Kannada NewsKarnataka News

ಮಾಸ್ಕ್ ಮಾರಾಟದಲ್ಲಿ ಅಕ್ರಮ: ಔಷಧ ಅಂಗಡಿ ಮೇಲೆ ದಾಳಿ, ಕಾನೂನು ಕ್ರಮ

ಪ್ರಗತಿವಾಹಿನಿ ಸುದ್ದಿ, ಖಾನಾಪುರ – ಕೋವಿಡ್-19 ಸೊಂಕು ತಡೆಗಟ್ಟಲು ಬಳಸುವ ವೈಯಕ್ತಿಕ ಸುರಕ್ಷತಾ ಸಾಧನಗಳಾದ ಮಾಸ್ಕ್ ಮತ್ತು ಸ್ಯಾನಿಟರೈಸರ್ ಗಳನ್ನು ನಿಗದಿಗಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಅಂಗಡಿಗಳ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ಆದೇಶ ನೀಡಿದ ಹಿನ್ನೆಲೆಯಲ್ಲಿ ಖಾನಾಪುರದಲ್ಲಿ ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ, ಜಿಲ್ಲಾ ಔಷಧ ನಿಯಂತ್ರಕರು ಬೆಳಗಾವಿ, ತಾಲೂಕಾ ಆರೋಗ್ಯ ಇಲಾಖೆಯ ಅಧಿಕಾರಿಗಳು ಖಾನಾಪುರ ಪಟ್ಟಣದಲ್ಲಿ ದಾಳಿ ನಡೆಸಿ ಪರಿಶೀಲನೆ ನಡೆಸಿದರು.

ಈ ಸಂದರ್ಭದಲ್ಲಿ ಖಾನಾಪುರ-ಬೆಳಗಾವಿ ರಾಜ್ಯ ಹೆದ್ದಾರಿಯ ಮಧ್ಯೆ ಬರುವ ಕಾವೇರಿ ಹೊಟೇಲ್ ಬದಿಯಲ್ಲಿಯ ಧನ್ವಂತರಿ ಔಷಧಿ ಅಂಗಡಿ ಮೇಲೆ ದಾಳಿ ನಡೆಸಿ ನಿಗದಿತ ಬೆಲೆಗಿಂತ ಹೆಚ್ಚಿನ ದರದಲ್ಲಿ ಮಾಸ್ಕ್ ಮಾರಾಟ ಮಾಡುವ ಸಂದರ್ಭದಲ್ಲಿ ಇವರ ಮೇಲೆ ಕಾನೂನು ಕ್ರಮ ಜರುಗಿಸಿದ್ದಾರೆ.

ಅದರಂತೆ ಖಾನಾಪುರ ತಾಲೂಕಿನ ನಂದಗಡ, ಬೀಡಿ ಸೇರಿದಂತೆ ಇನ್ನಿತರ ಕಡೆಗಳಿಗೂ ‌ಹೋಗಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಖಾನಾಪುರ ತಾಲೂಕಾ ಆರೋಗ್ಯಾಧಿಕಾರಿ ಡಾ. ಸಂಜಿವ ನಾಂದ್ರೆ  ಇದರ ಕುರಿತು ಹೆಚ್ಚಿನ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ  ಖಾನಾಪುರ ಆಹಾರ ನಿರೀಕ್ಷಕ ಮಾರುತಿ ಚೋಟನ್ನವರ, ಆಹಾರ ಶಿರಸ್ತೇದಾರ ಉದಾನಶೆಟ್ಟಿ, ಸಹಾಯಕ ಜೌಷಧಿ ನಿಯಂತ್ರಕಿ ಸನಫರ್ ಜಾನ್, ಕಾನೂನು ಮಾಪನ ಶಾಸ್ತ್ರ ನಿರೀಕ್ಷಕರಾದ ಎಸ್ ‌ಡಿ ಮಜಗಾಂವಿ ಉಪಸ್ಥಿತರಿದ್ದರು.

 

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button