Film & EntertainmentKannada NewsLatestNational

*ನಟ ಸಲ್ಮಾನ್ ಖಾನ್ ಶ್ರದ್ಧಾ ಕಪೂರ್ ಗೆ ಕರೆ ಮಾಡಿ ಕ್ಷಮೆ ಕೇಳಿದ್ದೇಕೆ?*

ಪ್ರಗತಿವಾಹಿನಿ ಸುದ್ದಿ: ಬಾಲಿವುಡ್ ಭಾಯಿಜಾನ್ ಎಂದೇ ಖ್ಯಾತಿ ಪಡೆದಿರುವ ನಟ ಸಲ್ಮಾನ್ ಖಾನ್, ನಟಿ ಶ್ರದ್ಧಾ ಕಪೂರ್ ಗೆ ಕರೆ ಮಾಡಿ ಕ್ಷಮೆಯಾಚಿಸಿರುವ ಘಟನೆ ನಡೆದಿದೆ.

ಸಲ್ಮಾನ್ ಖಾನ್ ಹಲವು ಬಾರಿ ತಮ್ಮದೇ ಆಟಿಟ್ಯೂಡ್​ ಮೂಲಕ ಗಮನ ಸೆಳೆಯುತ್ತಾರೆ. ಇತ್ತೀಚೆಗಷ್ಟೆ ಸಲ್ಮಾನ್ ಖಾನ್, ಪಾಪರಾಡ್ಜಿಗಳ ವಿರುದ್ಧ ಗರಂ ಆಗಿದ್ದರು, ಬೇರೆ ನಟರಾಗಿದ್ದರೆ ಪಾಪರಾಟ್ಜಿಗಳು ಕ್ಯಾರೆ ಎನ್ನುತ್ತಿರಲಿಲ್ಲ, ಆದರೆ ಸಲ್ಮಾನ್ ಖಾನ್ ಅವರಿಗೆ ಖುದ್ದು ಪಾಪರಾಟ್ಜಿಗಳು ಒಟ್ಟಾಗಿ ಕ್ಷಮೆ ಕೇಳಿದರು. ಇದು ಬಾಲಿವುಡ್ ನಲ್ಲಿ ಅಚ್ಚರಿಗೂ ಕಾರಣವಾಗಿತ್ತು. ಇಂಥಹಾ ಸಲ್ಮಾನ್ ಖಾನ್ ಇದೀಗ ನಟಿ ಶ್ರದ್ಧಾ ಕಪೂರ್ ಅವರಿಗೆ ಕ್ಷಮೆ ಕೇಳಿದ್ದಾರೆ.

ಸಲ್ಮಾನ್ ಖಾನ್ ನಟನೆಯ ‘ಮಾತೃಭೂಮಿ: ಮೇ ವಾರ್ ರೆಸ್ಟ್ ಇನ್ ಪೀಸ್’ ಸಿನಿಮಾ ಡಿಸೆಂಬರ್ 4ಕ್ಕೆ ರಿಲೀಸ್ ಆಗುತ್ತಿದೆ. ಮತ್ತು ಅದೇ ದಿನ ಶ್ರದ್ಧಾ ಕಪೂರ್ ಅವರ ‘ಈಠಾ’ ಸಿನಿಮಾ ಸಹ ಬಿಡುಗಡೆ ಆಗುತ್ತಿದೆ. ಇದೇ ಕಾರಣಕ್ಕೆ ಸಲ್ಮಾನ್ ಖಾನ್​ ಅವರು ನಟಿ ಶ್ರದ್ಧಾ ಕಪೂರ್ ಬಳಿ ಕ್ಷಮೆ ಕೇಳಿದ್ದಾರೆ.

ತಮ್ಮ ‘ಮಾತೃಭೂಮಿ’ ಸಿನಿಮಾದ ಬಿಡುಗಡೆಯ ದಿನಾಂಕವನ್ನು ಘೋಷಿಸಿದಾಗ ಶ್ರದ್ಧಾ ಅವರ ಚಿತ್ರವೂ ಅದೇ ದಿನ ಬಿಡುಗಡೆಯಾಗುತ್ತಿದೆ ಎಂಬುದು ತಮಗೆ ತಿಳಿದಿರಲಿಲ್ಲ ಎಂದು ಸಲ್ಲು ಹೇಳಿದ್ದಾರೆ. ಈ ಘರ್ಷಣೆಯ ಬಗ್ಗೆ ಮೊದಲೇ ಗೊತ್ತಿದ್ದರೆ ಬೇರೆ ದಿನಾಂಕವನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದೆ ಎಂದು ಹೇಳಿರುವ ಅವರು, ಈ ಬಗ್ಗೆ ನಟಿ ಶ್ರದ್ಧಾ ಕಪೂರ್ ಅವರಿಗೆ ಕರೆ ಮಾಡಿ ಕ್ಷಮೆ ಕೋರಿದ್ದಾಗಿ ಹೇಳಿದ್ದಾರೆ.

‘ಮಾತೃಭೂಮಿ’ ಮತ್ತು ‘ಈಠಾ’ ಪರಸ್ಪರ ಸ್ಪರ್ಧೆಯಲ್ಲಿರುವ ಈ ಪರಿಸ್ಥಿತಿಯ ಬಗ್ಗೆ ತಮಗೆ ಬೇಸರವಿದೆ ಮತ್ತು ‘ಈಠಾ’ ಬಿಡುಗಡೆಯ ಬಗ್ಗೆ ಗೊತ್ತಿದ್ದರೆ ಅದೇ ದಿನಾಂಕವನ್ನು ಆರಿಸುತ್ತಿರಲಿಲ್ಲ ಎಂದಿದ್ದಾರೆ. ‘ನಾವು ಡಿಸೆಂಬರ್ 4ನೇ ತಾರೀಕನ್ನು ಘೋಷಿಸಿದಾಗ, ಶ್ರದ್ಧಾ ಸಿನಿಮಾ ಕೂಡ ಡಿಸೆಂಬರ್ 4 ರಂದು ಬರುತ್ತಿದೆ ಎಂಬುದು ನನಗೆ ಗೊತ್ತಿರಲಿಲ್ಲ. ಇದರ ಬಗ್ಗೆ ನನಗೆ ನಿಜವಾಗಿಯೂ ತುಂಬಾ ಬೇಸರವಿದೆ. ನನಗೆ ಮೊದಲೇ ಗೊತ್ತಿದ್ದರೆ, ನಾನು ಶ್ರದ್ಧಾ ಸಿನಿಮಾದ ಎದುರು ಸಿನಿಮಾ ರಿಲೀಸ್ ಮಾಡುತ್ತಿರಲಿಲ್ಲ. ನನಗೆ ವಿಷಯ ಗೊತ್ತಾದ ಬಳಿಕ ನಾನು ಅವರೊಂದಿಗೆ ಮಾತನಾಡಿದೆ. ಅವರಿಗೆ ಫೋನ್ ಮಾಡಿದೆ, ಆಗಿರುವ ತಪ್ಪಿಗೆ ಕ್ಷಮೆ ಕೇಳಿದೆ. ಏಕೆಂದರೆ, ನಾನು ಅವರ (ಶ್ರದ್ಧಾ ಕಪೂರ್) ಬೆಳವಣಿಗೆಯನ್ನು ಹತ್ತಿರದಿಂದ ನೋಡಿದ್ದೇನೆ. ಅವರ ಜೊತೆ ಮಾತನಾಡಿ, ‘ನನ್ನನ್ನು ನಿಜವಾಗಿಯೂ ಕ್ಷಮಿಸಿ, ನನಗೆ ಗೊತ್ತಿರಲಿಲ್ಲ’ ಎಂದು ಹೇಳಿದೆ” ಎಂದು ಸಲ್ಮಾನ್ ತಿಳಿಸಿದ್ದಾರೆ.

ಸಲ್ಮಾನ್ ಹೇಳುವ ಪ್ರಕಾರ, ಶ್ರದ್ಧಾ ಈ ಪರಿಸ್ಥಿತಿಯನ್ನು ಸೌಜನ್ಯದಿಂದ ಸ್ವೀಕರಿಸಿದ್ದು, ಬಾಕ್ಸ್ ಆಫೀಸ್‌ನಲ್ಲಿ ಎರಡೂ ಸಿನಿಮಾಗಳಿಗೂ ಅವಕಾಶವಿದೆ ಎಂದು ಧೈರ್ಯ ತುಂಬಿದ್ದಾರೆ. “ಇಲ್ಲ, ಇಲ್ಲ ಸರ್. ನಮ್ಮಿಬ್ಬರ ಸಿನಿಮಾಗಳೂ ಬರಲು ಸಾಕಷ್ಟು ಜಾಗವಿದೆ” ಎಂದು ಅವರು ಹೇಳಿದ್ದಾರೆ. ಅದಕ್ಕೆ ಸಲ್ಮಾನ್, “ಅವರು ತುಂಬಾ ಒಳ್ಳೆಯದು, ನನಗೆ ಸಂತೋಷವಾಗಿದೆ” ಎಂದು ಉತ್ತರಿಸಿದ್ದಾರೆ.

ಜನರು ‘ಈಠಾ’ ಸಿನಿಮಾವನ್ನು ನೋಡಬೇಕು ಎಂದೂ ಅವರು ಪ್ರೋತ್ಸಾಹಿಸಿದ್ದು, ಸಾರ್ವಜನಿಕ ಕಾರ್ಯಕ್ರಮದಲ್ಲೂ ಚಿತ್ರಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. “ಎಲ್ಲರೂ ಹೋಗಿ ಆ ಸಿನಿಮಾ ನೋಡಬೇಕು ಎಂದು ನಾನು ನಿಜವಾಗಿಯೂ ಭಾವಿಸುತ್ತೇನೆ” ಎಂದು ಅವರು ಹೇಳಿದ್ದಾರೆ. ಈ ಹಿಂದೆ ‘ಈಠಾ’ ಚಿತ್ರದ ಪೋಸ್ಟರ್ ಅನ್ನು ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡು, “ಈಠಾ ಚಿತ್ರಕ್ಕೆ ಆಲ್ ದಿ ಬೆಸ್ಟ್” ಎಂದು ತಂಡಕ್ಕೆ ಶುಭ ಹಾರೈಸಿದ್ದರು.

Related Articles

Back to top button