Belagavi NewsBelgaum NewsKannada NewsKarnataka News

*ನ.14ರಂದು ಬೆಳಗಾವಿ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಮೂರನೇ ತ್ರೈಮಾಸಿಕ ಹಾಗೂ ತುರ್ತು ನಿರ್ವಹಣಾ ಕಾಮಗಾರಿ ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ನವೆಂಬರ್ 14ರಂದು ಬೆಳಗಾವಿ ಗ್ರಾಮೀಣ ಭಾಗದ ಹಲವು ಗ್ರಾಮಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.

ಶನಿವಾರ ಬೆಳಿಗ್ಗೆ 9ರಿಂದ ಸಂಜೆ 5ರವರೆಗೆ 110 ಕೆ.ವಿ. ಕೊಡಚವಾಡ ವಿದ್ಯುತ್ ಉಪಕೇಂದ್ರದಿಂದ ಸರಬರಾಜಾಗುವ ಪಾರಿಶ್ವಾಡ, ಹಿರೇಮುನವಳ್ಳಿ, ಜಕನೂರ, ಚಿಕ್ಕಹಟ್ಟಿಹೊಳಿ, ಗಾಡಿಕೊಪ್ಪ, ಹಿರೇಹಟ್ಟಿಹೊಳಿ, ಚಿಕ್ಕದಿನಕೊಪ್ಪ, ಕಗ್ಗಣಗಿ, ಬಳಕಿ, ಅವರೊಳ್ಳಿ, ದೇಮಿನಕೊಪ್ಪ, ವಡ್ಡಬೈಲ, ತೋಪಿನಕಟ್ಟಿ, ಬಿದರಭಾವಿ, ಲೋಕೊಳ್ಳಿ, ದೊಡ್ಡಹೊಸೂರ, ಗನೇಬೈಲ, ದೇವಲತ್ತಿ, ಕಮಶಿನಕೊಪ್ಪ, ಜೈನಕೊಪ್ಪ, ಕೊಡಚವಾಡ, ಕಾರಲಗಾ, ಹೆಬ್ಬಾಳಹಟ್ಟಿ, ಕೌಂದಲ, ಝಾಡನಾವಗಾ, ಕೊಂಕಣ ನಾವಗಾ, ಕರಂಬಳ, ಲಾಲವಾಡಿ, ಹೆಬ್ಬಾಳ, ನಂದಗಡ, ಕಸಬಾ ನಂದಗಡ ಹಾಗೂ ಶಿವೊಳ್ಳಿ ಮತ್ತು ಚಾಪಗಾಂವ ಗ್ರಾಮಗಳಲ್ಲಿ ವಿದ್ಯುತ್ ಪೂರೈಕೆ ಸ್ಥಗಿತಗೊಳ್ಳಲಿದೆ.

ಇದರೊಂದಿಗೆ ಈ ಗ್ರಾಮಗಳ ವ್ಯಾಪ್ತಿಯ ನೀರಾವರಿ ಪಂಪ್‌ಸೆಟ್‌ಗಳಿಗೂ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಹಾಗೂ ರೈತರು ಸಹಕರಿಸುವಂತೆ ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿಯ ಬೆಳಗಾವಿ ಗ್ರಾಮೀಣ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಖಾನಾಪೂರ ಭಾಗದಲ್ಲಿ ವಿದ್ಯುತ್‌ ಸರಬರಾಜಿನಲ್ಲಿ ವ್ಯತ್ಯಯ

ಕ.ವಿ.ಪ್ರ.ನಿ.ನಿ. ವತಿಯಿಂದ ಮೂರನೇಯ ತ್ರೈಮಾಸಿಕ ಹಾಗೂ ತುರ್ತು ನಿರ್ವಹಣಾ ಕಾರ್ಯಗಳನ್ನು ಕೈಗೊಳ್ಳುತ್ತಿರುವುದರಿಂದ ನ.14(ಶನಿವಾರ)ರಂದು ಬೆಳಿಗ್ಗೆ 9 ಘಂಟೆಯಿಂದ ಸಾಯಂಕಾಲ 5 ಘಂಟೆಯವರೆಗೆ 110 ಕೆ.ವಿ. ಖಾನಾಪೂರ ಉಪಕೇಂದ್ರದಿಂದ ಸರಬರಾಜು ಆಗುವ ಲೈಲಾ ಶುಗರ ಕಾರ್ಖಾನೆ, ದೇವಲತ್ತಿ, ಬಿದರಭಾವಿ, ಭಂಡಾರಗಾಳಿ, ಗರ್ಲಗುಂಜಿ, ತೋಪಿನಕಟ್ಟಿ, ಬೋರಗಾಂವ, ನಿಡಗಲ, ದೊಡ್ಡಹೊಸೂರ, ಸಣ್ಣಹೊಸೂರ, ಕರಂಬಳ, ಜಳಗಾ, ಕುಪ್ಪಟಗಿರಿ, ಲೋಕೋಳ್ಳಿ, ಲಕ್ಕೇಬೈಲ, ಯಡೋಗಾ, ಬಳೋಗಾ, ಜೈನಕೊಪ್ಪ, ಗಾಂಧಿನಗರ, ಹಲಕರ್ಣಿ, ಕೋರ್ಟ ಪ್ರದೇಶ, ಕೈಗಾರಿಕಾ ಪ್ರದೇಶ, ಬಾಚೋಳ್ಳಿ, ಕೌಂದಲ, ಝಾಡನಾವಗಾ, ಲಾಲವಾಡಿ, ಹೆಬ್ಬಾಳ, ನಂದಗಡ, ಕಸಬಾ ನಂದಗಡ, ಕಾರಲಗಾ, ಶಿವೊಳ್ಳಿ ಹಾಗೂ ಚಾಪಗಾಂವ ಗ್ರಾಮಗಳಿಗೆ ಹಾಗೂ ಸದರಿ ಗ್ರಾಮಗಳ ನೀರಾವರಿ ಪಂಪ್‌ಸೆಟ್‌ಗಳ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

ಅದೇ ರೀತಿಯಾಗಿ 33ಕೆ.ವಿ. ಲೋಂಡಾ ಹಾಗೂ ಖಾನಾಪೂರ ಉಪಕೇಂದ್ರದಿಂದ ಸರಬರಾಜು ಆಗುವ ನಾಗರಗಾಳಿ, ನಾಗರಗಾಳಿ ರೇಲ್ವೆ ಸ್ಟೇಶನ್, ಮುಂಡವಾಡ, ಕುಂಬರ್ಡಾ, ತಾರವಾಡ, ಲೋಂಡಾ, ಲೋಂಡಾ ರೇಲ್ವೆ ಸ್ಟೇಶನ್, ಗುಂಜಿ, ಮೋಹಿಶೇಟ, ವಾಟ್ರಿ, ಭಾಲ್ಕೆ ಬಿ.ಕೆ, ಭಾಲ್ಕೆ ಕೆ.ಎಚ್. ಶಿಂದೋಳ್ಳಿ, ಹೊನ್ನಲ, ಸಾವರಗಾಳಿ, ಅಂಬೇವಾಡಿ, ತಿವೊಳ್ಳಿ, ಡೋಕೆಗಾಳಿ, ಖಾನಾಪೂರ ಪಟ್ಟಣ, ಶಿವಾಜಿ ನಗರ, ರುಮೇವಾಡಿ,

ಓತೋಳ್ಳಿ, ಮೊದೇಕೊಪ್ಪ, ನಾಗುರ್ಡಾ, ರಾಮಗುರವಾಡಿ, ಅಂಬೋಳಿ, ಹರಸನವಾಡಿ, ಅಸೋಗಾ, ನೇರಸಾ, ಅಶೋಕ ನಗರ, ಮಂತುರ್ಗಾ, ಶೇಡೇಗಾಳಿ ಹಾಗೂ ಹೆಮ್ಮಡಗಾ ಪ್ರದೇಶಗಳಿಗೆ ಹಾಗೂ ಸದರಿ ಗ್ರಾಮಗಳ ನೀರಾವರಿ ಪಂಪ್‌ಸೆಟ್‌ಗಳ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಹು.ವಿ.ಸ.ಕಂ.ನಿ. ಕಾ ಮತ್ತು ಪಾ ಬೆಳಗಾವಿ ಗ್ರಾಮೀಣ ವಿಭಾಗದ ಕಾರ್ಯನಿರ್ವಾಹಕ ಇಂಜಿನೀಯರರು(ವಿ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸುವರ್ಣಸೌಧದಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ

ಕ.ವಿ.ಪ್ರ.ನಿ.ನಿ. ವತಿಯಿಂದ ಮೂರನೇಯ ತ್ರೈಮಾಸಿಕ ಹಾಗೂ ಇತರೆ ತುರ್ತು ನಿರ್ವಹಣಾ ಕಾರ್ಯಗಳನ್ನು ಕೈಗೊಳ್ಳುತ್ತಿರುವುದರಿಂದ ನ. 14(ಶನಿವಾರ)ರಂದು ಬೆಳಿಗ್ಗೆ 9 ಘಂಟೆಯಿಂದ ಸಾಯಂಕಾಲ 4 ಘಂಟೆಯ ವರೆಗೆ 110 ಕೆ.ವಿ. ಸುವರ್ಣ ಸೌಧ ಉಪಕೇಂದ್ರದಿಂದ ವಿತರಣೆಯಾಗುವ ಕೊಂಡಸಕೊಪ್ಪ, ಹಲಗಾ, ಬಸ್ತವಾಡ, ಶಗನಮಟ್ಟಿ, ಮಾಸ್ತಮರಡಿ, ಬಸರಿಕಟ್ಟಿ, ಶಿಂಧೋಳ್ಳಿ, ಮುತಗಾ, ಶ್ರೀರಾಮ ಕಾಲನಿ, ಸಾರಿಗೆ ನಗರ, ಮಹಾಲಕ್ಷ್ಮೀ ಪುರಂ, ಸಾಯಿ ನಗರ, ಗೋಕುಲ ನಗರ, ಭರತೇಶ ಕಾಲೇಜ, ಶಿಂಧೋಳ್ಳಿ ಕ್ರಾಸ್, ನಿಲಜಿ ಕ್ರಾಸ್, ಕಮಕಾರಟ್ಟಿ, ಬಡಕೊಳ್ಳಮಠ, ಕೋಳಿಕೊಪ್ಪ ಗ್ರಾಮಗಳಿಗೆ ಹಾಗೂ ಸದರಿ ಗ್ರಾಮಗಳ ನೀರಾವರಿ ಪಂಪ್‌ಸೆಟ್‌ಗಳ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಹು.ವಿ.ಸ.ಕಂ.ನಿ. ಕಾ ಮತ್ತು ಪಾ ಬೆಳಗಾವಿ ಗ್ರಾಮೀಣ ವಿಭಾಗದ ಕಾರ್ಯನಿರ್ವಾಹಕ ಇಂಜಿನೀಯರರು(ವಿ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ

ಕ.ವಿ.ಪ್ರ.ನಿ.ನಿ ವತಿಯಿಂದ ಮೂರನೇಯ ತ್ರೈಮಾಸಿಕ ಹಾಗೂ ಇತರೆ ತುರ್ತು ನಿರ್ವಹಣಾ ಕಾರ್ಯಗಳನ್ನು ಕೈಗೊಳ್ಳುತ್ತಿರುವುದರಿಂದ ನ. 14(ಶನಿವಾರ)ರಂದು ಬೆಳಿಗ್ಗೆ 9 ಘಂಟೆಯಿಂದ ಸಾಯಂಕಾಲ 5 ಘಂಟೆಯ ವರೆಗೆ 110 ಕೆ ವಿ ಸುವರ್ಣ ಸೌಧ ಉಪಕೇಂದ್ರದಿಂದ ವಿತರಣೆಯಾಗುವ (ಬಸವೇಶ್ವರ ಸರ್ಕಲ್) ನಾವಿ ಗಲ್ಲಿ ಗಣೇಶಪೂರ ಗಲ್ಲಿ, ಗಡೆ ಮಾರ್ಗ, ಬಸವನ ಗಲ್ಲಿ, ಪವಾರ ಗಲ್ಲಿ, ಸರಾಫ ಗಲ್ಲಿ, ಖಡೆ ಬಜಾರ, (ಹರಿಕಾಕಾ ಕಂಪೌಂಡ) ಮಾರುತಿ ನಗರ, ಹರಿಕಾಕಾ ಕಂಪೌಂಡ, ಎಸ್ ಸಿ ಮೋಟಾರ್, ಗೋಕುಲ ಗಲ್ಲಿ, ಜೈ ಕಿಸಾನ ಭಾಜಿ ಮಾರ್ಕೆಟ್, (ಯಡಿಯುರಪ್ಪಾ ರಸ್ತೆ) ಸಾಯಿ ಕಾಲನಿ, ಯಡಿಯುರಪ್ಪಾ ಮಾರ್ಗ, ಹಲಗಾ ರಸ್ತೆ, ಬಜಾರ ಗಲ್ಲಿ, ಖಾಸಬಾಗ ಬಸವನ ಗಲ್ಲಿ, ರಾಘವೇಂದ್ರ ಕಾಲೋನಿ, ನಾಗೇಂದ್ರ ಕಾಲೋನಿ ಪ್ರದೇಶದಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಹು.ವಿ.ಸ.ಕಂ.ನಿ. ಕಾ ಮತ್ತು ಪಾ ಬೆಳಗಾವಿ ನಗರ ವಿಭಾಗದ ಕಾರ್ಯನಿರ್ವಾಹಕ ಇಂಜಿನೀಯರರು(ವಿ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button