*ಬ್ಯಾಂಕ್ ಖಾತೆದಾರರೇ ಎಚ್ಚರ*! *ಮೂರು ವರ್ಷಗಳಿಂದ ಬಳಸದ ಖಾತೆಗಳು ಶೀಘ್ರ ಬಂದ್*

ಪ್ರಗತಿವಾಹಿನಿ ಸುದ್ದಿ: ನೀವು ಮೂರು ವರ್ಷಗಳಿಂದ ಬ್ಯಾಂಕ್ ಖಾತೆಯನ್ನು ಬಳಸದೇ ಇದ್ದರೆ ಅಂತಹ ಖಾತೆದಾರರು ಗಮನಿಸಬೇಕಾದ ಸುದ್ದಿಯೊಂದು ಹೊರಬಿದ್ದಿದೆ.
ನೀವು ಬ್ಯಾಂಕ್ ನಲ್ಲಿ ಖಾತೆ ಹೊಂದಿದು, ಆದರೆ ಕೆಲ ವರ್ಷಗಳಿಂದ ಆ ಖಾತೆಯಲ್ಲಿ ಯಾವುದೇ ವಹಿವಾಟು ನಡೆಸದಿದ್ದರೆ ಕೆಲ ಬ್ಯಾಂಕ್ ಗಳು ನಿಮ್ಮ ಖಾತೆಗಳನ್ನು ಮುಚ್ಚುವ ನಿರ್ಧಾರವನ್ನು ಕೈಗೊಂಡಿವೆ.
ಹೌದು ವರದಿಯ ಪ್ರಕಾರ ಪಂಜಾಬ್ ನ್ಯಾಷನಲ್ ಬ್ಯಾಂಕ್ನಲ್ಲಿ (PNB) ನೀವು ಖಾಅತೆ ಹೊಂದಿದ್ದರೆ ಮೂರು ಅಥವಾ ಮೂರಕ್ಕಿಂತ ಹೆಚ್ಚು ವರ್ಷಗಳಿಂದ ಆ ಖಾತೆಯಲ್ಲಿ ಯಾವುದೇ ವಹಿವಾಟು ನಡೆಸದಿದ್ದರೆ ಅಂತಹ ಖಾತೆಗಳು ಬಂದ್ ಆಗುವ ಸಾಧ್ಯತೆ ಇದೆ.
2026ರ ಸೆಪ್ಟೆಂಬರ್ 30ಕ್ಕೆ ಮೂರು ವರ್ಷಗಳಿಂದ ಯಾವುದೇ ಹಣಕಾಸಿನ ವಹಿವಾಟು ನಡೆಸದ ಪಿಎನ್ ಬಿ ಬ್ಯಾಂಕ್ ನ ಕೆಲವು ಖಾತೆಗಳು ಈ ಕ್ರಮದ ವ್ಯಾಪ್ತಿಗೆ ಬರಬಹುದು.
ಬ್ಯಾಂಕ್ ಖಾತೆ ಹೊಂದಿದ್ದರೂ ಅದನ್ನು ಬಳಸದ ಗ್ರಾಹಕರು ತಕ್ಷಣ ತಮ್ಮ ಖಾತೆಯ ಸ್ಥಿತಿಯನ್ನು ಪರಿಶೀಲಿಸಿಕೊಳ್ಳುವುದು ಮುಖ್ಯ. ಆದರೆ ಎಲ್ಲ ನಿಷ್ಕ್ರಿಯ ಖಾತೆಗಳನ್ನೂ ಮುಚ್ಚಲಾಗುತ್ತದೆ ಎಂದು ಭಾವಿಸಬಾರದು. ಅನ್ವಯಿಸುವ ನಿಯಮಗಳು ಮತ್ತು ವಿನಾಯಿತಿಗಳ ಬಗ್ಗೆ ಬ್ಯಾಂಕ್ನಿಂದ ಖಚಿತಪಡಿಸಿಕೊಳ್ಳಬೇಕು.
ದೀರ್ಘಕಾಲದಿಂದ ಬಳಕೆಯಾಗದ ಬ್ಯಾಂಕ್ ಖಾತೆಗಳು ವಂಚನೆ ಮತ್ತು ಸೈಬರ್ ಅಪರಾಧಗಳಿಗೆ ದುರುಪಯೋಗವಾಗುವ ಅಪಾಯವಿದೆ. ಇಂತಹ ಅಪಾಯಗಳನ್ನು ತಗ್ಗಿಸಲು ಗ್ರಾಹಕರ ಹಣಕಾಸಿನ ಸುರಕ್ಷತೆಯನ್ನು ಹೆಚ್ಚಿಸುವುದಕ್ಕಾಗಿ ಹಾಗೂ ಬ್ಯಾಂಕಿಂಗ್ ದಾಖಲೆಗಳನ್ನು ಸರಿಯಾಗಿ ನಿರ್ವಹಿಸುವ ಕಾರಣಕ್ಕೆ ಇಂತಹ ಕ್ರಮ ಕೈಗೊಳ್ಳಲಾಗುತ್ತಿದೆ ಎನ್ನಲಾಗಿದೆ.
ವಿಶೇಷವಾಗಿ, ಯಾವುದೇ ವಹಿವಾಟು ನಡೆಯದ ಮತ್ತು ಶೂನ್ಯ ಬ್ಯಾಲೆನ್ಸ್ ಹೊಂದಿರುವ ಖಾತೆಗಳ ಬಗ್ಗೆ ಗ್ರಾಹಕರು ಹೆಚ್ಚಿನ ಗಮನ ಹರಿಸಬೇಕು.
2026ರ ನವೆಂಬರ್ 10ರ ಗಡುವು ನೀಡಲಾಗಿದ್ದು, ತಮ್ಮ ಖಾತೆಯನ್ನು ಮುಂದುವರಿಸಲು ಬಯಸುವ ಗ್ರಾಹಕರು ಈ ದಿನಾಂಕದೊಳಗೆ ಸಮೀಪದ PNB ಶಾಖೆಯನ್ನು ಸಂಪರ್ಕಿಸಿ, ಖಾತೆಯ ಸ್ಥಿತಿ ಮತ್ತು ಅನ್ವಯಿಸುವ ನಿಯಮಗಳ ಬಗ್ಗೆ ಮಾಹಿತಿ ಪಡೆಯುವುದು ಉತ್ತಮ
ಅಗತ್ಯವಿದ್ದರೆ ಬ್ಯಾಂಕ್ ಸೂಚಿಸುವ KYC ಪ್ರಕ್ರಿಯೆಯನ್ನು ಪೂರ್ಣಗೊಳಿಸಿ, ಖಾತೆಯನ್ನು ಸಕ್ರಿಯಗೊಳಿಸಿಕೊಳ್ಳಬಹುದು. ಆದರೆ ನವೆಂಬರ್ 10ರ ಗಡುವು ಮತ್ತು ಖಾತೆ ಮುಚ್ಚುವಿಕೆಯ ಷರತ್ತುಗಳನ್ನು ಅಧಿಕೃತ ಪ್ರಕಟಣೆಯ ಮೂಲಕ ಖಚಿತಪಡಿಸಿಕೊಳ್ಳಬೇಕು ಎಂದು ವರದಿ ತಿಳಿಸಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ



