Kannada NewsKarnataka NewsLatest

ಕೃಷಿ ಹೊಂಡಕ್ಕೆ ಬಿದ್ದು ನಾಲ್ವರು ಕಂದಮ್ಮಗಳ ಸಾವು

ಪ್ರಗತಿವಾಹಿನಿ ಸುದ್ದಿ, ಗೋಕಾಕ – ತೋಟದಲ್ಲಿದ್ದ ಅಜ್ಜ -ಅಜ್ಜಿಯ ಮನೆಗೆ ಹೋಗುತ್ತಿದ್ದ ನಾಲ್ಕು ಕಂದಮ್ಮಗಳು ಕೃಷಿ ಹೊಂಡಕ್ಕೆ ಬಿದ್ದು ಸಾವನ್ನಪ್ಪಿವೆ.

ಗೋಕಾಕ ತಾಲೂಕಿನ ಅಜ್ಜಕಟ್ಟೆಯಲ್ಲಿ ಈ ಘಟನೆ ನಡೆದಿದೆ. ಒಂದೇ ತಾಯಿಯ ಮಕ್ಕಳಾದ ರಾಜಶ್ರೀ (2),  ಮಾಳಪ್ಪ(4), ತಾಯಮ್ಮ(5) ಮತ್ತು ಬಾಗವ್ವ(6) ಮೃತರು. ಇವರೆಲ್ಲ ಎಂದಿನಂತೆ ಮನೆಯಿಂದ ತಮ್ಮ ಅಜ್ಜಿಯ ಮನೆಗೆ ಹೋಗುವಾಗ ಕೃಷಿ ಹೊಂಡದಲ್ಲಿ ಬಿದ್ದು ಸಾವಿಗೀಡಾಗಿದ್ದಾರೆ.

Home add -Advt

ಅಜ್ಜಿ ನೀರು ತರಲು ಬಂದಾಗ ಮಕ್ಕಳ ಮೃತ ದೇಹಗಳು ಕಂಡಿವೆ. ಮಕ್ಕಳು ಹೇಗೆ ಬಿದ್ದರು ಎನ್ನುವುದು ನಿಗೂಢವಾಗಿದೆ.

ಗೋಕಾಕ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕರುಳ ಕುಡಿಗಳನ್ನು ಕಳೆದುಕೊಂಡ ತಾಯಿಯ ಆಕ್ರಂದನ ಮುಗಿಲುಮುಟ್ಟಿತ್ತು.

Related Articles

Back to top button