Kannada NewsLatestWorld

*ಭೀಕರ ಸರಣಿ ಅಪಘಾತ*: *ಭಾರತೀಯರು ಸೇರಿ 14 ಜನರು ಸಾವು*

ಪ್ರಗತಿವಾಹಿನಿ ಸುದ್ದಿ: ಸರಣಿ ಅಪಘಾತದಲ್ಲಿ ಭಾರತೀಯರು ಸೇರಿ 14 ಜನರು ಸಾವನ್ನಪ್ಪಿರುವ ಘಟನೆ ಯುಎಇಯ ಫುಜೈರಾ ಎಮಿರೇಟ್‌ನಲ್ಲಿ ನಡೆದಿದೆ.

ಟ್ರಕ್ ವೊಂದು ನಿಯಂತ್ರಣ ತಪ್ಪಿ, 23 ವಾಹನಗಳಿಗೆ ಡಿಕ್ಕಿ ಹೊಡೆದಿದೆ. ಅಪಘಾತದ ಬಳಿಕ ಟ್ರಕ್ ಸೇರಿದಂತೆ ಹಲವು ವಾಹನಗಳಿಗೆ ಬೆಂಕಿ ಹೊತ್ತಿಕೊಂಡಿದೆ. ಇದರಿಂದ 14 ಮಂದಿ ಸಾವನ್ನಪ್ಪಿದ್ದಾರೆ. ಈ ಅಪಘಾತದಲ್ಲಿ 30 ಜನ ಗಾಯಗೊಂಡಿದ್ದಾರೆ. ಮೃತರಲ್ಲಿ ಭಾರತೀಯ ಪ್ರಜೆಗಳೂ ಸೇರಿರುವುದು ದೃಢಪಟ್ಟಿದೆ.

ಅಪಘಾತದಲ್ಲಿ 5 ಟ್ರಕ್‌ಗಳು, 18 ಕಾರುಗಳಿಗೆ ಹಾನಿಯಾಗಿದೆ. ನಿಧಾನಗತಿಯ ಸಂಚಾರದಿಂದ ರಸ್ತೆ ಮೇಲೆ ನಿಂತಿದ್ದ ವಾಹನಗಳಿಗೆ ಟ್ರಕ್‌ ಬಂದು ಡಿಕ್ಕಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗಾಯಾಳುಗಳ ಪೈಕಿ 15 ಮಂದಿ ಚಿಕಿತ್ಸೆ ಬಳಿಕ ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ. ಉಳಿದ 15 ಮಂದಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಮೃತರ ಗುರುತು ಪತ್ತೆಗಾಗಿ ಅಧಿಕಾರಿಗಳು ಡಿಎನ್‌ಎ ಪರೀಕ್ಷೆ ನಡೆಸುತ್ತಿದ್ದಾರೆ. ದುಬೈನಲ್ಲಿರುವ ಭಾರತೀಯ ರಾಯಭಾರ ಕಚೇರಿಯಿಂದ ಮೃತರ ಕುಟುಂಬಗಳಿಗೆ ನೆರವು ನೀಡಲಾಗುತ್ತಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button