Karnataka NewsLatestNationalTravel

*ಸತ್ಯಸಾಯಿ ಬಾಬಾ ದರ್ಶನಕ್ಕೆ ಹೋಗುವ ಭಕ್ತರಿಗೆ ಗುಡ್ ನ್ಯೂಸ್*: *ವಿಶೇಷ ಎಕ್ಸ್ ಪ್ರೆಸ್ ರೈಲು ವ್ಯವಸ್ಥೆ*

ಪ್ರಗತಿವಾಹಿನಿ ಸುದ್ದಿ: ಭಗವಾನ್ ಶ್ರೀ ಸತ್ಯಸಾಯಿ ಬಾಬಾ ಅವರ 101ನೇ ಜನ್ಮದಿನೋತ್ಸವದ ಹಿನ್ನೆಲೆಯಲ್ಲಿ ಆಂಧ್ರಪ್ರದೇಶದ ಪ್ರಶಾಂತಿ ನಿಲಯಂ (ಪುಟ್ಟಪರ್ತಿ) ಹಾಗೂ ಬೆಂಗಳೂರು ಕಡೆಗೆ ಆಗಮಿಸುವ ಭಕ್ತರ ಹಾಗೂ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿಯಂತ್ರಿಸಲು ನೈಋತ್ಯ ರೈಲ್ವೆ ವತಿಯಿಂದ ಹಲವು ವಿಶೇಷ ಎಕ್ಸ್‌ಪ್ರೆಸ್ ಹಾಗೂ ಮೆಮು ವಿಶೇಷ ರೈಲುಗಳನ್ನು ಘೋಷಿಸಲಾಗಿದೆ.

ದೇಶದ ವಿವಿಧ ಪ್ರಮುಖ ನಗರಗಳಿಂದ ಪುಟ್ಟಪರ್ತಿ ಮತ್ತು ಬೆಂಗಳೂರು ನಡುವೆ ಈ ವಿಶೇಷ ರೈಲುಗಳು ಸಂಚರಿಸಲಿವೆ. ವಿಶೇಷ ರೈಲುಗಳ ವಿವರ ಹಾಗೂ ವೇಳಾಪಟ್ಟಿ ಈ ಕ್ರೆಳಗಿನಂತಿದೆ.

ರೈಲು ಸಂಖ್ಯೆ 08031 ಸಾಂತ್ರಗಾಚಿಯಿಂದ ನವೆಂಬರ್ 17 ಮತ್ತು 24ರಂದು (ಮಂಗಳವಾರ) ಮಧ್ಯಾಹ್ನ 12:40ಕ್ಕೆ ಹೊರಟು, ಮರುದಿನ ರಾತ್ರಿ 21:30ಕ್ಕೆ ಶ್ರೀ ಸತ್ಯಸಾಯಿ ಪ್ರಶಾಂತಿ ನಿಲಯಂ ತಲುಪಲಿದೆ. ಮರುಮಾರ್ಗದಲ್ಲಿ ರೈಲು ಸಂಖ್ಯೆ 08032 ಪ್ರಶಾಂತಿ ನಿಲಯದಿಂದ ನವೆಂಬರ್ 18 ಮತ್ತು 25ರಂದು (ಬುಧವಾರ) ರಾತ್ರಿ 23:00ಕ್ಕೆ ಹೊರಟು, ಶುಕ್ರವಾರ ಬೆಳಿಗ್ಗೆ 08:00ಕ್ಕೆ ಸಾಂತ್ರಗಾಚಿ ತಲುಪಲಿದೆ. ಖರಗ್‌ಪುರ, ಬಾಲೇಶ್ವರ, ಭದ್ರಕ್, ಕಟಕ್, ಭುವನೇಶ್ವರ, ಬ್ರಹ್ಮಪುರ, ಪಾಲಾಸಾ, ವಿಜಯನಗರಂ, ದುವ್ವಾಡ, ಸಮಲ್ಕೋಟ್, ರಾಜಮಂಡ್ರಿ, ವಿಜಯವಾಡ, ಗುಂಟೂರು, ನಂದ್ಯಾಲ್, ಧೋನ್, ಗೂಟಿ ಮತ್ತು ಧರ್ಮಾವರಂ ನಿಲ್ದಾಣಗಳಲ್ಲಿ ಎರಡೂ ದಿಕ್ಕುಗಳಲ್ಲಿ ನಿಲ್ಲಲಿದೆ.

ರೈಲು ಸಂಖ್ಯೆ 06525/06526 ಕೆಎಸ್‌ಆರ್ ಬೆಂಗಳೂರು–ಧರ್ಮಾವರಂ–ಕೆಎಸ್‌ಆರ್ ಬೆಂಗಳೂರು ಕಾಯ್ದಿರಿಸದ ಎಕ್ಸ್‌ಪ್ರೆಸ್ ವಿಶೇಷ ರೈಲು

ನವೆಂಬರ್ 20ರಿಂದ 26ರವರೆಗೆ ಪ್ರತಿದಿನ ಬೆಳಗ್ಗೆ 08:15ಕ್ಕೆ ಕೆಎಸ್‌ಆರ್ ಬೆಂಗಳೂರಿನಿಂದ ಹೊರಡುವ ರೈಲು ಸಂಖ್ಯೆ 06525, ಮಧ್ಯಾಹ್ನ 12:30ಕ್ಕೆ ಧರ್ಮಾವರಂ ತಲುಪಲಿದೆ. ವಾಪಾಸು ಮಾರ್ಗದಲ್ಲಿ ರೈಲು ಸಂಖ್ಯೆ 06526 ಧರ್ಮಾವರಂನಿಂದ ಮಧ್ಯಾಹ್ನ 13:20ಕ್ಕೆ ಹೊರಟು ಅದೇ ದಿನ ಸಂಜೆ 17:50ಕ್ಕೆ ಕೆಎಸ್‌ಆರ್ ಬೆಂಗಳೂರು ತಲುಪಲಿದೆ. ನವೆಂಬರ್ 20ರಿಂದ 26ರವರೆಗೆ ಪ್ರತಿದಿನ ಬೆಳಗ್ಗೆ 08:15ಕ್ಕೆ ಕೆಎಸ್‌ಆರ್ ಬೆಂಗಳೂರಿನಿಂದ ಹೊರಡುವ ರೈಲು ಸಂಖ್ಯೆ 06525, ಮಧ್ಯಾಹ್ನ 12:30ಕ್ಕೆ ಧರ್ಮಾವರಂ ತಲುಪಲಿದೆ. ವಾಪಾಸು ಮಾರ್ಗದಲ್ಲಿ ರೈಲು ಸಂಖ್ಯೆ 06526 ಧರ್ಮಾವರಂನಿಂದ ಮಧ್ಯಾಹ್ನ 13:20ಕ್ಕೆ ಹೊರಟು ಅದೇ ದಿನ ಸಂಜೆ 17:50ಕ್ಕೆ ಕೆಎಸ್‌ಆರ್ ಬೆಂಗಳೂರು ತಲುಪಲಿದೆ.

ರೈಲು ಸಂಖ್ಯೆ 08555/08556 ಶ್ರೀಕಾಕುಳಂ ರೋಡ್–ಯಶವಂತಪುರ–ಶ್ರೀಕಾಕುಳಂ ರೋಡ್ ಎಕ್ಸ್‌ಪ್ರೆಸ್ ವಿಶೇಷ ರೈಲು

ರೈಲು ಸಂಖ್ಯೆ 08555 ನವೆಂಬರ್ 20ರಂದು (ಶುಕ್ರವಾರ) ಶ್ರೀಕಾಕುಳಂ ರೋಡ್‌ನಿಂದ ಸಂಜೆ 16:00ಕ್ಕೆ ಹೊರಟು, ಶನಿವಾರ ಮಧ್ಯಾಹ್ನ 15:00ಕ್ಕೆ ಯಶವಂತಪುರ ತಲುಪಲಿದೆ. ವಾಪಾಸು ರೈಲು ಸಂಖ್ಯೆ 08556 ನವೆಂಬರ್ 24ರಂದು (ಮಂಗಳವಾರ) ಯಶವಂತಪುರದಿಂದ ಸಂಜೆ 17:00ಕ್ಕೆ ಹೊರಟು, ಬುಧವಾರ ಸಂಜೆ 17:15ಕ್ಕೆ ಶ್ರೀಕಾಕುಳಂ ರೋಡ್ ತಲುಪಲಿದೆ. ಚಿಪುರುಪಲ್ಲಿ, ವಿಜಯನಗರಂ, ಕೊತ್ತವಲಸ, ವಿಶಾಖಪಟ್ಟಣಂ, ದುವ್ವಾಡ, ಅನಕಾಪಲ್ಲಿ, ಎಲ್ಲಮಂಚಿಲಿ, ತುನಿ, ಸಮಲ್ಕೋಟ್, ರಾಜಮಂಡ್ರಿ, ತಡೆಪಲ್ಲಿಗುಡೆಂ, ಏಲೂರು, ವಿಜಯವಾಡ, ಗುಂಟೂರು, ನರಸಾರಾವೆಟ್, ದೊಣಕೊಂಡ, ಮಾರ್ಕಾಪುರ ರೋಡ್, ಕುಂಬುಮ್, ಗಿಡ್ಡಲೂರು, ನಂದ್ಯಾಲ್, ಧೋನ್, ಗುಂಟಕಲ್, ಅನಂತಪುರ, ಧರ್ಮಾವರಂ, ಶ್ರೀ ಸತ್ಯಸಾಯಿ ಪ್ರಶಾಂತಿ ನಿಲಯಂ ಮತ್ತು ಹಿಂದೂಪುರ ನಿಲ್ದಾಣಗಳಲ್ಲಿ ಎರಡೂ ದಿಕ್ಕುಗಳಲ್ಲಿ ನಿಲ್ಲಲಿದೆ.

ರೈಲು ಸಂಖ್ಯೆ 07246/07245 ಯಶವಂತಪುರ–ವಿಜಯವಾಡ–ಯಶವಂತಪುರ ವಿಶೇಷ ರೈಲು

ರೈಲು ಸಂಖ್ಯೆ 07246 ನವೆಂಬರ್ 21ರಂದು (ಶನಿವಾರ) ಯಶವಂತಪುರದಿಂದ ಸಂಜೆ 17:00ಕ್ಕೆ ಹೊರಟು, ಭಾನುವಾರ ಬೆಳಿಗ್ಗೆ 07:45ಕ್ಕೆ ವಿಜಯವಾಡ ತಲುಪಲಿದೆ. ವಾಪಾಸು ರೈಲು ಸಂಖ್ಯೆ 07245 ನವೆಂಬರ್ 23ರಂದು (ಸೋಮವಾರ) ರಾತ್ರಿ 23:50ಕ್ಕೆ ವಿಜಯವಾಡದಿಂದ ಹೊರಟು, ಮಂಗಳವಾರ ಮಧ್ಯಾಹ್ನ 15:00ಕ್ಕೆ ಯಶವಂತಪುರ ತಲುಪಲಿದೆ.

ರೈಲು ಸಂಖ್ಯೆ 56531/56532 ಯಶವಂತಪುರ–ಹಿಂದೂಪುರ–ಗುಂಟಕಲ್ ಪ್ಯಾಸೆಂಜರ್ ವಿಶೇಷ ರೈಲು

ನೈಋತ್ಯ ರೈಲ್ವೆಯು ಯಶವಂತಪುರ ಮತ್ತು ಹಿಂದೂಪುರ ನಡುವೆ ಸಂಚರಿಸುತ್ತಿದ್ದ ರೈಲು ಸಂಖ್ಯೆ 56531/56532 ಅನ್ನು ಗುಂಟಕಲ್ ವರೆಗೆ ತಾತ್ಕಾಲಿಕವಾಗಿ ವಿಸ್ತರಿಸಿದೆ. ನವೆಂಬರ್ 20ರಿಂದ 26ರವರೆಗೆ ಈ ರೈಲುಗಳು ಒಟ್ಟು 7 ಫೆರಿಗಳಂತೆ ಸಂಚರಿಸಲಿವೆ.

Related Articles

Back to top button