*ಡಾ.ರಾಜ್ ಕುಮಾರ್ ಸಂಬಂಧಿ ಮನೆ ಮುಂದೆ ಸ್ಫೋಟ ಪ್ರಕರಣಕ್ಕೆ ಪೊಲೀಸರ ಸ್ಪಷ್ಟನೆ*: *ಐವರು ವಶಕ್ಕೆ*

ಪ್ರಗತಿವಾಹಿನಿ ಸುದ್ದಿ: ತಮಿಳುನಾಡಿನ ಗಾಜನೂರಿನಲ್ಲಿರುವ ವರನಟ ಡಾ. ರಾಜ್ಕುಮಾರ್ ಅವರ ಸಂಬಂಧಿ ಮನೆಯಲ್ಲಿ ರಾತ್ರಿ 10.22ರ ವೇಳೆಗೆ ನಿಗೂಢ ಸ್ಫೋಟ ಸಂಭವಿಸಿದ್ದು, ಘಟನೆಯಲ್ಲಿ ಮನೆಯ ಗಾಜು ಪುಡಿ ಪುಡಿಯಾಗಿವೆ. ಸ್ಥಳಕ್ಕೆ ತಮಿಳುನಾಡಿನ ತಾಳವಾಡಿ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ.
ದೀಪಾವಳಿ ಹಿನ್ನೆಲೆ ಪಟಾಕಿಯಿಂದ ಈ ಸ್ಫೋಟ ಆಗಿರಬಹುದೆಂದು ಮೊದಲು ಅನುಮಾನವಿತ್ತಾದರೂ, ಸ್ಫೋಟದ ತೀವ್ರತೆ ಗಮನಿಸಿದಾಗ ಕಚ್ಚಾ ಬಾಂಬ್ನಿಂದ ಸ್ಫೋಟ ಆಗಿರುವ ಶಂಕೆ ವ್ಯಕ್ತವಾಗಿದೆ. ಹೀಗಾಗಿ ಸ್ಫೋಟಕದ ಮಾದರಿಗಳನ್ನು ಸಂಗ್ರಹಿಸಿ ತನಿಖೆ ನಡೆಸಲಾಗುತ್ತಿದೆ.
ಈ ನಡುವೆ ಪೊಲೀಸರು ಮನೆ ಮುಂದೆ ಓಡಾಡುತ್ತಿದ್ದ ಐವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಅಲ್ಲದೇ ಸ್ಫೋಟಗೊಂಡಿದ್ದು, ಪಟಾಕಿ. ಯಾವುದೇ ಕಚ್ಚಾಅ ಬಾಂಬ್ ಅಥವಾ ಇನ್ನ್ಯಾವುದೇ ಸ್ಫಟಕವಲ್ಲ ಎಂಬುದನ್ನು ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ಘಟನೆ ಬಗ್ಗೆ ಮಾಹಿತಿ ನೀಡಿರುವ ರಾಜ್ಕುಮಾರ್ ತಂಗಿ ಮೊಮ್ಮಗಳು ಮನೋಜ್ಞ, ದೇವರ ದಯೆಯಿಂದ ಯಾರಿಗೂ ಪ್ರಾಣಾಪಾಯ ಆಗಿಲ್ಲ. ಸ್ಫೋಟದ ಶಬ್ದ ಕೇಳಿ ಹೊರ ಬಂದ ಕೂಡಲೇ ಇಬ್ಬರು ಓಡಿ ಹೋಗಿರೋದು ಕಂಡುಬಂದಿದೆ. ನಾವು ಕೂಡ ಅವರನ್ನು ಫಾಲೋ ಮಾಡಿ ವಿಡಿಯೋ ಮಾಡಿದ್ದೇವೆ. ಆ ಹುಡುಗರು ನಮ್ಮ ಊರಿನವರೇ ಎಂದವರು ತಿಳಿಸಿದ್ದಾರೆ. ಒಟ್ಟು ಆರು ಜನರು ಪರಾರಿಯಾಗಿರುವ ಮಾಹಿತಿ ಇದೆ ಎನ್ನಲಾಗಿದೆ.
ಇದೀಗ ಪ್ರಕರಣ ಸಂಬಂಧ ಐವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.




