
ಪ್ರಗತಿವಾಹಿನಿ ಸುದ್ದಿ: ಉದ್ಯೋಗಾಕಾಂಕ್ಷಿಗಳಿಗೆ ಇಲ್ಲಿದೆ ಉತ್ತಮ ಅವಕಾಶ. ಬ್ಯಾಂಕಿಂಗ್ ವಲಯದಲ್ಲಿ ಉದ್ಯೋಗ ಹುಡುಕುತ್ತಿರುವವರಿಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಪ್ರಮುಖ ಅವಕಾಶವನ್ನು ಒದಗಿಸುತ್ತಿದೆ.
ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI), ಡೇಟಾ ಅನಾಲಿಟಿಕ್ಸ್, ಡೇಟಾ ಎಂಜಿನಿಯರಿಂಗ್ ಮತ್ತು ಟೆಕ್ನಾಲಜಿ ಆರ್ಕಿಟೆಕ್ಚರ್ನಂತಹ ಉದಯೋನ್ಮುಖ ವಿಭಾಗಗಳಲ್ಲಿ ಸ್ಪೆಷಲಿಸ್ಟ್ ಕೇಡರ್ ಆಫೀಸರ್ (SCO) ಹುದ್ದೆಗಳ ನೇಮಕಾತಿಗೆ ಆನ್ಲೈನ್ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಈ ನೇಮಕಾತಿಗಳನ್ನು ನಿರ್ದಿಷ್ಟ ಅವಧಿಯ ಒಪ್ಪಂದದ (Fixed-Term Contract) ಆಧಾರದ ಮೇಲೆ ಮಾಡಲಾಗುತ್ತದೆ. ಅರ್ಹ ಅಭ್ಯರ್ಥಿಗಳು ಎಸ್ಬಿಐನ ಅಧಿಕೃತ ವೆಬ್ಸೈಟ್ ಮೂಲಕ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.
ಹುದ್ದೆಗಳು ಮತ್ತು ವಯೋಮಿತಿ:
ವಿಶೇಷ ತಾಂತ್ರಿಕ ಕೌಶಲ್ಯ ಹೊಂದಿರುವ ಅನುಭವಿಗಳಿಗಾಗಿ ಈ ಹಿರಿಯ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಜನರಲ್ ಮ್ಯಾನೇಜರ್ ಮತ್ತು ಚೀಫ್ AI ಆಫೀಸರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು 40 ರಿಂದ 55 ವರ್ಷಗಳ ನಡುವೆ ಇರಬೇಕು. ಡೆಪ್ಯೂಟಿ ಜನರಲ್ ಮ್ಯಾನೇಜರ್ ಹುದ್ದೆಗಳ ವಿಭಾಗದಲ್ಲಿ ರಿಸ್ಕ್ ಮತ್ತು ಆಪರೇಷನಲ್ ಅನಾಲಿಟಿಕ್ಸ್, AI ಗವರ್ನೆನ್ಸ್ ಮತ್ತು ಕಂಪ್ಲೈಯನ್ಸ್, ಡೇಟಾ ಎಂಜಿನಿಯರಿಂಗ್, ಮಾಡೆಲ್ ಅಪ್ಲಿಕೇಶನ್ ಡೆವಲಪ್ಮೆಂಟ್ ಮತ್ತು AI ಓಪ್ಸ್ ಹುದ್ದೆಗಳಿಗೆ ವಯೋಮಿತಿ 35 ರಿಂದ 50 ವರ್ಷ ನಿಗದಿಪಡಿಸಲಾಗಿದೆ. ಹಾಗೆಯೇ, AI ಸೊಲ್ಯೂಷನ್ ಆರ್ಕಿಟೆಕ್ಟ್ ಮತ್ತು ಎಂಟರ್ಪ್ರೈಸ್ AI ಆರ್ಕಿಟೆಕ್ಟ್ ಹುದ್ದೆಗಳಿಗೆ 30 ರಿಂದ 45 ವರ್ಷ ವಯೋಮಿತಿಯ ಒಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಶೈಕ್ಷಣಿಕ ಅರ್ಹತೆ:
ಜಿಎಂ ಮತ್ತು ಚೀಫ್ ಎಐ ಆಫೀಸರ್ ಹುದ್ದೆಗಳಿಗೆ ಕಂಪ್ಯೂಟರ್ ಸೈನ್ಸ್, ಐಟಿ, ಇಎಸ್ಸಿ, ಇಇಇ ಅಥವಾ ಸಂಬಂಧಿತ ವಿಭಾಗಗಳಲ್ಲಿ BE, B.Tech ಅಥವಾ M.Tech ಪೂರ್ಣಗೊಳಿಸಿರಬೇಕು. ಅಥವಾ ಸ್ಟಾಟಿಸ್ಟಿಕ್ಸ್, ಕಂಪ್ಯೂಟರ್ ಸೈನ್ಸ್ನಲ್ಲಿ MSc, MA (Stats), M.Stat ಅಥವಾ MCA ಅರ್ಹತೆ ಹೊಂದಿರಬೇಕು. ಡೆಪ್ಯೂಟಿ ಜನರಲ್ ಮ್ಯಾನೇಜರ್ ಹುದ್ದೆಗಳಿಗೆ ಸಂಬಂಧಿತ ಎಂಜಿನಿಯರಿಂಗ್ ಅಥವಾ ತಂತ್ರಜ್ಞಾನ ವಿಭಾಗಗಳಲ್ಲಿ BE, B.Tech, M.Tech ಅಥವಾ ಸ್ಟಾಟಿಸ್ಟಿಕ್ಸ್, ಕಂಪ್ಯೂಟರ್ ಸೈನ್ಸ್, M.Stat, MCA ಯಲ್ಲಿ ನಿಗದಿತ ಸ್ನಾತಕೋತ್ತರ ಪದವಿ ಹೊಂದಿರಬೇಕು. ಇನ್ನು ಆರ್ಕಿಟೆಕ್ಟ್ ಹುದ್ದೆಗಳಿಗೆ ಕಂಪ್ಯೂಟರ್ ಸೈನ್ಸ್, ಐಟಿ, ಡೇಟಾ ಸೈನ್ಸ್, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್, ಬಿಸಿನೆಸ್ ಅಡ್ಮಿನಿಸ್ಟ್ರೇಷನ್ ಅಥವಾ ಮ್ಯಾನೇಜ್ಮೆಂಟ್ ವಿಷಯಗಳಲ್ಲಿ ಪದವಿ ಅಥವಾ ಸ್ನಾತಕೋತ್ತರ ಪದವಿ ಪಡೆದಿರಬೇಕು.
ಎಸ್ಬಿಐ ಸ್ಪೆಷಲಿಸ್ಟ್ ಕೇಡರ್ ಆಫೀಸರ್ ನೇಮಕಾತಿಗೆ ಅಭ್ಯರ್ಥಿಗಳನ್ನು ಅವರ ಶೈಕ್ಷಣಿಕ ಅರ್ಹತೆ ಮತ್ತು ಅನುಭವದ ಆಧಾರದ ಮೇಲೆ ಶಾರ್ಟ್ಲಿಸ್ಟ್ ಮಾಡಲಾಗುತ್ತದೆ. ನಂತರ ಒಟ್ಟು 100 ಅಂಕಗಳಿಗೆ ಸಂದರ್ಶನ ನಡೆಯಲಿದೆ. ಪ್ರಮುಖ ನಾಲ್ಕು ಹುದ್ದೆಗಳಿಗೆ ಶಾರ್ಟ್ಲಿಸ್ಟ್ ಆದ ಅಭ್ಯರ್ಥಿಗಳು ತಮ್ಮ ಕಾರ್ಯಾನುಭವ, ಯೋಜನೆಗಳು ಅಥವಾ ವೃತ್ತಿಪರ ಸಾಧನೆಗಳ ಕುರಿತು 10 ನಿಮಿಷಗಳ ಪ್ರಸ್ತುತಿಯನ್ನು ನೀಡಬೇಕಾಗುತ್ತದೆ. ಸಂದರ್ಶನದಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಅಂತಿಮ ಮೆರಿಟ್ ಪಟ್ಟಿ ಸಿದ್ಧಪಡಿಸಲಾಗುತ್ತದೆ. ತದನಂತರ ವೇತನ ಪ್ಯಾಕೇಜ್ ಕುರಿತು ನಿರ್ಧಾರವಾಗಲಿದೆ.
ಈ ನೇಮಕಾತಿಯು ಪ್ರಮುಖವಾಗಿ ಸಂಬಂಧಿತ ಕ್ಷೇತ್ರಗಳಲ್ಲಿ ಹೆಚ್ಚಿನ ಅನುಭವ ಹೊಂದಿರುವ ವೃತ್ತಿಪರರಿಗಾಗಿ ಉದ್ದೇಶಿಸಲಾಗಿದೆ. ಆದ್ದರಿಂದ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಅರ್ಹತೆಗಳನ್ನು ಎಚ್ಚರಿಕೆಯಿಂದ ಪರಿಶೀಲಿಸುವುದು ಅಗತ್ಯ. ಎಸ್ ಬಿಐ ನ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ ಪರಿಶೀಲಿಸಿ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ




