CrimeKarnataka NewsLatestNational

*ಹಬ್ಬಕ್ಕೆಂದು ಬಂದು ಸ್ನೇಹಿತನ ಜೊತೆ ಹೋಗಿದ್ದ ಇಂಡಿಗೋ ಉದ್ಯೋಗಿ ಶವವಾಗಿ ಪತ್ತೆ*

ಪ್ರಗತಿವಾಹಿನಿ ಸುದ್ದಿ: ಹಬ್ಬಕ್ಕೆ ಊರುಗೆಂದು ಹೋಗಿದ್ದ ಇಂಡೀಗೋ ಮಹಿಳಾ ಉದ್ಯೋಗಿ ರಕ್ತಸಿಕ್ತ ರೀತಿಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದೆ.

ದೀಪಾವಳಿ ಹಬ್ಬಕ್ಕೆಂದು ಮನೆಗೆ ಬಂದಿದ್ದ 35 ವರ್ಷದ ಇಂಡಿಗೋ ಉದ್ಯೋಗಿ ವರ್ಷಾ ತುರ್ಕರ್ ಇದೀಗ ಶವವಾಗಿ ಪತ್ತೆಯಾಗಿದ್ದು, ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ.

ಮಹಾರಾಷ್ಟ್ರದ ಗೊಂಡಿಯಾ ಜಿಲ್ಲೆಯ ಕಾಡಿನಲ್ಲಿ ವರ್ಷಾ ಶವ ಪತ್ತೆಯಾಗಿದೆ. ಪುಣೆ ವಿಮಾನ ನಿಲ್ದಾಣದ ಇಂಡಿಗೋ ಟಿಕೆಟ್ ಕೌಂಟರ್‌ನಲ್ಲಿ ಕೆಲಸ ಮಾಡುತ್ತಿದ್ದ ವರ್ಷಾ, ತನ್ನ ಎರಡೂವರೆ ವರ್ಷದ ಮಗಳೊಂದಿಗೆ ದೀಪಾವಳಿ ಆಚರಿಸಲು ಮಧ್ಯಪ್ರದೇಶದ ಬಾಲಘಾಟ್ ಜಿಲ್ಲೆಯಲ್ಲಿರುವ ತನ್ನ ತಾಯಿಯ ಮನೆಗೆ ಪ್ರಯಾಣ ಬೆಳೆಸಿದ್ದರು.

ವರ್ಷಾ 2024 ರಲ್ಲಿ ವಿವಾಹವಾಗಿದ್ದರು. ಅವರ ಪತಿ ಪ್ರಸ್ತುತ ಇಂದೋರ್‌ನಲ್ಲಿ ವಾಸಿಸುತ್ತಿದ್ದಾರೆ. ಮೃತದೇಹ ಪತ್ತೆಯಾದ ಬೊಂಡ್ರಾನಿ ಅರಣ್ಯ ಪ್ರದೇಶವು ನೆರೆಯ ಗೊಂಡಿಯಾ ಜಿಲ್ಲೆಯಲ್ಲಿದ್ದು, ಮಹಾರಾಷ್ಟ್ರ-ಮಧ್ಯಪ್ರದೇಶ ಗಡಿಗೆ ಹತ್ತಿರದಲ್ಲಿದೆ.

ವರ್ಷಾ ಶನಿವಾರ ಸಂಜೆ 4 ಗಂಟೆ ಸುಮಾರಿಗೆ ಮನೆಯಿಂದ ಹೊರಟು ತನ್ನ ಸ್ನೇಹಿತ ನಿತೇಶ್ ಅಗರ್ವಾಲ್ ಜೊತೆ ವೈನ್‌ಗಂಗಾ ನದಿಯ ದಡಕ್ಕೆ ಹೋಗಿದ್ದರು. ಬಳಿಕ ಅಗರ್ವಾಲ್‌ ಸಂಬಂಧಿಕರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಮಹಾರಾಷ್ಟ್ರ-ಮಧ್ಯಪ್ರದೇಶ ಗಡಿಯ ಬಳಿಯ ಬಾಂಡ್ರಾನಿ ಅರಣ್ಯ ಪ್ರದೇಶಕ್ಕೆ ಸಂಬಂಧಿಕರು ತಲುಪಿದಾಗ, ವರ್ಷಾಳ ದೇಹದಲ್ಲಿ ತೀವ್ರ ರಕ್ತಸ್ರಾವವಾಗುತ್ತಿರುವುದು ಕಂಡುಬಂದಿತು. ಅವರನ್ನು ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಯಿತು. ಅಲ್ಲಿ ವೈದ್ಯರು ರಾತ್ರಿ 7 ಗಂಟೆ ಸುಮಾರಿಗೆ ಅವರು ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ.

ವರ್ಷಾ ಮೇಲೆ ಹರಿತವಾದ ಆಯುಧದಿಂದ ಹಲ್ಲೆ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಗುರುತಿಸಲಾಗದ ಮುಸುಕುಧಾರಿ ವ್ಯಕ್ತಿಗಳು ತಮ್ಮ ಮೇಲೆ ದಾಳಿ ಮಾಡಿ ದರೋಡೆ ಮಾಡಿದ್ದಾರೆ ಎಂದು ಅಗರ್ವಾಲ್ ಆರೋಪಿಸಿದ್ದಾರೆ.

ತೀವ್ರವಾದ ಹಲ್ಲೆ, ದಾಳಿ ನಡೆದಿದೆ ಎಂದು ಹೇಳಿಕೊಂಡರೂ ಅಗರ್ವಾಲ್‌ಗೆ ಯಾವುದೇ ಗಾಯಗಳಾಗಿಲ್ಲ ಎಂದು ತಿಳಿದುಬಂದ ಬಳಿಕ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಸ್ನೇಹಿತ ಅಗರ್ವಾಲ್‌ನನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.

Related Articles

Back to top button