಲ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (ಕವಿಪ್ರನಿನಿ) ಪ್ರಕಟಣೆಯಲ್ಲಿ ತಿಳಿಸಿದೆ.
ವ್ಯತ್ಯಯದ ಅವಧಿ: ದಿನಾಂಕ 12.10.2026 ರ ಬೆಳಗ್ಗೆ 10.00 ಗಂಟೆಯಿಂದ ದಿನಾಂಕ 19.10.2026 ರ ಸಾಯಂಕಾಲ 06.00 ಗಂಟೆಯವರೆಗೆ.
ಕಾರಣ: 110 ಕೆ.ವಿ. ಮಜ್ಜೆ ಉಪಕೇಂದ್ರದಿಂದ ತುರ್ತು ನಿರ್ವಹಣಾ ಕಾರ್ಯಗಳನ್ನು ಕೈಗೊಳ್ಳುತ್ತಿರುವುದರಿಂದ.
ವಿದ್ಯುತ್ ವ್ಯತ್ಯಯವಾಗುವ ಪ್ರದೇಶಗಳು:
1. ಬೆಳಗಾವಿ ತಾಲೂಕು: ಸರಬರಾಜು ಆಗುವ ದತ್ತ ನಗರ, ನಾವಗೇಕರ ನಗರ, ಹವಳ ನಗರ, ಗೋಡ್ಸೆ ಕಾಲನಿ, ಓಂಕಾರ ನಗರ, ಮಜ್ಜೆ, ರುಂಡಶಾಪೂರ, ದೇಸೂರ, ಸುನ್ನ್ಯಾನಟ್ಟಿ, ಬಳಗಾಮಟ್ಟಿ, ಕುಟ್ಟಲವಾಡಿ, ಬಾಮನವಾಡಿ, ನಾವಗೆ, ಜಾನೇವಾಡಿ, ಬಾದರವಾಡಿ, ರಣಕುಂಡೆ, ಕಲೇರ್ಲೆ, ಕಿನಯೇ, ಸಂತಿ ಬಸ್ತವಾಡ, ಕಾಳೇನಟ್ಟಿ, ವಾಘವಾಡೆ, ರಂಗಧೋಳ, ಪೀರಣವಾಡಿ, ಭಾದರವಾಡಿ, ಮಾರ್ಕಂಡೇಯ ನಗರ, ವಾಲ್ಮೀಕಿ ನಗರ, ತೀರ್ಥಕುಂಡೆ, ಹುಂಬ್ಯಾನಟ್ಟಿ, ಅಶೋಕ ಐರನ್ ಕಾಲನಿ, ನಾವಗೆ, ವಾಘವಾಡೆ ಹಾಗೂ ಮಜ್ಜೆ ಔದ್ಯೋಗಿಕ ಕ್ಷೇತ್ರಗಳು.
2. ಖಾನಾಪುರ ತಾಲೂಕು: ಉಚವಡಾ, ಕುಸಮಳಿ, ಬೈಲೂರ, ಮೊರಬ, ಜಾಂಬೋಟಿ, ಓಲಮನಿ, ವಡಗಾಂವ, ದಾರೋಳಿ, ಚಾಪೋಲಿ, ಕಾಪೋಲಿ, ಮುಡವಿ, ಹಬ್ಬಾನಟ್ಟಿ, ದೇವಾಚಿಹಟ್ಟಿ, ತೋರಾಳಿ, ಗೋಲ್ಯಾಳಿ, ಬೆಟಗೇರಿ, ತಳೇವಾಡಿ, ಅಮಟೆ, ಕಾಲಮನಿ, ಚಿಕಲೆ, ಕಣಕುಂಬಿ, ಗವಸೆ, ಅಮಗಾಂವ, ಬೇಟ್ನೆ, ಪಾರವಾಡ, ಚಿಗುಳೆ, ಮಾನ, ಸಡಾ, ಜೋಲಾರ್, ಹಳೆ ಹಾಗೂ ಹೊಸ ಹುಳಂದ ಗ್ರಾಮಗಳು ಮತ್ತು ಸದರಿ ಗ್ರಾಮಗಳ ನೀರಾವರಿ ಪಂಪ್ಸೆಟ್ಗಳ ಏರಿಯಾಗಳಲ್ಲಿ.
ಸಾರ್ವಜನಿಕರು ಸಹಕರಿಸಬೇಕೆಂದು ಕಾರ್ಯನಿರ್ವಾಹಕ ಇಂಜಿನಿಯರ್ (ವಿ), ಕಾ ಮತ್ತು ಪಾ ಗ್ರಾಮೀಣ ವಿಭಾಗ, ಹುವಿಸಕನ್ನಿ, ಬೆಳಗಾವಿ ಅವರು ಮನವಿ ಮಾಡಿದ್ದಾರೆ.
ವಿರೋಧ: ಆದರೆ 7 ದಿನಗಳ ಕಾಲ ನಿರಂತರ ವಿದ್ಯುತ್ ನಿಲುಗಡೆಗೆ ಬೆಳಗಾವಿ ವಾಣಿಜ್ಯೋದ್ಯಮ ಸಂಘ ತೀವ್ರ ವಿರೋಧ ವ್ಯಕ್ತಪಡಿಸಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ




